ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಬಿಡಿಸಲು ಜೋಳಿಗೆ ಹಿಡಿದ ಯುವಕರು

Last Updated 1 ಜೂನ್ 2011, 8:00 IST
ಅಕ್ಷರ ಗಾತ್ರ

ಬೀದರ್: ತಂಬಾಕು ಬಿಡಿಸುವುದಕ್ಕಾಗಿ ಜೋಳಿಗೆ ಹಿಡಿದುಕೊಂಡು ಸಂಚಾರ ನಡೆಸುವ ಮೂಲಕ ಯುವ ಸಂಘಗಳ ಕಾರ್ಯಕರ್ತರು ಗಮನ ಸೆಳೆದಿದ್ದಾರೆ.ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾ ಹಡಪ್ಪದ ಅಪ್ಪಣ್ಣ ಯುವಕ ಸಂಘ ಹಾಗೂ ಬೌದ್ಧೀಕಿರಣ ಯುವಕ ಸಂಘ ಕಾರ್ಯಕರ್ತರು ನಗರದ ಶಾಂತಿನಗರದಲ್ಲಿ ಮಂಗಳವಾರ ಜನ ಜಾಗೃತಿ ರ‌್ಯಾಲಿ ನಡೆಸಿದರು.

ಕೈಯಲ್ಲಿ ಜೋಳಿಗೆ ಹಿಡಿದು ಹಲಿಗೆ ಬಾರಿಸುತ್ತ ಜನರಲ್ಲಿ ತಂಬಾಕಿನಿಂದ ಉಂಟಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡಿದರು.ಮನೆ ಮನೆಗೆ ತೆರಳಿ ಅನೇಕರಿಗೆ ಚಟ ಬಿಡಿಸು ಪ್ರತಿಜ್ಞೆ ಮಾಡಿಸಿ ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಮತ್ತಿತರ ಸಾಮಗ್ರಿಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡರು.

ಜಿಲ್ಲಾ ಹಡಪದ ಅಪ್ಪಣ್ಣ ಯುವಕ ಸಂಘದ ಅಧ್ಯಕ್ಷ ಸಂಗಮೇಶ ಏಣಕೂರ್, ಬೌದ್ಧೀಕಿರಣ ಯುವಕ ಸಂಘದ ಅಧ್ಯಕ್ಷ ಮಡಿವಾಳೇಶ್ವರ ಸಿಂಧೆ, ಪ್ರಮುಖರಾದ ಸ್ವಾಮಿದಾಸ ಕೆಂಪೆನೋರ್, ರಾಮಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT