ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ರಹಿತ ದಿನಾಚರಣೆ: ಗಮನ ಸೆಳೆದ ಬೀದಿ ನಾಟಕ

Last Updated 2 ಜೂನ್ 2011, 10:20 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲಾದ್ಯಂತ ವೈದ್ಯರ ಸಂಘ ಮತ್ತು ವಿರಾಜಪೇಟೆಯ ಕೂರ್ಗ್ ದಂತ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು.

ಕಲಾವಿದರಾದ ಬಸವರಾಜ್, ಶೇಖರ್ ನೇತೃತ್ವದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ, ತಂಬಾಕು ಸೇವನೆಯಿಂದ ಮನುಷ್ಯನು ಎದುರಿಸುವ ದುಷ್ಪರಿಣಾಮಗಳ ಕುರಿತು ಪ್ರತಿಬಿಂಬಿಸಲಾಯಿತು.

ವಿಶ್ವ ತಂಬಾಕು ದಿನಾಚರಣೆ ಅಂಗ ವಾಗಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಪ್ರದರ್ಶಿಸಿದ ಬೀದಿ ನಾಟಕದಲ್ಲಿ ಕಲಾ ವಿದರು ತಂಬಾಕು ಸೇವನೆಯ ದುಷ್ಪ ರಿಣಾಮಗಳ ಕುರಿತು ಹಲವು ನಿದರ್ಶನ ಗಳನ್ನು ವಿವರಿಸುವ ಮೂಲಕ ಗಮನ ಸೆಳೆದರು. ತಂಬಾಕು - ಗುಟ್ಕಾ ಸೇವನೆ, ಧೂಮಪಾನದಂತಹ ದುರಭ್ಯಾಸವು ಮಾನವ ಜೀವದ ಅಂತ್ಯ ಎಂಬ ಕುರಿತು ನಾಟಕದಲ್ಲಿ ಪ್ರತಿಬಿಂಬಿಸಲಾಯಿತು.

ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಘದ ಜಿಲ್ಲಾಧ್ಯಕ್ಷ ಡಾ ಶಶಿಕಾಂತ್ ರೈ ಮಾಹಿತಿ ನೀಡಿದರು.  ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಪ್ರತಿವರ್ಷ ವಿಶ್ವದಾದ್ಯಂತ ಸಹಸ್ರಾರು ಮಂದಿ ತಂಬಾಕು ಸೇವನೆ ಯಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ದಿಸೆಯಲ್ಲಿ ಇಂತಹ ಜನಜಾಗೃತಿ ಕಾರ್ಯ ಕ್ರಮಗಳು ಪೂರಕವಾಗಿವೆ ಎಂದರು.

ಯುವಜನಾಂಗವು ತಂಬಾಕು, ಬೀಡಿ-ಸಿಗರೇಟು, ಗುಟ್ಕಾ ಇತ್ಯಾದಿ ಸೇವಿಸದಂತೆ ವಹಿಸಬೇಕಾದ ಮುಂಜಾ ಗ್ರತೆ ಕುರಿತು ಸಂಘದ ಮಾಜಿ ಅಧ್ಯಕ್ಷ ಡಾ ಎಸ್.ಪಿ.ಧರಣೇಂದ್ರ ಮಾಹಿತಿ ನೀಡಿದರು. ಪೊಲೀಸ್ ವೃತ್ತ ನಿರೀಕ್ಷಕ ಬಿ. ಬಸವರಾಜ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ಡಾ ಕೃಪಾಶಂಕರ್, ಸಂಘದ ಗೌರವ ಕಾರ್ಯದರ್ಶಿ ಡಾ ಜೀತೇಶ್ ಜೈನ್, ಡಾ ಇರ್ಷಾದ್, ಡಾ ವಿನಯ್, ಡಾ ಕಿರಣ್, ಪದಾಧಿಕಾರಿಗಳು ಪಾಲ್ಗೊಂಡಿದರು.

ಇದೇ ಸಂದರ್ಭದಲ್ಲಿ ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ವಾಹನದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT