ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ನಿರ್ವಹಣೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಇದೇ 18ರಿಂದ 20ರವರೆಗೆ `ತಂತ್ರಜ್ಞಾನ ನಿರ್ವಹಣೆ~ ವಿಷಯದ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದ ವ್ಯವಹಾರ ಜಗತ್ತು ವಿಸ್ತರಣೆಗೊಂಡು ಆರ್ಥಿಕ ಅಭಿವೃದ್ಧಿ ಹೊಂದುತ್ತಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನದ ನಿರ್ವಹಣೆ ಶೈಕ್ಷಣಿಕವಾಗಿಯೂ ವಿಶ್ವದಾದ್ಯಂತ ಪ್ರಾಮುಖ್ಯ ಪಡೆಯುತ್ತಿದೆ. ಐಐಎಸ್‌ಸಿಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಎರಡು ದಿನ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮ್ಯಾನೇಜ್‌ಮೆಂಟ್ ಟೆಕ್ನಾಲಜಿಯ ಪ್ರಸಕ್ತ ಆಗುಹೋಗುಗಳ ಬಗ್ಗೆ ಚರ್ಚೆ ನಡೆಯಲಿದೆ.

ವಿಚಾರ ಸಂಕಿರಣದಲ್ಲಿ ಜರ್ಮನಿಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ನ ಪ್ರಾಧ್ಯಾಪಕ ಡಾ. ಡಯಟರ್ ಡ್ರುಸೆಲ್ಹಾಸ್, ಕಾಗ್ನಿಸೆಂಟ್‌ನ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ್, ಜಾನ್ ಎಫ್. ವೆಲ್ಕ್ ಟೆಕ್ನಾಲಜಿ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಿಚಂದ್ ಕತ್ರಗದ್ದ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಹಿರಿಯ ಉಪಾಧ್ಯಕ್ಷ ಟಿ.ಎಸ್. ಜೈಶಂಕರ್, ಲಾಪ್ ಇಂಡಿಯಾದ ಸಿಇಒ ಕಮಿಸೆಟ್ಟಿ ಶ್ರೀನಿವಾಸನ್, ಬೆಮೆಲ್‌ನ ಸಿಎಂಡಿ ಪಿ.ದ್ವಾರಕಾನಾಥ್, ಪೆಟ್ರೋನೆಟ್‌ನ ಸಿಇಒ ಎ.ಕೆ. ಬಾಲ್ಯನ್, ಕಾಜ್ ವೆಂಚರ್ಸ್‌ನ ಬಿ.ವಿ. ಜಗದೀಶ್, ಐಎಸ್‌ಎ ಅಧ್ಯಕ್ಷ ಪಿ.ವಿ.ಜಿ. ಮೆನನ್, ಜರ್ಮನಿಯ ಜಾಕಬ್ಸ್ ವಿವಿಯ ಪ್ರೊ.ಒಥಾಯಿನ್ ಹರ್ಜೊಗ್ ಮುಂತಾದವರು ನೂತನ ತಂತ್ರಜ್ಞಾನಗಳ ಬಗ್ಗೆ ಮಾತನಾಡಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಭಾಗವಹಿಸಲಿಚ್ಛಿಸುವವರು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. ವೆಬ್‌ಸೈಟ್: www.mgmt.iisc.ermet.in..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT