ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನಕ್ಕಾಗಿ ರೂ.1000 ಕೋಟಿ

ಬೃಹತ್‌ ಕೈಗಾರಿಕೆಗೆ ಕೇಂದ್ರದ ನೆರವಿನ ಪ್ಯಾಕೇಜ್‌
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಬೃಹತ್‌ ಕೈಗಾರಿಕೆ­ಗಳಿಗೆ ಹೊಸ ತಂತ್ರಜ್ಞಾನ ಅಳವಡಿಸಿ­ಕೊಳ್ಳಲು ಮತ್ತು ಉತ್ಪನ್ನಗಳ ಗುಣ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರ ರೂ.1,000 ಕೋಟಿಗಳಷ್ಟು ಬೃಹತ್‌ ಮೊತ್ತದ ನೆರವಿನ ಪ್ಯಾಕೇಜ್  ಪ್ರಕಟಿಸಿದೆ.

‘ದೇಶೀಯ ಉದ್ಯಮ ಸಂಸ್ಥೆಗಳ ನಡುವೆ ಆರೋಗ್ಯಕಾರಿ ಸ್ಪರ್ಧೆ ಹೆಚ್ಚಿಸು ವುದು, ಆ ಮೂಲಕ ಜಾಗತಿಕ ಮಾರು ಕಟ್ಟೆಯ ಮಾನದಂಡಕ್ಕೆ ತಕ್ಕಂತಹ ಸರಕು ಗಳನ್ನು ತಯಾರಿಸುವುದು ಮತ್ತು ಕೌಶಲ ಅಭಿವೃದ್ಧಿ ಈ ನೆರವಿನ ಹಿಂದಿನ ಮುಖ್ಯ ಉದ್ದೇಶ’ ಎಂದು ಬೃಹತ್‌ ಕೈಗಾ ರಿಕೆಗಳ ಹೆಚ್ಚುವರಿ ಕಾರ್ಯದರ್ಶಿ ಅಂಬುಜಾ ಶರ್ಮಾ ಶನಿವಾರ ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಭೆಯಲ್ಲಿ ಹೇಳಿದರು.

ಸಂಪುಟ ಅನುಮೋದನೆ ಬಳಿಕ ಮುಂದಿನ ಎರಡು ಮೂರು ತಿಂಗಳಲ್ಲಿ ಈ ಪ್ಯಾಕೇಜ್‌ ಜಾರಿಯಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರಿ ಯಂತ್ರೋಪಕರಣ ವಲಯದ ರಫ್ತು ವಹಿವಾಟು ಕಳೆದ ಮೂರು ವರ್ಷ ಗಳಲ್ಲಿ ಶೇ 100ರಷ್ಟು ಏರಿಕೆ ಕಂಡಿದೆ. 1990ರಲ್ಲಿ ರೂ.500 ಕೋಟಿಯಷ್ಟಿದ್ದ ವಹಿವಾಟು ಗಾತ್ರ ಈಗ ರೂ.10 ಸಾವಿರ ಕೋಟಿಗೆ ಏರಿಕೆ ಕಂಡಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT