ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಾಂಶ ಪುಸ್ತಕ: ಪ್ರಾತ್ಯಕ್ಷಿಕೆ

Last Updated 11 ಜೂನ್ 2011, 9:45 IST
ಅಕ್ಷರ ಗಾತ್ರ

ಧಾರವಾಡ: ಕನ್ನಡ ಪುಸ್ತಕಗಳನ್ನು ತಂತ್ರಾಂಶದ ಮೂಲಕ ಅಂತರ್ಜಾಲಕ್ಕೆ ಇ-ಪುಸ್ತಕಗಳನ್ನಾಗಿ ಪರಿವ ರ್ತಿಸಿ ಓದುಗರಿಗೆ ಒದಗಿಸುವ ಕುರಿತು ಮನೋಹರ ಗ್ರಂಥಮಾಲಾ ಅಟ್ಟದಲ್ಲಿ ಶುಕ್ರವಾರ ಪ್ರಾತ್ಯಕ್ಷಿಕೆ ನಡೆಯಿತು.

ವಿಂಕ್ ಸಾಫ್ಟ್‌ವೇರ್ ಸಂಸ್ಥೆಯ ಎನ್.ಅಪರ್ಣಾ ಮತ್ತು ದಿನೇಶ, ಇ-ಪುಸ್ತಕಗಳ ಕುರಿತು, ಕನ್ನಡ ಪುಸ್ತಕಗಳನ್ನು ತಂತ್ರಾಂಶಕ್ಕೆ ಅಳವಡಿಸುವ ಬಗ್ಗೆ, ಓದುಗರಿಗೆ ಇ-ಪುಸ್ತಕಗಳು ಸಿಗುವುದರ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

`ಓದುಗರಿಗೆ ಪುಸ್ತಕಗಳು ಸಿಗುವ ಬಗೆ, ಅಂತರ್ಜಾಲಕ್ಕೆ ಪುಸ್ತಕಗಳನ್ನು ಅಳವಡಿಸುವುದು, ಪ್ರಕಾಶಕರಿಗೆ ಸಿಗುವ ರಾಯಲ್ಟಿ, ಸಾಫ್ಟವೇರ್ ದುರು ಪಯೋಗ ಆಗದಿರುವುದರ ಬಗ್ಗೆ ತೆಗೆದುಕೊಳ್ಳ ಬೇಕಾದ ಕಾಳಜಿ~ ಕುರಿತು ಡಾ. ಗಿರೀಶ ಕಾರ್ನಾಡ, ಡಾ. ಎಂ.ಎಂ.ಕಲಬುರ್ಗಿ, ಡಾ. ಗಿರಡ್ಡಿ ಗೋವಿಂದ ರಾಜ, ಮಧು ದೇಸಾಯಿ, ಸಮೀರ ಜೋಶಿ ಮತ್ತಿತ ರರು ಅನಿಸಿಕೆ ವ್ಯಕ್ತಪಡಿಸಿದರು.

`ಇ ತಂತ್ರಾಂಶದ ಎರಡು ಜಿಬಿಯಲ್ಲಿ ಸುಮಾರು 10,000 ಪುಟಗಳಷ್ಟು, 16 ಜಿಬಿ ಐ ಪ್ಯಾಡ್‌ನಲ್ಲಿ ಒಂದು ಲಕ್ಷ ಪುಟಗಳಷ್ಟು ಮತ್ತು ಸ್ಮಾರ್ಟ್‌ಫೋನ್‌ದಲ್ಲಿ ಕೂಡ ಪುಸ್ತಕಗಳನ್ನು ಅಳವಡಿಸಿಕೊಳ್ಳಬಹುದು~ ಎಂದು ದಿನೇಶ ವಿವರಿಸಿದರು.

ಆರ್ಯ ಆಚಾರ್ಯ, ಮಲ್ಲಿಕಾರ್ಜುನ ಹಿರೇಮಠ, ಅರವಿಂದ ಕುಲಕರ್ಣಿ, ಡಾ. ರಮಾಕಾಂತ ಜೋಶಿ, ಡಾ. ಪ್ರಕಾಶ ಗರೂಡ, ಶಶಿಧರ ನರೇಂದ್ರ, ವೆಂಕಟೇಶ ದೇಸಾಯಿ, ಎಸ್.ಎಂ.ದೇಶಪಾಂಡೆ, ಡಾ. ಹ.ವೆಂ.ಕಾಖಂಡಕಿ, ಹರ್ಷ ಡಂಬಳ, ಶ್ವೇತಾ ಜೋಶಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT