ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳೊಳಗಾಗಿ ರೈಲು ನಿಲ್ದಾಣ ಬಳಕೆಗೆ ಸಿ್ಧೆ

Last Updated 17 ಜುಲೈ 2012, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ತಿಂಗಳೊಳಗೆ ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸುವುದಾಗಿ ನೈರುತ್ಯ ರೈಲ್ವೆ ಮುಖ್ಯ ವ್ಯವಸ್ಥಾಪಕ ಎ.ಕೆ.ಮಿತ್ತಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎ ಬ್ಲಾಕ್ ಹೊರತುಪಡಿಸಿ ರೈಲು ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.  ಶೀಘ್ರ ವಿಧ್ಯುಕ್ತವಾಗಿ ಉದ್ಘಾಟನೆ ನೆರವೇರಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು. ಪ್ರಸ್ತುತ ಪ್ಲಾಟ್‌ಫಾರಂ 1 ಮತ್ತು 2ರ ನಡುವೆ ಸಬ್‌ವೇ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಎಲ್ಲಾ ಪ್ಲಾಟ್‌ಫಾರಂಗಳಿಗೆ ವಿಸ್ತರಿಸಲಾಗುವುದು.
 
ಹಾಲಿ ರೈಲು ನಿಲ್ದಾಣದಲ್ಲಿ ಐದು ಕ್ರ್ಯೂ ಪ್ಲಾಟ್‌ಫಾರಂ ಹಾಗೂ ಎರಡು ವಿಶೇಷ ರೈಲುಗಳ ಪ್ಲಾಟ್‌ಫಾರಂ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ರೈಲು ನಿಲ್ದಾಣ ಉದ್ಘಾಟನೆಗೊಂಡ ನಂತರ 18 ಸ್ವಯಂಚಾಲಿತ ಪ್ಲಾಟ್‌ಫಾರಂ ಟಿಕೆಟ್ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಗುಣಮಟ್ಟದ ಕಾಮಗಾರಿ, ಶ್ಲಾಘನೆ: ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿಯಲ್ಲಿ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಶ್ಲಾಘನೆ ವ್ಯಕ್ತಪಡಿಸಿದರು.

ನೂತನ ರೈಲು ನಿಲ್ದಾಣ ಸಂಕೀರ್ಣಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸರ್ಕಾರಿ ಸಂಸ್ಥೆಗಳಲ್ಲಿ ನಿರ್ಮಾಣ ಕಾಮಗಾರಿ ವೇಳೆ ಸಾಮಾನ್ಯವಾಗಿ ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ ಎಂಬ ಆರೋಪವಿದೆ ಅದಕ್ಕೆ ಅಪವಾದ ಎಂಬಂತೆ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ 2006ರಲ್ಲಿ ಆರಂಭವಾಗಿತ್ತು. ಮಧ್ಯೆ ಕೆಲ ಸಮಯ ಕಾಮಗಾರಿ ಸ್ಥಗಿತಗೊಂಡಿದ್ದರೂ ಈಗ ಪೂರ್ಣಗೊಳ್ಳುವ ಹಂತ ತಲುಪಲಿದೆ. 28 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 20 ಕೋಟಿ ರೂಪಾಯಿಯ ಕಾಮಗಾರಿ ಪೂರ್ಣಗೊಂಡಿದೆ ಎಂದರು.
 
ಲಿಫ್ಟ್, ಎಸ್ಕಲೇಟರ್, ಅಂಡರ್‌ಪಾಸ್,ರ‌್ಯಾಂಪ್ ಹಾಗೂ ಸ್ಟೆಪ್ ನಿರ್ಮಾಣ ಮಾಡಲಾಗುತ್ತಿದೆ. ಗಣೇಶಪೇಟೆ ಹಾಗೂ ಸ್ಟೇಶನ್ ರಸ್ತೆಯಿಂದ ಪ್ರವೇಶಾವಕಾಶ ಕಲ್ಪಿಸಲಾಗಿದೆ ಇದಕ್ಕೆ ರೈಲ್ವೆ ಇಲಾಖೆಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ವೀರಭದ್ರಪ್ಪ ಹಾಲಹರವಿ, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್‌ಕುಮಾರ್ ಮಿಶ್ರಾ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಮೇಯರ್ ಡಾ.ಪಾಂಡುರಂಗ ಪಾಟೀಲ ಹಾಜರಿದ್ದರು.

ಶೀಘ್ರ ರೈಲು ರೋಖೊ ಚಳವಳಿ: ಜೋಶಿ

ಹುಬ್ಬಳ್ಳಿ: ಬೆಂಗಳೂರು-ದೆಹಲಿ ಸಂಪರ್ಕಿಸುವ ರೈಲುಗಳನ್ನು ಹುಬ್ಬಳ್ಳಿ ಮೂಲಕ ಓಡಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ಚುನಾವಣೆಯ ನಂತರ ನಗರದಲ್ಲಿ `ರೈಲು ರೋಖೊ~ ಚಳವಳಿ ಆರಂಭಿಸಲಾಗುವುದು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಪ್ರಸ್ತುತ ಬೆಂಗಳೂರಿನಿಂದ ದೆಹಲಿ ಸೇರಿದಂತೆ ಉತ್ತರ ಭಾರತಕ್ಕೆ 11 ರೈಲುಗಳು ಓಡಾಟ ನಡೆಸುತ್ತಿವೆ. ಅವುಗಳಲ್ಲಿ ಬಹುತೇಕ ಯಶವಂತಪುರ, ಸಿಕಂದರಾಬಾದ್ ಮೂಲಕ ದೆಹಲಿ ತಲುಪುತ್ತಿವೆ ಇದರಿಂದ ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುಕೂಲವಾಗುತ್ತಿದೆ. ಕೂಡಲೇ ಎ್ಲ್ಲಲ ರೈಲುಗಳನ್ನು ಹುಬ್ಬಳ್ಳಿ ಮೂಲಕ ಓಡಿಸಲು ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದರು.

ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ತಾಂತ್ರಿಕವಾಗಿ ರಾಜ್ಯದ ಎಲ್ಲಾ ಭಾಗಗಳಿಗೂ ತಲುಪಬೇಕಿದೆ. ಆದರೆ ಆಂಧ್ರಪ್ರದೇಶದ ಮೂಲಕವೇ ಹೆಚ್ಚು ಓಡಾಡುತ್ತಿವೆ. ಇದರಿಂದ ರಾಜ್ಯದ ಜನತೆಗೆ ಯಾವುದೇ ಉಪಯೋಗವಿಲ್ಲ. ಈ ಬಗ್ಗೆ ರೈಲ್ವೆ ಸಚಿವ ಮುನಿಯಪ್ಪ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು ಆರೋಪಿಸಿದರು.
 
ಹಾಲಿ ವಾರದಲ್ಲಿ ಮೂರು ದಿನ ಸಂಚರಿಸುತ್ತಿರುವ ಸಂಪರ್ಕ ಕ್ರಾಂತಿಯನ್ನು ವಾರದ ಎಲ್ಲಾ ದಿನ ಹುಬ್ಬಳ್ಳಿ ಮೂಲಕ ಓಡಿಸುವಂತೆ ಒತ್ತಾಯಿಸಿದ ಅವರು, ಈ ಬಗ್ಗೆ ಇದೇ 20ರಂದು ರೈಲ್ವೆ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಅಲ್ಲಿ ಸೂಕ್ತ ಮನ್ನಣೆ ದೊರೆಯದಿದ್ದಲ್ಲಿ ಪ್ರತಿಭಟನೆ ಆರಂಭಿಸಲಾಗುವುದು ಎಂದರು.ಕೊಲ್ಲಾಪುರ-ಹೈದರಾಬಾದ್-ತಿರುಪತಿ ನಡುವೆ ಕಳೆದ ರೈಲ್ವೆ ಬಜೆಟ್‌ನಲ್ಲಿ ಹೊಸದಾಗಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆದರೆ ಇಲ್ಲಿಯವರೆಗೆ ತಿರುಪತಿಗೆ ಮಾತ್ರ ರೈಲು ಓಡಿಸಲಾಗುತ್ತಿದೆ. ಸದರಿ ರೈಲನ್ನು ಹೈದರಾಬಾದ್‌ವರೆಗೆ ವಿಸ್ತರಿಸಲಿ ತಪ್ಪಿದಲ್ಲಿ ಹುಬ್ಬಳ್ಳಿ- ಹೈದರಾ ಬಾದ್ ನಡುವೆ ವಿಶೇಷ ರೈಲು ಸಂಚಾರ ಆರಂಭಿಸಲಿ ಎಂದು ಜೋಶಿ ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT