ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮಾಪುರ ವಿರುದ್ಧ ಹಕ್ಕುಚ್ಯುತಿ

ಕಾರಜೋಳ ಮನವಿಗೆ ಸ್ಪೀಕರ್‌ ಸಮ್ಮತಿ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರ ವಿರುದ್ಧ ಬಿಜೆಪಿಯ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಗುರು­ವಾರ ಹಕ್ಕುಚ್ಯುತಿ ಮಂಡಿಸಿದರು. ಕಳೆದ ವಿಧಾನಸಭಾ ಚುನಾವಣೆ­ಯಲ್ಲಿ ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ತಿಮ್ಮಾಪುರ ಅವರ­ನ್ನು ಕಾರಜೋಳ ಪರಾಭವಗೊಳಿಸಿ­ದ್ದರು.

ಮುಧೋಳದ ಶಾಸಕರಾದ ತಾವು ಅಧಿವೇಶನದಲ್ಲಿ ಭಾಗಿಯಾಗಿರು­ವಾಗ ಮುಧೋಳ ಪುರಸಭೆಯ ಸುಮಾರು ₨ ೩ ಕೋಟಿ ಮೊತ್ತದ ಯೋಜನೆಗಳ ಕಾಮಗಾರಿಗೆ ತಿಮ್ಮಾಪುರ ಅವರು ಗುದ್ದಲಿಪೂಜೆ ಮಾಡಿದ್ದಾರೆ. ಇದರಿಂದ ತಮ್ಮ ಹಕ್ಕಿಗೆ ಚ್ಯುತಿಯಾಗಿದ್ದು ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿ ಗೆ ಒಪ್ಪಿಸಬೇಕು ಎಂದು ಕಾರಜೋಳ ಮನವಿ ಮಾಡಿಕೊಂಡರು. ಇದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT