ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮಾಪುರದಲ್ಲೊಬ್ಬ ಆದರ್ಶ ಶಿಕ್ಷಕ

Last Updated 7 ಸೆಪ್ಟೆಂಬರ್ 2011, 9:50 IST
ಅಕ್ಷರ ಗಾತ್ರ

ಗುತ್ತಲ: ಅವರೊಬ್ಬ ಪ್ರಾಥಮಿಕ ಶಾಲೆ ಶಿಕ್ಷಕ, ಅವರಿಗೆ ಶಾಲೆ ಆರಂಭವಾಗು ವುದೇ ಬೆಳಗಿನ ಆರು ಗಂಟೆಗೆ, ಬಿಡು ವುದು ರಾತ್ರಿ ಒಂಬತ್ತು ಗಂಟೆಗೆ. ಸತತ 19 ವರ್ಷಗಳಿಂದ ದಿನದ ಹದಿನಾಲ್ಕು ಗಂಟೆಗಳ ಕಾಲ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಹೌದು, ತಮ್ಮ ಜೀವನದ ಬಹು ಪಾಲು ಸಮಯವನ್ನು ವಿದ್ಯಾರ್ಥಿ ಗಳೊಂದಿಗೆ ಕಳೆಯುವ ಶಿಕ್ಷಕರೊಬ್ಬರು ಸಮೀಪದ ತಿಮ್ಮಾಪೂರ(ಎಂಜಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾರೆ.

ಆ ಶಿಕ್ಷಕರ ಹೆಸರು ಮಾರುತಿ ಈಳ ಗೇರ. ತಮ್ಮ ಸೇವೆಗೆ ಸೇರಿದಾಗಿನಿಂದ ಈವರೆಗೆ ವೃತ್ತಿಯನ್ನು ನೌಕರಿ ಎಂದು ಪರಿಗಣಿಸದೇ ಅದೊಂದು ತಪಸ್ಸು ಎಂದುಕೊಂಡಿರುವ ಇವರು, ತಿಮ್ಮಾ ಪುರ ಗ್ರಾಮದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಜನಪ್ರಿಯರಾಗಿದ್ದಾರೆ.

1992 ಆಗಸ್ಟ್ 21 ರಂದು ಸೇವೆಗೆ ಸೇರಿದ ಶಿಕ್ಷಕ ಈಳಗೇರ ಅವರು, ದಿನದ ಹದಿನಾಲ್ಕು ಗಂಟೆ ಸೇವೆ ಸಲ್ಲಿಸಿದರೂ ತಮ್ಮ 19 ವರ್ಷದ ಅವಧಿಯಲ್ಲಿ ಕೇವಲ 5 ರಜೆಗಳನ್ನು ಮಾತ್ರ ಉಪ ಯೋಗಿಸಿದ್ದಾರೆ. ಅಲ್ಲದೇ ಕಳೆದ 15 ವರ್ಷಗಳಿಂದ ಒಂದೇ ಒಂದು ಯಾವುದೇ ರೀತಿಯ ರಜೆ ಹಾಕದೆ ಸೇವೆ ಸಲ್ಲಿಸುವ ಮೂಲಕ ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಗ್ರಾಮದ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಕರೆದುಕೊಂಡು ಶಾಲಾ ಆವರಣಕ್ಕೆ ಬರುವ ಇವರ ದಿನಚರಿ ಮುಕ್ತಾಯಗೊಳ್ಳುವುದು ರಾತ್ರಿ 9 ಗಂಟೆಗೆ. ಯೋಗ ಹಾಗೂ ನೈತಿಕ ಶಿಕ್ಷಣ ದಿನ ಶಿಕ್ಷಕ ಈಳಗೇರ ಅವರ ಪ್ರಥಮ ಪಾಠ. ರಾತ್ರಿ 9 ಗಂಟೆಯವರೆಗೆ 5,6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ಪ್ರತಿದಿನ ನಡೆಸುತ್ತಾರೆ.
 
ಆಂಗ್ಲ ಭಾಷಾ ಕಲಿಕೆ ಯಲ್ಲಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ನಗರ ವಿದ್ಯಾರ್ಥಿಗಳೊಂದಿಗೆ ಪೈಪೊಟಿ ನಡೆಸುವಷ್ಟರ ಮಟ್ಟಿಗೆ ತರಬೇತಿಗೊಳಿಸುವುದರ ಬಗ್ಗೆ ವಿಶೇಷ ಕಾಳಜಿ ವಹಿ ಸಿರುವ ಈಳಗೇರ ಅವರಿಗೆ ಶಾಲೆಯ ಉಳಿದ ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ.

ಬೋಧನೆಗಷ್ಟೇ ಸೀಮಿತವಾಗದ ಈಳಗೇರ ಅವರು, ಶೈಕ್ಷಣಿಕ ಗುಣ ಮಟ್ಟ ಸುಧಾರಿಸಲು ಇಲಾಖೆಯ ಹಲವು ಯೋಜನೆಗಳ ಹೊರತಾ ಗಿಯೂ ಶಿಕ್ಷಕರಲ್ಲಿ  ಸಮರ್ಪಣಾ ಮನೋಭಾವ ಮೂಡುವುದು ಅಗತ್ಯ ಎನ್ನುತ್ತಾರೆ.

ಯಾವುದೇ ಪ್ರಶಸ್ತಿಗಳ ಬೆನ್ನು ಬೀಳದ ಮಾರುತಿ ಈಳಗೇರ ಅವರು ಈವರೆಗೆ ಯಾವುದೇ ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಆದರೂ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಅವರನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿ ಸಿದೆ.

ಈಳಗೇರ ಅವರ ಕಾರ್ಯ ವೈಖರಿ ಅನುಕರಣೀಯವಾಗಿದ್ದು, ಪ್ರತಿಯೊಬ್ಬ ಶಿಕ್ಷಕರು ಇದನ್ನು ಅಳವಡಿಸಿಕೊಂಡರೆ ಸರ್ಕಾರಿ ಶಾಲೆಗಳ ಕುರಿತು ಪಾಲಕರಲ್ಲಿ ಉತ್ತಮ ಅಭಿಪ್ರಾಯ ಬಿಂಬಿಸಲು ಸಾಧ್ಯ ಎಂದು ಅದೇ ಶಾಲೆಯ ಶಿಕ್ಷಕ ಕೆ.ಆರ್.ಕಟ್ಟಿಮನಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT