ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಳಿಮಠ ಜಾತ್ರೆ ಮಾ. 2ರಂದು

Last Updated 26 ಫೆಬ್ರುವರಿ 2011, 8:25 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ತರಳಿಮಠದ ಜಾತ್ರೆಯು ಮಹಾಶಿವರಾತ್ರಿಯ ದಿನವಾದ  ಮಾ.2ರಂದು ನಡೆಯಲಿದೆ ಎಂದು ತರಳಿ ಸಂಸ್ಥಾನಮಠದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಡಿ.ನಾಯ್ಕ ಐಸೂರು ತಿಳಿಸಿದರು.

ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತರಳಿಯ ಮಠಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ನಾಮಧಾರಿ ಸಮಾಜದ ಕುಲಗುರುಗಳಾಗಿದ್ದು, ಅಪಾರ ಶಕ್ತಿ-ಸಾಮರ್ಥ್ಯ ಮತ್ತು ದೈವಿ ಕೃಪೆ ಹೊಂದಿದ್ದ ತಿಮ್ಮಪ್ಪ ಸ್ವಾಮೀಜಿಯವರು ಈ ಮಠದ ಮೊದಲ  ಗುರುಗಳಾಗಿದ್ದರು. ನಂತರ ಅದೇ ಪರಂಪರೆ 400 ವರ್ಷಗಳಿಂದ ಮುಂದುವರಿದು ಬಂದಿದೆ. ಮೇಲುಕೋಟೆಯ ರಾಮಾನುಜಾಚಾರ್ಯರ ಪರಂಪರೆಯವರಾದ ತಿಮ್ಮಪ್ಪ ಸ್ವಾಮೀಜಿಯವರ ಸಮಾಧಿ ತರಳಿಯಲ್ಲಿದೆ ಎಂದರು.

ಪ್ರತಿವರ್ಷದಂತೆ ಈ ವರ್ಷವೂ ಅಂದು 1008 ಸತ್ಯನಾರಾಯಣ ವ್ರತ ಕಲಶ ಪೂಜೆ ನಡೆಯಲಿದ್ದು, ಬೆಳಿಗ್ಗೆ 8ಕ್ಕೆ ಕಲಶಗಳಲ್ಲಿ ಜಲ ತುಂಬುವುದು ಮತ್ತು ಪುರುಷ ಸೂಕ್ತ ಹವನ, 10ಕ್ಕೆ ಪೂಜಾ ಕಾರ್ಯಕ್ರಮ ಮತ್ತು ಸತ್ಯನಾರಾಯಣ ಕಥಾ ನಿರೂಪಣೆ, ಮಧ್ಯಾಹ್ನ 12.30ಕ್ಕೆ ಧರ್ಮಸಭೆ, 3ಕ್ಕೆ ಮಹಾಮಂಗಳಾರತಿ ಮತ್ತು ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಅಂದು ನಡೆಯುವ ಧರ್ಮಸಭೆಯ ಸಂದರ್ಭದಲ್ಲಿ ಕುಲಗುರುಗಳಾದ ತಿಮ್ಮಪ್ಪ ಸ್ವಾಮೀಜಿಯವರ ಪಾದುಕೆಯ ಪ್ರತಿಷ್ಠಾಪನೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಸೋಲೂರಮಠದ  ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ತರಳಿಮಠದ ಬಾಲಕೃಷ್ಣ ಸ್ವಾಮೀಜಿ ಉಪಸ್ಥಿತರಿರುವರು.ಮುಖ್ಯಅತಿಥಿಗಳಾಗಿ ವಿದ್ವಾನ್ ಲಕ್ಷ್ಮೀಪತಿ ಭಟ್ಟ ಬೆಂಗಳೂರು, ಭಟ್ಕಳ ಶಾಸಕ ಜೆ.ಡಿ.ನಾಯ್ಕ, ವಿಧಾನಪರಿಷತ್  ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಉಪಸ್ಥಿತರಿರುವರು ಎಂದರು.

ತಾಲ್ಲೂಕಿನ ಗುರು ಫೌಂಡೇಶನ್ ಮತ್ತು ತರಳಿಯ ಶಕ್ತಿ ಮಹಾಗಣಪತಿ  ವೆಂಕಟರಮಣ ಯುವಕ ಮಂಡಳಿಯ ಆಶ್ರಯದಲ್ಲಿ ರಾಜ್ಯಮಟ್ಟದ ಡೊಳ್ಳುವಾದನ ಸ್ಪರ್ಧೆಯು ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ತರಳಿ ಜಾತ್ರೆಯ ವ್ರತ ಸಮಿತಿಯ ಅಧ್ಯಕ್ಷ ಎನ್.ಟಿ.ನಾಯ್ಕ ದೇವಾಸ, ಕಾರ್ಯದರ್ಶಿ ಐ.ಕೆ.ನಾಯ್ಕ ಅರಸನಗದ್ದೆ, ಪ್ರಮುಖರಾದ ಡಿ.ಕೆ.ನಾಯ್ಕ ತೆಂಗಿನಮನೆ, ಡಿ.ಸಿ.ನಾಯ್ಕ ಅವರಗುಪ್ಪ, ದಿವಾಕರ ನಾಯ್ಕ ಹೆಮ್ಮನಬೈಲ್,ಮಹಾಬಲೇಶ್ವರ ನಾಯ್ಕ ಕರಮನೆ, ಜಿ.ಐ.ನಾಯ್ಕ ಅರಿಶಿನಗೋಡ ಮತ್ತಿತರರು ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT