ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿ ಕಟ್ಟಿ ಜೈಲು ಪಾಲಾದ ಪಿಡಿಓ!

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಾಕ್ಷರತಾ ಸಮಿತಿ ಜಿಲ್ಲಾ ಸಂಯೋಜಕಿ ಕಾಂತಮ್ಮ ಹಾಗೂ ತಾಲ್ಲೂಕಿನ ಹೊನ್ನಾವರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರ ವಿವಾಹ ಸೋಮವಾರ ನಗರದ ಸೋಮೇಶ್ವರ ದೇವಾಲಯದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ನಡೆಯಿತು.

ಆದರೆ ತಾಳಿ ಕಟ್ಟಿದ ನಂತರ `ಕಾಂತಮ್ಮ ಅವರನ್ನು ಹೆಂಡತಿಯಾಗಿ ಸ್ವೀಕರಿಸಲು ವರದಕ್ಷಿಣೆ ನೀಡಬೇಕು ಇಲ್ಲವಾದರೆ ಮನೆಗೆ ಕರೆದೊಯ್ಯುವುದಿಲ್ಲ~ ಎಂದು ಮಂಜುನಾಥ್ ಪಟ್ಟು ಹಿಡಿದ ಪರಿಣಾಮ ಆತನ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಯಿತು.

 ಈ ಬಗ್ಗೆ ಮಾಹಿತಿ ನೀಡಿದ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಜಿ.ಲಕ್ಷ್ಮೀಪತಿ, `ಜಾತಿ ಕಾರಣ ನೀಡಿ ಕಾಂತಮ್ಮ ಅವರನ್ನು ಮದುವೆಯಾಗಲು ನಿರಾಕರಿಸುತ್ತಾ ಬಂದಿದ್ದ ಮಂಜುನಾಥ್‌ಗೆ ಈ ಮುನ್ನ ತಿಳಿವಳಿಕೆ ಹೇಳಲಾಗಿತ್ತು. ಆದರೂ ಆತ ಯಾರ ಮಾತಿಗೂ ಬೆಲೆ ಕೊಟ್ಟಿರಲಿಲ್ಲ.
 
ಕಾಂತಮ್ಮನಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ವಾದಿಸುತ್ತಿದ್ದ~ ಎಂದು ವಿವರಿಸಿದರು. ಮಂಜುನಾಥ್ ಕಾಂತಮ್ಮ ಅವರ ಜೊತೆ ಒಂದೂವರೆ ವರ್ಷಗಳಿಂದ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ಲಕ್ಷ್ಮೀಪತಿ ತಿಳಿಸಿದರು. ವಿವಾಹ ಸಂದರ್ಭದಲ್ಲಿ ಮಂಜುನಾಥ್ ದೇವಾಲಯದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದರಿಂದ ಮುಖಂಡರು ಆತನನ್ನು ಥಳಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಿ ಹಲ್ಲೆ ತಪ್ಪಿಸಿದರು.

ಬಲವಂತದ ಮದುವೆ: ಈ ಕುರಿತು ಹೇಳಿಕೆ ನೀಡಿರುವ ಪಿಡಿಒ ಮಂಜುನಾಥ್ `ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಬಲವಂತವಾಗಿ ವಿವಾಹ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT