ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಹದಕ್ಕೆ ಜಿಲ್ಲೆಯ ಕಟ್ಟಿಗೆ

Last Updated 18 ಸೆಪ್ಟೆಂಬರ್ 2013, 5:57 IST
ಅಕ್ಷರ ಗಾತ್ರ

ತುಮಕೂರು: ಮೈಸೂರು ಜಿಲ್ಲೆಯಲ್ಲಿ ಬೆಳೆಯುವ ವರ್ಜೀನಿಯಾ ತಂಬಾಕು ಹದ ಮಾಡಲು ಇಲ್ಲಿಂದ ಲಕ್ಷಾಂತರ ಟನ್‌ ಕಟ್ಟಿಗೆ ಸಾಗಣೆ ಮಾಡಲಾ­ಗು­ತ್ತಿದೆ ಎಂದು ವನ್ಯಜೀವಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಆಪಾದಿಸಿದ್ದಾರೆ.

ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ತಂಬಾಕು ಹದ ಮಾಡಲು 5 ಲಕ್ಷ ಟನ್‌ ಕಟ್ಟಿಗೆ ಬೇಕು. ಅಲ್ಲಿ ಉರುವಲು ಸಂಗ್ರಹ ನಿರ್ಬಂಧಿಸ­ಲಾ­ಗಿದೆ. ಹೀಗಾಗಿ ಜಿಲ್ಲೆಯ ವಿವಿಧೆಡೆ ದಲ್ಲಾಳಿಗಳು ರೈತರ ಹೊಲಗಳಿಂದ ಹೊಂಗೆ, ಬೇವು, ಜಾಲಿ, ಹುಣಸೆ, ಕಗ್ಗಲಿ ಮರಗಳನ್ನು ಖರೀದಿಸಿ, ಕಡಿದು ಸಾಗಣೆ ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಹಸಿರು ಕಡಿಮೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT