ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀನ್ ಪ್ರಹಾರ್‌ನಿಂದ ಗಾನ-ವಾದನ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬನ್ಯಾನ್ ಟ್ರೀಸ್: ತೀನ್ ಪ್ರಹಾರ್ ಸಂಗೀತ ಕಾರ್ಯಕ್ರಮದಲ್ಲಿ ದೇವಕಿ ಪಂಡಿತ್ ಅವರಿಂದ ಹಿಂದುಸ್ತಾನಿ ಗಾಯನ. ಟಿ.ಎಂ. ಕೃಷ್ಣ(ಕರ್ನಾಟಕಿ ಗಾಯನ), ಪುರ‌್ಬಯಾನ್ ಚಟರ್ಜಿ(ಸಿತಾರ್) ಹರಿಪ್ರಸಾದ್ ಚೌರಾಸಿಯಾ (ಕೊಳಲು). ಚೌಡಯ್ಯ ಮೆಮೊರಿಯಲ್ ಸಭಾಂಗಣ, ವೈಯಾಲಿಕಾವಲ್. ಸಂಜೆ 5.


ಬೆಳಗಿನ ಜಾವದ ಬ್ರಾಹ್ಮಿ ಮುಹೂರ್ತ, ಸೂರ್ಯೋದಯ, ಸೂರ್ಯಾಸ್ತ, ಮಧ್ಯರಾತ್ರಿ- ಹೀಗೆ ಇಡೀದಿನದಲ್ಲಿ ನಾಲ್ಕು ಭಾಗ. ಮನುಷ್ಯನ ಮನಸು ಮತ್ತು ಭಾವಗಳು ಈ ಸಮಯದಲ್ಲಿ ಒಂದೇ ಬಗೆಯಾಗಿರುವುದಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಬೆಳಗಿನ ರಾಗ, ಮಧ್ಯಾಹ್ನ, ಇಳಿ ಸಂಜೆ ಹಾಗೂ ರಾತ್ರಿಯ ರಾಗಗಳನ್ನು ಸಂಗೀತದಲ್ಲಿ ಸಂಯೋಜಿಸಲಾಗಿದೆ.

ಭೈರವ ಮತ್ತು ಜೋಗಿಯಾ ರಾಗಗಳನ್ನು ಬೆಳಗಿನ ಜಾವದ ರಾಗಗಳೆಂದು ಗುರುತಿಸಲಾಗುತ್ತದೆ. ಸಾರಂಗ ರಾಗವನ್ನು ಮಧ್ಯಾಹ್ನಕ್ಕೂ, ಯಮನ್ ರಾಗವನ್ನು ಸಂಜೆಗೂ ಬಾಗೇಶ್ರಿ ರಾಗವನ್ನು ರಾತ್ರಿಗೆಂದೂ ಪರಿಗಣಿಸಲಾಗಿದೆ. ಹೀಗೆ ಮೂರನೆಯ ಪ್ರಹರಿ ಎಂದು ಸಂಜೆಯ ರಾಗಗಳನ್ನು ನುಡಿಸುವ ಕಛೇರಿಯನ್ನು `ಬಾನ್ಯನ್ ಟ್ರೀಸ್~ ಆಯೋಜಿಸಿದೆ.
 

ತೀನ್ ಪ್ರಹಾರ್‌ನಲ್ಲಿ ದೇವಕಿ ಪಂಡಿತ್ ಹಿಂದುಸ್ತಾನಿ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಟಿ.ಎಂ. ಕೃಷ್ಣ ಕರ್ನಾಟಕ ಶಾಸ್ತ್ರೀಯ ಗಾಯನವನ್ನು, ಪೂರ್ಬಯಾನ್ ಚಟರ್ಜಿ ಸಿತಾರ್ ವಾದನವನ್ನು ಪ್ರಸ್ತುತ ಪಡಿಸಲಿದ್ದಾರೆ.
 

ಇವರೊಂದಿಗೆ ಹಿರಿಯ ಜೀವ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲು ವಾದನ ನಾದನದಿಯನ್ನೇ ಹರಿಸಲಿದೆ. ಮಾಹಿತಿ ಮತ್ತು ಟಿಕೆಟ್‌ಗೆ ಸಂಪರ್ಕಿಸಿ: ಲ್ಯಾಂಡ್‌ಮಾರ್ಕ್, ಕೋರಮಂಗಲ, ದೂ: 42404240. ಕೆ.ಸಿ.ದಾಸ್, ಸೆಂಟ್ ಮಾರ್ಕ್ಸ್ ರಸ್ತೆ, ದೂ: 25592021. ಒಡಿಸ್ಸಿ, ಆರ್.ಟಿ.ನಗರ, ದೂ: 41742071.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT