ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಾದರ್ಶ ಪಾಲಿಸುವಲ್ಲಿ ವೀರಶೈವ ಧರ್ಮ ವಿಫಲ

Last Updated 5 ಜುಲೈ 2012, 6:15 IST
ಅಕ್ಷರ ಗಾತ್ರ

ಮುಂಡರಗಿ: `ನೂರಾರು ವರ್ಷಗಳ ಇತಿಹಾಸ, ಬಸವಣ್ಣನಂತಹ ಆದರ್ಶ ವ್ಯಕ್ತಿ ಹಾಗೂ ಸಮಾನತೆ, ಸಹಬಾಳ್ವೆ ಯಂತಹ ಅದ್ಭುತ ವಿಚಾರಧಾರೆಗಳನ್ನು ಒಳಗೊಂಡಿರುವ ವೀರಶೈವ ಧರ್ಮ ಇತ್ತೀಚಿನ ದಶಕಗಳಲ್ಲಿ ತನ್ನ ಮೂಲ ತತ್ವಾದರ್ಶಗಳನ್ನು ಪಾಲಿಸುವಲ್ಲಿ ವಿಫಲ ವಾಗಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ~ ಎಂದು ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಜಗದ್ಗುರು ತೋಂಟದಾರ್ಯ ಪ್ರವಚನ ಸಮಿತಿ ಹಾಗೂ ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜಗಳು ಸಂಯುಕ್ತವಾಗಿ ಸ್ಥಳೀಯ ಶಾಖಾ ಮಠದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣನ ಜಯಂತಿ ಹಾಗೂ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿಕೊಂಡು ಅವರು ಆಶೀರ್ವಚನ ನೀಡಿದರು.

`ಲಿಂಗಾಯತ ಧರ್ಮದ ಮೂಲ ಸತ್ವಗಳನ್ನು ಒಳಗೊಂಡಿದ್ದ ವಚನಗಳು ಇತಿಹಾಸದ ಕಾಲ ಗರ್ಭದಲ್ಲಿ ಲೀನ ವಾಗುತ್ತಿದ್ದ ಸಂದರ್ಭದಲ್ಲಿ ಅವುಗಳನ್ನು ಸಂಗ್ರಹಿಸಿ ಬೆಳಕು ನೀಡಿದ ಕೀರ್ತಿ ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಶರಣರ ವಚನಗಳನ್ನು ಸಂಗ್ರಹಿಸುವ, ಪ್ರಚಾರ ಪಡಿಸುವ ಮತ್ತು ಮುದ್ರಿಸುವು ದಕ್ಕಾಗಿ ತನ್ನ ಮನೆ ಮಠಗಳನ್ನು ಕಳೆದು ಕೊಂಡಿರುವ ಹಳಕಟ್ಟಿಯವರು ಲಿಂಗಾ ಯತ ಧರ್ಮದ ನಿಜವಾದ ಆಸ್ತಿಯಾ ಗಿದ್ದರು~ ಎಂದು ಅವರು ತಿಳಿಸಿದರು.

ಬಸವಣ್ಣನು  ಕಾಯಕಕ್ಕೆ ಕುಲವಿಲ್ಲ ಎಂದು ಸಾರಿದ್ದಲ್ಲದೆ, ಹಡಪದ ಅಪ್ಪಣ್ಣ ನಂತಹ ಕಾಯಕ ಜೀವಿಗಳಿಗೆ ಅನುಭವ ಮಂಟಪದಲ್ಲಿ ಉನ್ನತ ಸ್ಥಾನ ನೀಡಿ ಗೌರ ವಿಸಿದರು ಎಂದು ಅವರು ತಿಳಿಸಿದರು.

 `ಜಾತಿ, ಧರ್ಮ, ಮತ ಪಂತಗಳ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ನಾವೆಲ್ಲ ತುಂಬಾ ಸಂಕುಚಿತ ಮನೋ ಭಾವನೆಗಳನ್ನು ಹೊಂದಿದ್ದು, ಅವು ಗಳನ್ನೆಲ್ಲ ಬದಿಗೊತ್ತಿ ಎಲ್ಲರೂ ಒಂದೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳ ಬೇಕಾಗಿದೆ ಎಂದು ಸಮಾ ರಂಭದಲ್ಲಿ ಭಾಗವಹಿಸಿದ್ದ ಶಂಕ್ರಣ್ಣ ಅಂಗಡಿ ತಿಳಿಸಿದರು.

ಶರಣಬಸವ ದೇವರು ಹಡಪದ ಅಪ್ಪಣ್ಣನವರ ಜೀವನ, ಸಿದ್ಧಾಂತ ಕುರಿತು ಮಾತನಾಡಿ ದರು. ಗಂಗಣ್ಣ ದೇವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಗುರು ಪೌರ್ಣಿಮೆ ನಿಮಿತ್ಯ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ತಾಲ್ಲೂಕು ಹಡಪದ ಅಪ್ಪಣ್ಣ ಸಮಾ ಜದ ಮುಖಂಡರು ಗುರುವಂದನೆ ಸಲ್ಲಿಸಿದರು. ಸಮಾಜದ ಮುಖಂಡ ಗಂಗಪ್ಪ ಅಬ್ಬಿಗೇರಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ರೇಣುಕಾ ಹಡಪದ ಗ್ರಂಥ ಪಠಣ ಮಾಡಿದರು.  ಶಂಕರ ಕಲ್ಲಿಗನೂರ ಧರ್ಮ ವಚನ ಚಿಂತನೆ ನಡೆಸಿದರು.

ಈಶ್ವರಪ್ಪ ನಾವಿ, ತಾಲ್ಲೂಕು ಹಡ ಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ದೇವು ಹಡಪದ, ದೇವರಾಜ ಹಡಪದ ಮೊದ ಲಾದವರು ಹಾಜರಿದ್ದರು. ಗಿರಿಶಗೌಡ ಪಾಟೀಲ ಸ್ವಾಗತಿಸಿದರು. ಎ.ಕೆ.ಮುಲ್ಲಾ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT