ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣಿದಿದೆ ಭೂಮಿ ತಣಿಯಲಿಲ್ಲ ರೈತನ ಬದುಕು!

Last Updated 3 ಜನವರಿ 2014, 8:26 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಸಮೀಪದ ಕುಡಪಲಿ ಗ್ರಾಮದ ರೈತ ರಾಘವೇಂದ್ರ ಕುಲ­ಕರ್ಣಿ ಅವರ ಹೊಲದಲ್ಲಿ ತುಂಗಾ ಮೇಲ್ದಂಡೆ ಉಪ ಕಾಲುವೆಯ ಮೂಲಕ ಹರಿದು ಬಂದ ನೀರು ಹೊಲದಲ್ಲಿ ನಿಲ್ಲುತ್ತಿದೆ. ಗ್ರಾಮದ ಸರ್ವೆ ನಂಬರ್ 135/1 ರಲ್ಲಿ ಕ್ಷೇತ್ರ 11 ಎಕರೆ 16 ಗುಂಟೆ ಪ್ರದೇಶಕ್ಕೆ ತುಂಗಾ ಮೇಲ್ದಂಡೆ ಕಾಲು­ವೆಯ ಮುಖ್ಯ ಕಾಲುವೆಯಿಂದ ಉಪ­ಕಾಲುವೆಯ ಮೂಲಕ ನೀರು ಹರಿದು ಬರುತ್ತದೆ.

ಆದರೆ 1 ಎಕರೆ ಪ್ರದೇಶ­ದಲ್ಲಿ ಇಂತಹ ದೃಶ್ಯ ಪ್ರತಿ ವರ್ಷ ಸಾಮಾನ್ಯವಾಗಿ ಬಿಟ್ಟಿದೆ. ಈ ಹಿಂದಿನ ವರ್ಷ ಕೂಡಾ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿತ್ತು.  ಇಲಾಖೆಗೆ ಫೊಟೊ ಸಮೇತ ವರದಿ ಸಲ್ಲಿಸಿದರೂ ಇಲ್ಲಿಯವರೆಗೆ ಬೆಳೆ ಹಾನಿ ದೊರೆತಿಲ್ಲ. ಈ ವರ್ಷ ಕೂಡಾ 1 ಎಕರೆ ಪ್ರದೇಶ­ದಲ್ಲಿ ಇದೇ ರೀತಿ ನೀರು ನಿಂತಿದೆ. ಇದ­ರಿಂದ ಭೂಮಿ ಸತ್ವ ಕಳೆದು­ಕೊಂಡಿದೆ. ಬೆಳೆ ಹಾನಿ ಸಾಮಾನ್ಯ­ವಾಗಿದೆ. ಆದರೆ ಪರಿಹಾರ ಮಾತ್ರ ಶೂನ್ಯ. ಇಂತಹ ಪರಿಸ್ಥಿತಿ ಮೂರು ವರ್ಷ­ದಿಂದ ಮುಂದು­ವರಿದಿದೆ.

ಇಲ್ಲಿಂದ ಮುಂದೆ ಎತ್ತರದ ಪ್ರದೇಶ­ವಾದ ಕಾರಣ ನೀರು ಮುಂದೆ ಹರಿಯದೆ ಇಲ್ಲಿಯೇ ನಿಲ್ಲುತ್ತದೆ. ಅಂದಿನ ಎಂಜಿನಿಯರ ದಯಾನಂದ­ರವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿ­­ದಾಗ ಸಮಸ್ಯೆ ಬಗೆ ಹರಿಸು­ವು­ದಾಗಿ ತಿಳಿಸಿದ್ದರು. ಆದರೆ ಒಂದಿಂಚೂ ಪ್ರಗತಿ ಕಾಣದೆ ಸಮಸ್ಯೆ ಇಂದಿಗೂ ಮುಂದುವರಿದಿದೆ.

ರೈತ ರಾಘವೇಂದ್ರ ಕುಲಕರ್ಣಿ ಹೇಳುವ ಪ್ರಕಾರ ಮುಖ್ಯ ಕಾಲುವೆಯಿಂದ ಉಪ­ಕಾಲುವೆಗೆ ನೀರು ಬಿಡುವ ಸ್ಥಳದಲ್ಲಿ ಒಂದು ಗೇಟ್ ನಿರ್ಮಿಸಿದರೆ ಸಾಕು ಅವಶ್ಯವಿರುವಷ್ಟು ನೀರನ್ನು ಮಾತ್ರ ಬಿಟ್ಟು ಕೊಳ್ಳ­ಬಹುದು. ಆದರೆ ಗೇಟ್ ಇಲ್ಲದ ಕಾರಣ ಅನವಶ್ಯಕವಾಗಿ ಹೆಚ್ಚಿನ ನೀರು ಹರಿದು ನಷ್ಟ ಅನುಭವಿ­ಸು­ವಂತಾ­ಗಿದೆ ಎಂದು ಅವರು ಹೇಳು­­ತ್ತಾರೆ. ಪ್ರಸ್ತುತ ಇಲಾಖೆ ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಬಗೆ ಹರಿಸದಿದ್ದರೆ ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ರೈತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT