ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಸಿ ಮೇಲೆ ಸರಸ ಸಲ್ಲಾಪ

Last Updated 4 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಮುನಿರಾಬಾದ್: ಸ್ಥಳೀಯ ಮನೆಯೊಂದರ ತಾರಸಿಯ ಮೇಲೆ ಕೆಂಪು ಮಂಗಗಳ ಜೋಡಿಯೊಂದು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಸೋಮವಾರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ನಗು ತರಿಸುವಂತಿತ್ತು.
ಕಾಡಿನಲ್ಲಿ ಆಹಾರ ಸಿಗದೇ ನಾಡಿಗೆ ನುಗ್ಗುವ ಮಂಗಗಳ ದಂಡು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ.

 ಹಾಗೆ ಬರುವ ಮಂಗಗಳು ಕೆಲವೊಂದು ಬಾರಿ ನಾಗರಿಕರ ಮನೆಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹೋಗಿ ತಿನ್ನುವುದು ಅಥವಾ ಮನುಷ್ಯರ ಮೇಲೆ ಆಕ್ರಮಣ ಮಾಡಿ ಆಹಾರ ಮದಾರ್ಥ ಕಸಿಯುವುದು, ಮರದಿಂದ ಮರಕ್ಕೆ ಜಿಗಿದು ತಮ್ಮಳಗೆ ಚಿನ್ನಾಟ ಆಡುವುದು, ಮೋಜಿಗಾಗಿ ತಂತಿಯ ಮೇಲಿನ ನಡಿಗೆ ಸಾಮಾನ್ಯ. ಆದರೆ ಮುನಿರಾಬಾದ್‌ನ ಮನೆಯೊಂದರ ತಾರಸಿಯ ಮೇಲೆ ಸೋಮವಾರ ಕಂಡ ದೃಶ್ಯ ಇದಕ್ಕಿಂತ ಭಿನ್ನವಾಗಿತ್ತು.

ಮಂಗಗಳಿಗೆ ಹೊಟ್ಟೆ ತುಂಬಿತ್ತೋ ಅಥವಾ ತಿನ್ನಲು ಏನೂ ಸಿಗಲಿಲ್ಲವೋ ಗೊತ್ತಿಲ್ಲ ಆದರೆ ಎರಡು ಕೆಂಪು ಮಂಗಗಳು ಮನೆಯ ತಾರಸಿಯ ಮೇಲೆ ಒಣಗಲು ಹಾಕಿದ್ದ ಮಹಿಳೆಯರ ವೇಲನ್ನು (ಮೇಲುವಸ್ತ್ರ)ಕದ್ದು ಮನುಷ್ಯರ ನಡವಳಿಕೆಯನ್ನು ಅನುಕರಣೆ ಮಾಡುತ್ತಿದ್ದವು.

ಹೆಣ್ಣು ಮಂಗ ವೇಲನ್ನು ಮೈತುಂಬಾ ಹೊದ್ದುಕೊಂಡು(ಚಿತ್ರ1) ಥೇಟ್ ಹುಡುಗಿಯಂತೆ ಕುಳಿತಿತ್ತು. ಇನ್ನೊಂದು ಮಂಗ ಅದರ ಮುಖದ ಮೇಲಿನ ತೆರೆಯನ್ನು ಸರಿಸಿ(ಚಿತ್ರ2) ಕದ್ದು ನೋಡುತ್ತಿತ್ತು.

 “ತೆರೆಯೇಕೆ ಸೌಂದರ್ಯಕೆ.. ಮರೆ ಏಕೆ ಚಂದ್ರನಿಗೆ...ಎಂಬ ಸಿನಿಮಾ ಹಾಡಿನ ದೃಶ್ಯವನ್ನು ಸರಿಯಾಗಿ ಹೋಲುತ್ತಿತ್ತು.

ಕೆಲ ಹೊತ್ತು ಈ ರೀತಿ ಸರಸ ಸಲ್ಲಾಪದಲ್ಲಿ ತೊಡಗಿದ ನಂತರ ಗಂಡು ಮಂಗ ಹೆಣ್ಣು ಮಂಗವನ್ನು ಮುದ್ದು ಮಾಡುತ್ತಿರುವ ದೃಶ್ಯ(ಚಿತ್ರ3) ಎಂಥವರನ್ನೂ ಆಶ್ಚರ್ಯ ಚಕಿತರನ್ನಾಗಿಸಿತು.

ಸುಮಾರು ಹೊತ್ತು ನಡೆದ ಈ ಸರಸ ಸಲ್ಲಾಪವನ್ನು ಓಣಿಯ ಜನ ನೋಡಿ ನಕ್ಕಿದ್ದೇ ನಕ್ಕಿದ್ದು. ಸಾಮಾನ್ಯವಾಗಿ ಕೋತಿ ಆಡಿಸುವವರ ಹತ್ತಿರ ತರಬೇತಿ ಪಡೆದ ಮಂಗಗಳು ಮಾತ್ರ ಸೂತ್ರಧಾರನ ಆಜ್ಞೆಯ ಮೇರೆಗೆ ನಟಿಸುವುದು ಸಾಮಾನ್ಯ.

ಆದರೆ ತರಬೇತಿ ಪಡೆಯದ ಕಾಡಿನಿಂದ ಬಂದ ಮಂಗಗಳು ಈ ರೀತಿ ಪ್ರೀತಿಯ ನಾಟಕ ಪ್ರದರ್ಶಿಸಿದ್ದು ಸಾರ್ವಜನಿಕರಲ್ಲಿ ಆಶ್ಚರ್ಯ ಜೊತೆಗೆ ಪುಕ್ಕಟೆ ಮನರಂಜನೆಯನ್ನು ನೀಡಿದ್ದು ಮಾತ್ರ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT