ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ, ಇದು ಅತ್ಯಂತ ಹೇಯ ದೃಶ್ಯ. ಯಾರೇ ಇಂತಹ ಅನುಚಿತ ವರ್ತನೆ ತೋರಿದ್ದರೂ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ. ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಸಹ ಇದನ್ನು ಕಟು ಮಾತುಗಳಲ್ಲಿ ಖಂಡಿಸಿದ್ದಾರೆ. ತಾಲಿಬಾನ್ ಸಂಘಟನೆಯೂ ಸಹಾ ಈ ಕೃತ್ಯವನ್ನು ಖಂಡಿಸಿದ್ದರೂ ಶಾಂತಿ ಮಾತುಕತೆಯಿಂದ ಹಿಂದಕ್ಕೆ ಸರಿಯುವ ಯಾವುದೇ ಇಂಗಿತವನ್ನು ಮಾತ್ರ ಈತನಕ ವ್ಯಕ್ತಪಡಿಸಿಲ್ಲ.