ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿನಿಸುಗಳ ವ್ಯಾಪಾರಕ್ಕೆ ಮೀಸಲಾದ ಜಿಲ್ಲಾ ಮೈದಾನ

Last Updated 22 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿನ ಜಿಲ್ಲಾ ಕ್ರೀಡಾಂಗಣ ಆಟೋಟಕ್ಕಿಂತ ವ್ಯಾಪಾರಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು, ಕ್ರೀಡಾ ಮೈದಾನವು ಸರಿಯಾದ ನಿರ್ವ ಹಣೆ ಇಲ್ಲದೇ ಕ್ರೀಡಾಪಟುಗಳಿಗೆ, ವಾಯು ವಿಹಾರಕ್ಕೆ ತೆರಳುವ ಸಾರ್ವಜ ನಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ.

ನಗರದ ಹೃದಯ ಭಾಗದಲ್ಲಿರುವ 22 ಎಕರೆ ಜಾಗೆಯಲ್ಲಿ ಈಗಾಗಲೇ ಮುನ್ಸಿಪಲ್ ಹೈಸ್ಕೂಲ್, ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಈಜುಗೊಳ, ಟನ್ನಿಸ್ ಹಾಗೂ ಸ್ಕೇಟಿಂಗ್ ಮೈದಾನ ನಿರ್ಮಿಸಿ ಅಳಿದುಳಿದ ಮೈದಾ ನದ ಎದುರಿನ ಬಯಲು ಜಾಗೆಯನ್ನು ಜನರು ವಾಯು ವಿಹಾರ ಇಲ್ಲವೇ ಕ್ರೀಡಾ ಪಟುಗಳು ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಿಗಾಗಿ ಬಳಕೆ ಮಾಡಿಕೊಳ್ಳು ತ್ತಾರೆ.

ಆದರೆ, ಈ ಜಾಗದಲ್ಲಿ ಮೂಲ ಉದ್ದೇಶ ಮರೆತು ಅನ್ಯ ಕಾರ್ಯಗಳ ಬಳಕೆಗೆ ನಗರಸಭೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ನಗರದಲ್ಲಿ ಇದ್ದ ಒಂದು ಬಯಲು ಜಾಗೆಯೂ ಜನೋಪ ಯೋಗಿಯಾಗುವ ಬದಲು ವ್ಯಾಪಾರಿಗಳ ತಾಣವಾಗಿ ಸಾರ್ವಜನಿಕರಿಗೆ ಯಾವುದೇ ಪ್ರಯೋಜನಕ್ಕೆ ಬಾರದಾಗಿದೆ.

ಜಿಲ್ಲಾ ಕ್ರೀಡಾಂಗಣ ಹೊರತು ಪಡಿಸಿ ಎದುರಿನ ಸುಮಾರು ಏಳೆಂಟು ಎಕರೆ ಜಾಗೆ ವಾಯು ವಿಹಾರಕ್ಕೆ ತೆರಳುವ ವೃದ್ಧರಿಗೆ ಹಾಗೂ ಕ್ರೀಡೆಗಳನ್ನು ಆಡುವ ವಿದ್ಯಾರ್ಥಿಗಳಿಗೆ, ಯುವಕರಿಗೆ ಬಹಳ ವರ್ಷಗಳಿಂದ ಅನುಕೂಲ ಕಲ್ಪಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಆ ಜಾಗೆ ಸಂಜೆಯಾಯಿತೆಂದರೆ ಸಾಕು ಪಾನಿಪುರಿ, ಬೇಲ್‌ಪುರಿ, ಗಿರಮಿಟ್ಟ, ಗೋಬಿ ಮಂಚೂರಿ, ಐಸ್ಕ್ರೀಂ, ಆಮ್ಲೇಟ್, ಎಗ್‌ರೈಸ್‌ನಂತಹ ತಿನಿಸುಗಳ ಗೂಡಂಗಡಿ ಗಳು ಜಿಲ್ಲಾ ಮೈದಾನವನ್ನು ಅಕ್ರಮಿಸಿ ಕೊಂಡು, ಅದನ್ನೊಂದು ಕುರಕಲು ತಿಂಡಿಗಳ ತಾಣವನ್ನಾಗಿ ಮಾಡಿವೆ. ಜನರು ಸಹಜವಾಗಿ ತಿಂಡಿಗಳಿಗೆ ಆಕರ್ಷಿ  ತರಾಗಿ ಮೈದಾನದತ್ತ ಆಗಮಿಸುತ್ತಾರೆ. ಅದೇ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಜನರಿಗೆ ವಾಯು ವಿಹಾರಕ್ಕೆ ಜಾಗವೇ ಇಲ್ಲದೇ ನಗರಸಭೆ ವಿರುದ್ಧ ಹಿಡಿಶಾಪ ಹಾಕುತ್ತಿ ದ್ದಾರೆ.

ಜನತೆಗೆ ಕ್ರೀಡೆ, ವಾಯು ವಿಹಾರ ದಿಂದ ಆರೋಗ್ಯ ನೀಡಬೇಕಾದ ಮೈದಾನ ಕರೀದ ಹಾಗೂ ಮಸಾಲೆ  ಯುಕ್ತ ಫಾಸ್ಟ್ ಪುಡ್‌ನ ಪದಾರ್ಥಗಳ ಮೂಲಕ ಜನರ ಆರೋಗ್ಯಕ್ಕೆ ಮಾರಕ ವಾಗುತ್ತಿವೆ. ಇದ್ಯಾವುದರ ಬಗ್ಗೆ ಕಾಳಜಿ ಇಲ್ಲದ ನಗರಸಭೆ ಅಂತಹ ಗೂಡಂಗಡಿ ಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಲೂತ್ತಿಲ್ಲ ಎಂಬುದು ವಾಯುವಿಹಾರಿಗಳಾದ ನಿವೃತ್ತ ಅಧಿಕಾರಿ ಜಗನ್ನಾಥ ಕಲಾಲ, ಸ್ವಾತಂತ್ರ್ಯ ಹೋರಾಟಗಾರ ಕರ್ಪೂರ ಆರೋಪಿಸುತ್ತಾರೆ.

ಆಟವಾಡಲು ಹಿಂಜರಿಕೆ: ಮೈದಾನ ದಲ್ಲಿ ಕ್ರೀಡಾಪಟುಗಳು ಯಾವುದೇ ಅಡೆತಡೆ ಇಲ್ಲದೇ ಆಟವಾಡಲು ಹಿಂಜರಿ ಯುವಂತ ಸ್ಥಿತಿ ಜಿಲ್ಲಾ ಕ್ರೀಡಾಂಗಣದ ಎದುರಿನ ಬಯಲು ಜಾಗದಲ್ಲಿದೆ. ಬಿಸಿಲಿನ ಪ್ರಖರತೆ ಕಡಿಮೆಯಾಗು ತ್ತಿದ್ದಂತೆ ಸಂಜೆ ಕ್ರೀಡಾಪಟುಗಳು ಕ್ರಿಕೆಟ್, ಹ್ಯಾಂಡ್‌ಬಾಲ್ ಹಾಗೂ ಇತರ ಕ್ರೀಡೆಗಳನ್ನು ಆಡಲು ಬರುತ್ತಾರೆ.

ಆದರೆ, ಮೈದಾನದಲ್ಲಿ ಗೂಡಂಗಡಿಗಳು ನಿಲ್ಲುವುದರಿಂದ ಜನರು ಅದರ ಸುತ್ತಲು ಜಮಾಯಿಸಿರುತ್ತಾರೆ. ಹೀಗಾಗಿ ಕ್ರೀಡಾಪಟುಗಳು ಯಾವುದೇ ಆತಂಕ ವಿಲ್ಲದೇ ಆಟವಾಡುವುದು ಕಷ್ಟವಾಗು ತ್ತದೆ. ಯಾರಿಗಾದರೂ ಚಂಡು ಬಡಿದರೆ ಹೇಗೆ ಎಂಬ ಹೆದರಿಕೆಯಿಂದಲೇ ಆಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ ಕ್ರೀಡಾಪಟುಗಳಾದ ಕೆಂಚಪ್ಪ ಲಿಂಗದಹಳ್ಳಿ, ನವೀನ ಬೆನ್ನೂರ.

ಮೈದಾನದಲ್ಲಿ ಗಲೀಜು: ತಿಂಡಿ ತಿನಿಸುಗಳ ಗೂಡಂಗಡಿಗಳು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇರುತ್ತವೆ. ಆ ಸಮಯದಲ್ಲಿ ಬಳಕೆಯಾ ಗುವ ಹಾಳೆ, ಪೇಪರ್ ಪ್ಲೇಟುಗಳು, ನೀರು, ಚಹಾದ ಕಪ್ಪುಗಳು ಎಲ್ಲೆಂದರಲ್ಲಿ ಬೀಳುತ್ತಿವೆಯಲ್ಲವೇ, ತಿಂಡಿ, ತಿನಿಸುಗಳ ಮುಸುರಿಯನ್ನು ಅದೇ ಮೈದಾನದಲ್ಲಿ ಹಾಕುವುದರಿಂದ ಇಡೀ ಮೈದಾನ ಗಲೀಜು ಆಗುತ್ತದೆ. ಅದನ್ನು ತಿನ್ನಲು ಹಂದಿ, ನಾಯಿಗಳು ಬರುವುದರಿಂದ ಅವುಗಳ ಕಾಟವೂ ವಾಯು ವಿಹಾರಿ ಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಕಿರಿಕಿರಿ ಯನ್ನು ಮಾಡುತ್ತವೆ.
 
ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಗೂಡಂಗಡಿ ಗಳಿಗೆ ವ್ಯಾಪಾರ ವಹಿವಾಟು ನಡೆಸಲು ಪರ್ಯಾಯ ಜಾಗೆ ನೀಡಬೇಕು. ಕ್ರೀಡಾ ಉದ್ದೇಶಕ್ಕಾಗಿಯೇ ಇರುವ ಮೈದಾವನ್ನು ಅದೇ ಉದ್ದೇಶಕ್ಕಾಗಿ ಬಳಕೆ ಮಾಡಿ ಕೊಳ್ಳಬೇಕು ಎಂಬುದು ಕ್ರೀಡಾಭಿಮಾನಿ ಗಳ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT