ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾಂತ್ಯಕ್ಕೆ 1300 ಮನೆ ಹಸ್ತಾಂತರ

Last Updated 8 ಜನವರಿ 2011, 11:10 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ನೆರೆಸಂತ್ರಸ್ತ ಕುಟುಂಬ ವರ್ಗಕ್ಕೆ ಪುನರ್ವಸತಿ ಕಲ್ಪಿಸಲು ಆಸರೆ ಯೋಜನೆಯಡಿ ಜಿಲ್ಲೆಯ 51 ಗ್ರಾಮಗಳ ಸಂತ್ರಸ್ತರಿಗಾಗಿ ನಿರ್ಮಿಸಿರುವ 13,121 ಮನೆ ನಿರ್ಮಾಣ ಕಾಮಗಾರಿಯು ಮುಂದುವರಿದಿದ್ದು, ಈವರೆಗೆ ಜಿಲ್ಲೆಯಲ್ಲಿ 2800 ಮನೆ ಪೂರ್ಣಗೊಂಡಿವೆ. ಇದೇ ತಿಂಗಳು ಕೊನೆ ವಾರದಲ್ಲಿ 1300 ಮನೆಗಳನ್ನು ಸಂಬಂಧಪಟ್ಟ ಸಂತ್ರಸ್ತ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಹೆಚ್ಚು ಮನೆ ನಿರ್ಮಿಸಲಾಗಿದೆ. ಆದರೆ, ಸಂತ್ರಸ್ತರ ಬೇಡಿಕೆ, ಸಮಸ್ಯೆ ಶೀಘ್ರ ಪರಿಹಾರಕ್ಕೆ ಕಾಮಗಾರಿ ಇನ್ನಷ್ಟು ಚುರುಕುಗೊಳ್ಳಬೇಕು ಎಂದು ಸಂತ್ರಸ್ತರ ಆಗ್ರಹ ಮುಂದುವರಿದಿದೆ.

ಕಟಕನೂರಲ್ಲಿ ಸಿಸ್ಕೋ ಸಂಸ್ಥೆಯ ನೆರವಿನಡಿ 350, ಚಿಕ್ಕಮಂಚಾಲಿಯಲ್ಲಿ ಉದ್ದೇಶಿತ 325 ಮನೆ ನಿರ್ಮಾಣದಲ್ಲಿ 275 ಮನೆ ನಿರ್ಮಾಣ ಕೈಗೊಂಡಿದ್ದು, 105 ಪೂರ್ಣಗೊಂಡಿವೆ. 65 ಬುನಾದಿ ಹಂತ, 45 ಸಜ್ಜಾ ಹಂತದಲ್ಲಿವೆ. ಬಿಚ್ಚಾಲಿಯಲ್ಲಿ ಉದ್ದೇಶಿತ 1,120 ಮನೆ ನಿರ್ಮಾಣದಲ್ಲಿ 450 ಮನೆ ನಿರ್ಮಿಸುತ್ತಿದ್ದು, ಇದರಲ್ಲಿ 115 ಮನೆ ಪೂರ್ಣಗೊಂಡಿವೆ.125 ಬುನಾದಿ ಹಂತದಲ್ಲಿದ್ದು, 130 ಮನೆ ಪೂರ್ಣಗೊಂಡಿವೆ. ಎನ್ ಮಲ್ಕಾಪುರದಲ್ಲಿ 325 ಮನೆ ನಿರ್ಮಿಸಿ ಸಂತ್ರಸ್ತರಿಗೆ ವಿತರಣೆ ಮಾಡಲಾಗಿದೆ. ತಲಮಾರಿಯಲ್ಲಿ ಉದ್ದೇಶಿತ 1425 ಮನೆಗಳಲ್ಲಿ 500 ಮನೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 55 ಪೂರ್ಣಗೊಂಡಿವೆ. 180 ಬುನಾದಿ, 145 ಸಜ್ಜಾ ಹಂತದಲ್ಲಿದ್ದು, 120 ರೂಫ್ ಹಂತದಲ್ಲಿವೆ ಎಂದು ಜಿಲ್ಲಾಡಳಿತ ಮೂಲಗಳು ಹೇಳುತ್ತವೆ.

ಜಾಗೀರ ವೆಂಕಟಾಪುರ ಹೋಪ್ ಪ್ರತಿಷ್ಠಾನದ ನೆರವಿನಡಿ 90 ಮನೆ, ನಿರ್ಮಿತಿ ಕೇಂದ್ರದಿಂದ 60 ಮನೆ ನಿರ್ಮಿಸಿ ವಹಿಸಿಕೊಡಲಾಗಿದೆ. ಕುರವಕುರ್ದಾ, ಮಂಗಿಗಡ್ಡ, ಕುರವಕಲಾ, ಅಗ್ರಹಾರ ಗ್ರಾಮದ ಸಂತ್ರಸ್ತರಿಗೆ ಡೊಂಗಾರಾಂಪುರದಲ್ಲಿ 382 ಮನೆ ನಿರ್ಮಿಸಿ ಸಂತ್ರಸ್ತರಿಗೆ ನೀಡಲಾಗಿದೆ.

ದುಗನೂರು ಗ್ರಾಮದಲ್ಲಿ ತುಳಸಿ ಗೋಪಾಲ ಸಂಸ್ಥೆಯು 229 ಮನೆ ನಿರ್ಮಿಸುತ್ತಿದ್ದು ಇದರಲ್ಲಿ 140 ಪೂರ್ಣಗೊಂಡಿವೆ.25 ಬುನಾದಿ, 50 ರೂಫ್ ಹಂತದಲ್ಲಿವೆ. ರಘುನಾಥಹಳ್ಳಿಯಲ್ಲಿ ಉದ್ದೇಶಿತ 150 ಮನೆಗಳಲ್ಲಿ 140 ಮನೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 90 ಬುನಾದಿ ಹಂತದಲ್ಲಿದ್ದು, 50 ಮನೆ ಪೂರ್ಣಗೊಂಡಿವೆ. ಉಪ್ರಾಳದಲ್ಲಿ 130 ಮನೆ, ಗೋಡಿಹಾಳದಲಲ್ಲಿ 68 ಮನೆ, ಡೊಂಗಾರಾಂಪುರದಲ್ಲಿ ಮಾತಾ ಅಮೃತಾನಂದಮಯಿ ಸಂಸ್ಥೆಯಿಂದ 36 ಮನೆ, ಉಮಳಿ ಪನ್ನೂರಿನಲ್ಲಿ ಉದ್ದೇಶಿತ 190 ಮನೆಗಳಲ್ಲಿ 175 ಮನೆ ಪೂರ್ಣಗೊಂಡಿವೆ ಎಂದು ಜಿಲ್ಲಾಡಳಿತ ಹೇಳುತ್ತದೆ.

ಅದೇ ರೀತಿ ಖರಾಬದಿನ್ನಿಯಲ್ಲಿ  ಕಮ್ಮವಾರಿ ಸಂಘದಿಂದ ನಿರ್ಮಿಸಲಾಗುತ್ತಿರುವ ಉದ್ದೇಶಿತ 243 ಮನೆಗಳಲ್ಲಿ 75 ಪೂರ್ಣಗೊಂಡಿವೆ. 63 ಬುನಾದಿ ಹಂತದಲ್ಲಿದ್ದು, 60 ಸಜ್ಜಾ, 45 ರೂಫ್ ಹಂತದಲ್ಲಿವೆ. ಕಟ್ಟಾ ಪ್ರತಿಷ್ಠಾನವು ಕಾತರಕಿಯಲ್ಲಿ ನಿರ್ಮಿಸುತ್ತಿರುವ  ಉದ್ದೇಶಿತ 356 ಮನೆಗಳಲ್ಲಿ 300 ಮನೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 160 ಪೂರ್ಣಗೊಂಡಿವೆ. 30 ಬುನಾದಿ, 30 ಸಜ್ಜಾ, 80 ರೂಫ್ ಹಂತದಲ್ಲಿವೆ. ದದ್ದಲದಲ್ಲಿ ಟಾಟಾ ರಿಲಿಫ್ ಸಂಸ್ಥೆ ನೆರವಿನಡಿ ಉದ್ದೇಶಿತ 177 ಮನೆ ನಿರ್ಮಾಣದಲ್ಲಿ  22 ಪೂರ್ಣಗೊಂಡಿವೆ. 70 ಬುನಾದಿ, 50 ಸಜ್ಜಾ, 35 ರೂಫ್ ಹಂತದಲ್ಲಿವೆ.

ಚೀಕಲಪರ್ವಿಯಲ್ಲಿ ಕಟ್ಟಾ ಪ್ರತಿಷ್ಠಾನದಿಂದ ಉದ್ದೇಶಿತ 554 ಮನೆ ನಿರ್ಮಾಣದಲ್ಲಿ 485 ಮನೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 100 ಮನೆ ಕಾರ್ಯ ಮುಗಿದಿದೆ. 185 ಬುನಾದಿ, 80 ಸಜ್ಜಾ, 120 ರೂಫ್ ಹಂತದಲ್ಲಿವೆ. ಜೂಕೂರಲ್ಲಿ ಕಮ್ಮವಾರಿ ಸಂಘದಿಂದ ಉದ್ದೇಶಿತ 250 ಮನೆ ನಿರ್ಮಾಣದಲ್ಲಿ 202 ಮನೆ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ 110 ಪೂರ್ಣಗೊಂಡಿವೆ. 20 ಬುನಾದಿ, 27 ಸಜ್ಜಾ, 45 ರೂಫ್ ಹಂತದಲ್ಲಿವೆ ಎಂದು ಜಿಲ್ಲಾಡಳಿತದ ಮೂಲಗಳು ಹೇಳುತ್ತವೆ.

ದೇವದುರ್ಗ ತಾಲ್ಲೂಕಿನ ಅಪ್ರಾಳದಲ್ಲಿ ಬೆಂಗಳೂರಿನ ಸೇವಾ ಭಾರತಿ ಸಂಸ್ಥೆಯ ನೆರವಿನಡಿ 52 ಮನೆ ನಿರ್ಮಾಣ ಪೂರ್ಣಗೊಂಡಿದೆ. ಲಿಂಗಸುಗೂರು ತಾಲ್ಲೂಕು ಕಾಳಾಪುರದಲ್ಲಿ ಟಾಟಾ ರಿಲೀಫ್ ಸಂಸ್ಥೆ ನೆರವಿನಡಿ 36 ಮನೆ ನಿರ್ಮಾಣ ಪೂರ್ಣಗೊಂಡಿದೆ. ಸಿಂಧನೂರು ತಾಲ್ಲೂಕಿನ ಚಿಂತಮಾನದೊಡ್ಡಿಯಲ್ಲಿ ರಾಮಕೃಷ್ಣ ಆಶ್ರಮ ಸಂಸ್ಥೆ ನೆರವಿನಡಿ ಕೈಗೊಂಡ ಉದ್ದೇಶಿತ 146 ಮನೆ ನಿರ್ಮಾಣದಲ್ಲಿ 120 ಮನೆ ನಿರ್ಮಾಣ ಕೈಗೊಂಡಿದ್ದು, ಇದರಲ್ಲಿ 90 ಮನೆ ಪೂರ್ಣಗೊಂಡಿವೆ. ಅದೇ ಪುಲಮೇಶ್ವರ ದಿನ್ನಿಯಲ್ಲಿ ರಾಮಕೃಷ್ಣ ಆಶ್ರಮದ ನೆರವಿನಡಿ ಉದ್ದೇಶಿತ 86 ಮನೆ ನಿರ್ಮಾಣದಲ್ಲಿ 50 ಮನೆ ಪೂರ್ಣಗೊಂಡಿವೆ. 10 ರೂಫ್, 16 ಬುನಾದಿ ಹಂತದಲ್ಲಿವೆ ಎಂದು ಜಿಲ್ಲಾಡಳಿತ ಹೇಳುತ್ತದೆ.

ಜಿಲ್ಲೆಯಲ್ಲಿ ಒಟ್ಟು 13,121 ಮನೆ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಇದರಲ್ಲಿ 8,176 ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. 2,852 ಮನೆ ನಿರ್ಮಾಣ ಬುನಾದಿ, 1575 ಸಜ್ಜಾ ಹಾಗೂ 949 ರೂಫ್ ಹಂತದಲ್ಲಿದ್ದು, ಈವರೆಗೂ 2800 ಮನೆ ಪೂರ್ಣಗೊಂಡಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮನೆ ನಿರ್ಮಾಣ ಆರಂಭಗೊಳ್ಳದ ಊರುಗಳು: ರಾಯಚೂರು ತಾಲ್ಲೂಕು ಹೆಗ್ಗಸನಹಳ್ಳಿ, ವಡ್ಲೂರು, ಬುರ್ದಿಪಾಡ, ಮಾನ್ವಿ ತಾಲ್ಲೂಕಿನ ಅರನಹಳ್ಳಿ, ಯಡಿವಾಳ, ಮರಕಂದಿನ್ನಿ, ದೇವದುರ್ಗ ತಾಲ್ಲೂಕಿನ ಹಿರೇಕೂಡ್ಲಿಗಿ, ಸುಲದಗುಡ್ಡ, ಗೋವಿಂದಪಲ್ಲಿ, ಕರ್ಕಿಹಳ್ಳಿ, ಮೆದರಗೋಳ. ಮದರಕಲ್, ಹೇರುಂಡಿ, ಎಚ್ ಸಿದ್ದಾಪುರ, ಲಿಂಗಸುಗೂರು ತಾಲ್ಲೂಕಿನ ಸುಣಕಲ್, ಚಿಕ್ಕುಪ್ಪೇರಿ, ಸಿಂಧನೂರು ತಾಲ್ಲೂಕಿನ ಹುಲಗುಂಚಿ, ಹೆಡಗಿನಾಳ ಹಾಗೂ ಹರತನೂರು ಗ್ರಾಮದ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿ ಆರಂಭವಾದರೂ ಮನೆ ಪೂರ್ಣಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT