ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞರ ಸಂಖ್ಯೆ 100ಕ್ಕೆ ‘ಜಿಕೆಎನ್‌ ಏರೋಸ್ಪೇಸ್‌’

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟನ್‌ ಮೂಲದ ‘ಜಿಕೆಎನ್‌ ಏರೋಸ್ಪೇಸ್‌’ ಭಾರತ­ದಲ್ಲಿನ ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಬುಧವಾರ ಆರಂಭಿಸಿದೆ.

ಕಚೇರಿ ಉದ್ಘಾಟನೆ ನಂತರ ಸುದ್ದಿಗಾ ರರ ಜತೆ ಮಾತನಾಡಿದ ‘ಜಿಕೆಎನ್‌ ಏರೋಸ್ಪೇಸ್‌ ಇಂಡಿಯಾ’  ಪ್ರಧಾನ ವ್ಯವಸ್ಥಾಪಕ ಡೇವಿಡ್‌ ಓರ್ಥ್‌, ಬೆಂಗ ಳೂರು ಕಚೇರಿಯಲ್ಲಿ 70 ಮಂದಿ ತಂತ್ರ ಜ್ಞರಿದ್ದು, ವರ್ಷದೊಳಗೆ 100ಕ್ಕೆ ಹೆಚ್ಚಿಸ ಲಾಗುವುದು. ಇಲ್ಲಿ ವೈಮಾನಿಕ ಎಂಜಿನಿ ಯರಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿ ಸಂಶೋ ಧನೆ ಮತ್ತು ಅಭಿವೃದ್ಧಿ ಚಟುವಟಿಕೆ ನಡೆಯುತ್ತದೆ ಎಂದರು.

1993ರಲ್ಲಿ ಆರಂಭವಾದ ‘ಜಿಕೆಎನ್‌ ಏರೋಸ್ಪೇಸ್‌’ 9 ದೇಶ­ಗಳಲ್ಲಿ 30 ಘಟಕ ಮತ್ತು 11,300 ಸಿಬ್ಬಂ­ದಿಯನ್ನೂ ಹೊಂದಿದೆ.

ಎಂಜಿನ್‌ ಸ್ಟ್ರಕ್ಚರ್‌, ಏರ್‌ ಫ್ರೇಮ್‌ ಸೇರಿ­ದಂತೆ ನಾಲ್ಕು ಬಗೆ ಉತ್ಪನ್ನ ಗಳನ್ನು ವೈಮಾನಿಕ ಕ್ಷೇತ್ರದ ಕಂಪೆನಿಗಳಿಗೆ ಒದಗಿಸುತ್ತಿದೆ.

2012­ರಲ್ಲಿ 177.50 ಕೋಟಿ ಪೌಂಡ್‌ ಸ್ಟರ್ಲಿಂಗ್‌(ಅಂದಾಜು ₨17,750 ಕೋಟಿ) ಮಾರಾಟ ವರಮಾನ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT