ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಿ

ಅತ್ಯಾಚಾರ: ಸಂತ್ರಸ್ತೆ ಪೋಷಕರ ಆಗ್ರಹ
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಲ್ಕತ್ತದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಿಹಾರದ ಯುವತಿಯ ಕುಟುಂಬದವರು ರಾಷ್ಟ್ರಪತಿ ಪ್ರಣವ್‌್ ಮುಖರ್ಜಿ ಅವರನ್ನು ಮಂಗಳವಾರ ಭೇಟಿಯಾಗಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.

ರಾಷ್ಟ್ರಪತಿ ಭವನದಲ್ಲಿ ಮುಖರ್ಜಿ ಅವರನ್ನು ಭೇಟಿಯಾದ ಕುಟುಂಬದ ಸದಸ್ಯರ ಜತೆ ಸಿಪಿಎಂ ಪಾಲಿಟ್‌­ಬ್ಯುರೊ ಸದಸ್ಯೆ ಬೃಂದಾ ಕಾರಟ್‌್ ಮತ್ತಿತರ ಮಹಿಳಾ ಮುಖಂಡರು ಕೂಡ ಇದ್ದರು.

ಅಕ್ಟೋಬರ್‌ನಲ್ಲಿ ಈ ಯುವತಿ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಂತರ ಕಾಮುಕರು ಆಕೆಯನ್ನು ಸಜೀವದಹನ ಮಾಡಲು ಯತ್ನಿಸಿದ್ದರು. ಸುಟ್ಟಗಾಯಗಳಿಂದಾಗಿ ಡಿಸೆಂಬರ್‌್ 23ರಂದು  ಆಕೆ ಕೊನೆಯುಸಿರೆಳೆದಿದ್ದಳು.

ತನಿಖೆಗೆ ಆಗ್ರಹ: ‘ಯುವತಿಯ ಕುಟುಂಬದವರನ್ನು ಕೆಟ್ಟದಾಗಿ ನಡೆಸಿ­ಕೊಂಡ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಅವರ ವಿರುದ್ಧ ತನಿಖೆಗೆ ಆದೇಶಿ­ಸಬೇಕು’ ಎಂದು ಪಶ್ಚಿಮಬಂಗಾಳ ಸರ್ಕಾರವನ್ನು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದೇವೆ’ ಎಂದು ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT