ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ಕಾಲ್ ಸೌಲಭ್ಯ ದುರ್ಬಳಕೆ ತಡೆಗೆ ರೈಲ್ವೆ ಇಲಾಖೆ ಕ್ರಮ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಮಧ್ಯವರ್ತಿಗಳಿಂದಾಗಿ ತತ್ಕಾಲ್ ಮುಂಗಡ  ಟಿಕೆಟ್ ಕಾಯ್ದಿರಿಸುವ ಸೌಲಭ್ಯ ದುರ್ಬಳಕೆ ಆಗುತ್ತಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ರೈಲ್ವೆ ಸಚಿವಾಲಯ, ಬೆಳಿಗ್ಗೆ 8ರಿಂದ 9ಗಂಟೆ ವರೆಗೆ ಒಬ್ಬರಿಗೆ ಎರಡು ಟಿಕೆಟ್ ಎಂಬ ನಿರ್ಬಂಧ ವಿಧಿಸಿದೆ.

ಹಾಗೆಯೇ `ಆ ಕ್ಷಣದ ಮುಂಗಡ ಕಾಯ್ದಿರಿಸುವಿಕೆ ಅವಕಾಶ~ (ಕ್ವಿಕ್ ಬುಕ್ ಆಪ್ಷನ್) ಮತ್ತು `ಕ್ಯಾಷ್ ಕಾರ್ಡ್ ಬುಕಿಂಗ್~ ಸೇವೆಯನ್ನು ಬೆಳಿಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ರದ್ದುಗೊಳಿಸಲು ತೀರ್ಮಾನಿಸಿದೆ. ಈಗಾಗಲೇ  ಈ ಅವಧಿಯಲ್ಲಿ ಮಧ್ಯವರ್ತಿಗಳು ಮುಂಗಡ ಟಿಕೆಟ್ ಕಾಯ್ದಿರಿಸುವುದನ್ನು ರೈಲ್ವೆ ಸಚಿವಾಲಯ ನಿರ್ಬಂಧಿಸಿದೆ.

ಟಿಕೆಟ್ ವಿತರಣಾ ಕೇಂದ್ರಗಳು ಬೆಳಿಗ್ಗೆ ತೆರೆಯುತ್ತಿದ್ದಂತೆಯೇ ಮಧ್ಯವರ್ತಿಗಳು ಸಾರಾಸಗಟಾಗಿ ತತ್ಕಾಲ್ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸುತ್ತಾರೆ. ಇದರಿಂದ ಸಾಮಾನ್ಯ ಪ್ರಯಾಣಿಕರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ  ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT