ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪಸೀಹಳ್ಳಿಯ ಕೃಷಿ ಪಂಡಿತ ಸದಾನಂದ

Last Updated 17 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ತಪಸೀಹಳ್ಳಿ ಗ್ರಾಮದ ಕೃಷಿಕ ಸದಾನಂದ ಅವರಿಗೆ ಈ ಸಾಲಿನ ಕೃಷಿ ಪಂಡಿತ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಪುರಸ್ಕರಿಸಿದೆ.ಸದಾನಂದ ಅವರು ಒಂದು ಹೆಕ್ಟೇರ್ ಜಮೀನಿನಲ್ಲಯ ಕೈಗೊಂಡಿರುವ ಸಮಗ್ರ ಕೃಷಿ ಪದ್ಧತಿಯಲ್ಲಿನ ಯಶಸ್ಸನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಕೃಷಿಕ ಸದಾನಂದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ಕಳೆದ 15 ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿದ್ದೇನೆ. ಆದರೆ ಕಳೆದ ಐದು ವರ್ಷಗಳಿಂದ  ಈಚೆಗಷ್ಟೇ ಸಮಗ್ರ ಕೃಷಿ ಪದ್ಧತಿ ಅಳವಡಿಕೆಗೆ ಮುಂದಾಗಿರುವೆ.ಎರಡು ಕಾಲು ಎಕರೆ ಪ್ರದೇಶದಲ್ಲಿ ಕೊಳವೆ ಬಾವಿಯಿಂದ ನೀರು ಬಳಸಿಕೊಂಡು ಕೃಷಿ ಮಾಡಲು ಆರಂಭಿಸಿದೆ.ಈಗ ಪ್ರಸ್ತುತ ತೋಟದಲ್ಲಿ ಕೃಷಿ ಹೊಂಡ, ಹೂವು, ಅಡಿಕೆ, ತೆಂಗು, ಹಲಸು, ತರಕಾರಿ ಬೆಳೆ ಹಾಗೂ ಹೈನುಗಾರಿಕೆಯನ್ನು  ಮಾಡಲಾಗುತ್ತಿದೆ.

ಇದರೊಂದಿಗೆ ಹತ್ತು ಗುಂಟೆ ಪ್ರದೇಶದಲ್ಲಿ ನಿರ್ಮಿಸಿರುವ ಹಸಿರು ಮನೆಯಲ್ಲಿ ವಿವಿಧ ಜಾತಿಯ ತರಕಾರಿ ಸಸಿಗಳನ್ನು ಬೆಳಸಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.ಕೃಷಿಯಲ್ಲಿ ಸಮಗ್ರತೆ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.ಹೆಚ್ಚು ಲಾಭಗಳಿಸುವ ಆಸೆಯಿಂದ ಬೆಲೆ ಇರುವ ಯಾವುದೋ ಒಂದು ಬೆಳೆಯನ್ನು ಬೆಳೆಯಲು ಹೋಗಿ ನಷ್ಟ ಅನುಭವಿಸುವುದಕಿಂತಲು ನಿಧಾನವಾದರೂ ಸಮಗ್ರ ಕೃಷಿ ಪದ್ಧತಿ ಕೈಗೊಳ್ಳುವ ಮೂಲಕ ನಷ್ಟ ಅನುಭವಿಸುವುದರಿಂದ ತಪ್ಪಿಸಿಕೊಳ್ಳಬೇಕು.ಆಗ ಮಾತ್ರ ರೈತರಿಗೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳುತ್ತಾರೆ.(ಸದಾನಂದ ಅವರ ಮೊಬೈಲ್:9342022146)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT