ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವಾಂಕೂರು ರಾಜವಂಶಸ್ಥ ಮಾರ್ತಾಂಡ ವರ್ಮ ನಿಧನ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ತಿರು­ವಾಂ­ಕೂರು ರಾಜವಂಶಸ್ಥ ಉತ್ರಾಡಂ ತಿರುನಾಳ್‌ ಮಾರ್ತಾಂಡ­ವರ್ಮ ಸೋಮವಾರ ಬೆಳಿಗ್ಗೆ ಹೃದಯಾಘಾತ­ದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

91 ವರ್ಷದ ವರ್ಮ ಸುಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಜೀರ್ಣಾಂಗನಾಳದ ರಕ್ತಸ್ರಾವದ ಕಾರಣ ಕಳೆದ ವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕುಂಟುಂಬ ಮೂಲಗಳು ತಿಳಿಸಿವೆ.

ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಇವರ ಪತ್ನಿ ಈ ಮೊದಲೇ ಮರಣ ಹೊಂದಿದ್ದಾರೆ.

ತಿರುವಾಂಕೂರು ಸಂಸ್ಥಾನದ ಕಡೆಯ ರಾಜರಾಗಿದ್ದ ಇವರ ಹಿರಿಯ ಸಹೋದರ ಚಿತಿರಾ ತಿರುನಾಳ್‌ ಬಲ­ರಾಮ ವರ್ಮಾ 1991ರಲ್ಲಿ ನಿಧನ­ರಾದ ನಂತರ ಮಾರ್ತಾಂಡ ವರ್ಮ ರಾಜಮನೆತನದ ಮುಖ್ಯಸ್ಥರಾ­ಗಿದ್ದರು.

2011ರಲ್ಲಿ ಪದ್ಮನಾಭಸ್ವಾಮಿ ದೇವಾಲ­ಯದ ನೆಲಮಾಳಿಗೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾ­ಭರಣಗಳು ಪತ್ತೆಯಾದಾಗ ದೇವಸ್ಥಾನ ಮತ್ತು ರಾಜಮನೆತನ ಎರಡೂ ಪ್ರಸಿದ್ಧಿಗೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT