ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಕೂದಲಿನಿಂದಾಗಿ ತಪ್ಪಿದ ಒಲಿಂಪಿಕ್ ಅರ್ಹತೆ: ಮಯೂಖಾ ಜಾನಿ ನಿರಾಸೆ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಮಯೂಖಾ ಜಾನಿ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಲಾಂಗ್ ಜಂಪ್‌ನಲ್ಲಿ ಕೂಟ ದಾಖಲೆಯೇನೋ ನಿರ್ಮಿಸಿದರು. ಆದರೆ ವಿಶ್ವ ಚಾಂಪಿಯನ್‌ಷಿಷ್ ಹಾಗೂ ಒಲಿಂಪಿಕ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದು ಅವರನ್ನು ನಿರಾಸೆಯಲ್ಲಿ ಮುಳುಗಿಸಿತ್ತು.

ಈ ನಿರಾಶೆಗೆ ಕಾರಣವಾಗಿದ್ದು ಅವರ ತಲೆಕೂದಲು. ಮೊದಲ ಯತ್ನದಲ್ಲಿ ಮಯೂಖಾ 6.63 ಮೀ. ದೂರ ಜಿಗಿದರು. ಆದರೆ ಆರನೇ ಹಾಗೂ ಕೊನೆಯ ಯತ್ನದಲ್ಲಿ 6.70 ಮೀ. ಜಿಗಿದರಾದರೂ ಅವರ ತಲೆಕೂದಲು ಅಡ್ಡಿಯಾಯಿತು. ಜಿಗಿದಾಗ ತಲೆಕೂದಲು ಸ್ಪರ್ಶಿಸಿದ ಸ್ಥಳದಿಂದ ಅಳತೆ ಮಾಡಲಾಗುತ್ತದೆ. ಹಾಗಾಗಿ ಆ ಯತ್ನದಲ್ಲಿ 6.60 ಮೀ.ಗೆ ಅವರು ತೃಪ್ತಿಪಡಬೇಕಾಯಿತು.

`ನಿರೀಕ್ಷಿಸಿದಷ್ಟು ದೂರ ಜಿಗಿಯಲು ಸಾಧ್ಯವಾಗಲಿಲ್ಲ ನಿಜ. ಆದರೆ ಅರ್ಹತೆಗೆ ಇದೇ ಕೊನೆಯಲ್ಲ. ಜಪಾನ್‌ನ ಕೋಬ್‌ನಲ್ಲಿ ಜುಲೈ 7ರಿಂದ 10ರವರೆಗೆ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಆ ಅರ್ಹತೆ ಗೆರೆ ಮುಟ್ಟುತ್ತೇನೆ ಎಂಬ ವಿಶ್ವಾಸವಿದೆ~ ಎಂದು ಮಯೂಖಾ `ಪ್ರಜಾವಾಣಿ~ಗೆ ತಿಳಿಸಿದರು.

 `ಆದರೂ ಈ ಪ್ರಯತ್ನ ನನಗೆ ತೃಪ್ತಿ ತಂದಿದೆ. ಅರ್ಹತೆ ಪಡೆಯುವಷ್ಟು ದೂರ ಜಿಗಿಸುವ ಸಾಮರ್ಥ್ಯ ನನ್ನಲ್ಲಿದೆ~ ಎಂದರು.

`ನಾನು ಮಯೂಖಾಳಿಂದ 6.75 ಮೀ.ಸಾಧನೆ ನಿರೀಕ್ಷಿಸಿದ್ದೆ. ಆದರೆ ತಾಂತ್ರಿಕ ಅಂಶಗಳತ್ತ ಆಕೆ ಗಮನ ಹರಿಸಬೇಕು. ಅದನ್ನು ಸರಿಪಡಿಸುವ ವಿಶ್ವಾಸ ನನ್ನಲ್ಲಿದೆ~ ಎಂದು ಕೋಚ್ ಜಿ.ಆರ್.ಶ್ಯಾಮ್ ಕುಮಾರ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT