ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ತಪ್ಪಿಸಿ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಳಗಾವಿಯ `ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ (1985) ಲೋಕಲ್ ಸೆಲ್ಫ್ ಗೌರ‌್ನಮೆಂಟ್~ ಎಂಬ ಸಂಸ್ಥೆಯ ಮೂಲಕ `ಡಿಪ್ಲೊಮೊ ಇನ್ ಹೆಲ್ತ್‌ಇನ್ಸ್‌ಪೆಕ್ಟರ್ ಕೋರ್ಸ್~ ಮುಗಿಸಿದವರನ್ನು ಕರ್ನಾಟಕ ಸರ್ಕಾರದ ಪೌರಾಡಳಿತ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ನೇಮಕಾತಿಗೆ ಪರಿಗಣಿಸುತ್ತದೆ. 

 ಆದರೆ ಆರೋಗ್ಯ ಇಲಾಖೆಯ ಹುದ್ದೆಗಳಿಗೆ ನಮ್ಮನ್ನು ಪರಿಗಣಿಸುತ್ತಿಲ್ಲ. ರಾಜ್ಯ ಸರ್ಕಾರದ ವೈದ್ಯಕೀಯ ಮಂಡಳಿ ನಡೆಸುವ ಡಿಪ್ಲೊಮೊ ಪದವೀಧರರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಇದು ತಾರತಮ್ಯದ ಧೋರಣೆ. ಈ ಹಿಂದೆ ಮೂರು ಸಲ ನೇಮಕಾತಿ ಅವಕಾಶ ಕಳೆದುಕೊಂಡಿದ್ದೇವೆ. 

ಆರೋಗ್ಯ ಇಲಾಖೆಗೆ ಈ ಕುರಿತು ಮನವಿ ಸಲ್ಲಿಸಿದ್ದೇವೆ  ನಮ್ಮನ್ನು ಪರಿಗಣಿಸಬಹುದು ಎಂದು ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರು ಒಪ್ಪಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ಈ ಕುರಿತು ಆದೇಶ ಹೊರಬಿದ್ದಿಲ್ಲ. ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT