ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಸಾದುಕ್‌ ಹುಸೇನ್‌ ಪಾಕ್‌ ಮುಖ್ಯ ನ್ಯಾಯಮೂರ್ತಿ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಐಎ­ಎನ್‌ಎಸ್‌): ಪಾಕಿಸ್ತಾನದ ನೂತನ ಮುಖ್ಯ ನ್ಯಾಯ­ಮೂರ್ತಿಯಾಗಿ  ತಸಾದುಕ್‌ ಹುಸೇನ್‌ ಜಿಲ್ಲಾನಿ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿದರು.

ಅಧ್ಯಕ್ಷ ಮಮ್ನೂನ್‌ ಹುಸೇನ್‌ ಅವರ ನಿವಾಸದಲ್ಲಿ ಬೋಧಿಸಲಾದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ನಿವೃತ್ತ ಮುಖ್ಯ ನ್ಯಾ. ಇಫ್ತಿಕಾರ್‌ ಮೊಹಮ್ಮದ್‌ ಚೌಧರಿ ಭಾಗವಹಿ­ಸಿದ್ದರು.

ಲಾಹೋರಿನವರಾದ ತಸಾ­ದುಕ್‌ ಹುಸೇನ್‌ ಜಿಲ್ಲಾನಿ ರಾಜಕೀಯ­ಶಾಸ್ತ್ರ­ದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಪಂಜಾಬ್‌ ವಿವಿ
ಯಿಂದ ಕಾನೂನು ಪದವಿ ಹಾಗೂ ಲಂಡನ್‌ ವಿವಿಯಿಂದ ಸಂವಿಧಾನಿಕ ಕಾನೂನಿನ ಕುರಿತು ಪದವಿ ಪಡೆದವರು.

ಲಾಹೋರ್‌ ಹೈಕೋರ್ಟ್‌ನಲ್ಲಿ ನ್ಯಾಯ­ಮೂರ್ತಿ­­­ಯಾಗಿದ್ದ ಅವರು ೨೦೦೪ರಲ್ಲಿ ಸುಪ್ರೀಂಕೋರ್ಟ್‌ಗೆ ನೇಮಕ­ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT