ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಿ ಅಭಿವೃದ್ಧಿಗೆ ಮೊನ್ಸಾಂಟೊ ಘಟಕ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಮೊನ್ಸಾಂಟೊ ಇಂಡಿಯಾ ಸಂಸ್ಥೆಯು ಅತ್ಯಾಧುನಿಕ ತಳಿ ಅಭಿವೃದ್ಧಿ ಘಟಕವನ್ನು ಸ್ಥಾಪಿಸಿದೆ. ಇಲ್ಲಿ ಹೈಬ್ರಿಡ್ ಜೋಳ ಮತ್ತು ತರಕಾರಿಗಳ ನೂತನ ತಳಿಗಳನ್ನು ಅಭಿವೃದ್ಧಿಪಡಿಸಲಿದೆ.

ಇದು ಸುಮಾರು 117 ಎಕರೆ ವಿಸ್ತೀರ್ಣದಲ್ಲಿದ್ದು 25 ಕೋಟಿ ರೂಪಾಯಿ ಬಂಡವಾಳ ಹೂಡಿದೆ. ದಕ್ಷಿಣ ಭಾರತದ ರೈತರಿಗಾಗಿ ಜೋಳ, ಟೊಮ್ಯಾಟೊ, ಎಲೆಕೋಸು, ಹೂಕೋಸು, ಸೌತೆಕಾಯಿ ಮತ್ತು ಕಲ್ಲಂಗಡಿ ಬೇಸಾಯಕ್ಕಾಗಿ ಅಧಿಕ ಇಳುವರಿಯ ಹೈಬ್ರಿಡ್ ಬೀಜಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಅಮೆರಿಕದ ಸೇಂಟ್ ಲೂಯಿಯ ಚೆಸ್ಟರ್‌ಫೀಲ್ಡ್ ಗ್ರಾಮದಲ್ಲಿನ ಮೊನ್ಸಾಂಟೊ ಸಂಶೋಧನಾ ಘಟಕದ ಮಾದರಿಯಲ್ಲೇ ಈ ಘಟಕವೂ ಇದೆ. ನೂತನ ಘಟಕವು ಹೊಂದಿದೆ. ತಳಿ ಅಭಿವೃದ್ಧಿ ಮತ್ತು ಬೀಜಗಳ ಅಭಿವೃದ್ಧಿಯಲ್ಲಿ ನೂತನ ಘಟಕವು ಪ್ರಮುಖ ಪಾತ್ರವಹಿಸಲಿದೆ.
 
ಸಂಶೋಧನೆಯಿಂದ ಅಧಿಕ ಇಳುವರಿ ಕೊಡುವ ಕೃಷಿ ಉತ್ಪನ್ನಗಳ ಉತ್ತಮ ಗುಣಮಟ್ಟದ ಬೀಜಗಳನ್ನು ತಯಾರಿಸಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಮಿತಾಭ್ ಜೈಪುರಿ ಹೇಳುತ್ತಾರೆ.

ನೂತನ ಘಟಕವು ಸಾಮಾನ್ಯವಾದುದ್ದಲ್ಲ. ಮೊನ್ಸಾಂಟೊ ಇಂಡಿಯಾ ಸಂಸ್ಥೆ ವತಿಯಿಂದ ದೇಶದಲ್ಲಿ ಸ್ಥಾಪಿಸಲ್ಪಟ್ಟ ಎರಡನೇ ತಳಿ ಅಭಿವೃದ್ಧಿ ಘಟಕ. ಒಂದರ್ಥದಲ್ಲಿ ಪ್ರಯೋಗಾಲಯದಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲೇ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ.
 
`ಭಾರತದಲ್ಲಿ ಆರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಮೊನ್ಸಾಂಟೊ ಅಸ್ತಿತ್ವದಲ್ಲಿದೆ. ನಾವು ಅಭಿವೃದ್ಧಿಪಡಿಸಿದ ಎಂಐಎಲ್ ಮೆಕ್ಕೆಜೋಳ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೈಬ್ರಿಡ್ ಜೋಳದ ಬೀಜದ ಬ್ರಾಂಡ್~ ಎನ್ನುತ್ತಾರೆ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಡಿ.ನಾರಾಯಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT