ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಂಗಾಂತರ ದರ: ಟ್ರಾಯ್ ಬಿಗಿಪಟ್ಟು

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ದೂರವಾಣಿ ಸೇವಾ ಸಂಸ್ಥೆಗಳ ವಿರೋಧದ ನಡುವೆಯೂ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಶಿಫಾರಸು ಮಾಡಿರುವ ಗರಿಷ್ಠ ಮೀಸಲು ದರವನ್ನೇ ಉಳಿಸಿಕೊಳ್ಳಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ  (ಟ್ರಾಯ್) ನಿರ್ಧರಿಸಿದೆ.

`ಸಂಪರ್ಕ ಸೇವಾ ಸಂಸ್ಥೆಗಳಿಗೆ ನಿರ್ದಿಷ್ಟ ದೂರವಾಣಿ ವೃತ್ತದಿಂದ ಎಷ್ಟು ವರಮಾನ ಬರುತ್ತದೆ ಎನ್ನುವುದರ ಆಧಾರದ ಮೇಲೆಯೇ ತರಂಗಾಂತರ  `ಮೀಸಲು ದರ~ ನಿಗದಿಪಡಿಸಲಾಗಿದೆ. ಬಹುತೇಕ ಇದೇ ಅಂತಿಮ ಎಂದು `ಟ್ರಾಯ್~ ಪ್ರಕಟಣೆ ತಿಳಿಸಿದೆ.

`ಸೇವಾ ಸಂಸ್ಥೆಗಳು ತರಂಗಾಂತರ ಹೆಚ್ಚುವರಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಿಲ್ಲವೇ?~ ಎಂಬ ಪ್ರಶ್ನೆಗೆ, ಇದು ಒಟ್ಟಾರೆ ದೂರವಾಣಿ ಉದ್ಯಮದ ಮೇಲೆ ಅಥವಾ ಸಂಸ್ಥೆಗಳ ವರಮಾನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು `ಟ್ರಾಯ್~ ತನ್ನ ನಿಲುವು ಸಮರ್ಥಿಸಿಕೊಂಡಿದೆ.

ಹೊಸ ಪ್ರಸ್ತಾವದಡಿ 1 ಮೆಗಾಹ  ರ್ಟ್ಸ್ ತರಂಗಾಂತರ (ದೇಶದಾದ್ಯಂತ)  ಹಂಚಿಕೆಗೆ `ಟ್ರಾಯ್~ ರೂ3,622 ಕೋಟಿ ದರ ನಿಗದಿಪಡಿಸಿದೆ. 2008ರಲ್ಲಿ ನಡೆದ 2ನೇ ತಲೆಮಾರಿನ (2ಜಿ) ತರಂಗಾಂತರ ಹಂಚಿಕೆ ದರಕ್ಕೆ ಹೋಲಿಸಿದರೆ ಇದು 10 ಪಟ್ಟು ಹೆಚ್ಚಿನದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT