ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಸೇತುವೆ ನಿರ್ಮಾಣ ಪೂರ್ಣ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ರಾಯಚೂರು:  ಪ್ರವಾಹದಿಂದ 2009 ಅಕ್ಟೋಬರ್ ತಿಂಗಳಲ್ಲಿ ಕೊಚ್ಚಿ ಹೋಗಿದ್ದ ರಾಯಚೂರು-ಮಂತ್ರಾಲಯ ಸಂಪರ್ಕ ಕಲ್ಪಿಸುವ `ತುಂಗಭದ್ರಾ ಸೇತುವೆ~ ಮರು ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಆ.3ರಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ನಿರ್ಧರಿಸಿದೆ.

ಆಗಸ್ಟ್ ಮೊದಲ ವಾರದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ಮಹೋತ್ಸವಕ್ಕೆ ಭಕ್ತರು ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 3ರಂದು ಲಘು ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆ.3ರಂದು ಲಘು ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳ್ಳಲಿದೆ. ಆಗಸ್ಟ್ 15ರಂದು ಭಾರಿ ವಾಹನ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಲಾಗುವುದು. ಜರ್ಮನ್ ತಂತ್ರಜ್ಞಾನ ಅಳವಡಿಸಿಕೊಂಡು ಅತ್ಯಾಧುನಿಕ ಸೂಪರ್ ಸ್ಟ್ರಕ್ಚರ್ ವಿನ್ಯಾಸದ ` ಉಕ್ಕಿನ (ಸ್ಟೀಲ್) ಸೇತುವೆ~ ಇದಾಗಿದೆ. ರಾಜ್ಯದಲ್ಲಿ ನಿರ್ಮಾಣಗೊಂಡ ಪ್ರಪ್ರಥಮ ಕಬ್ಬಿಣದ ಸೇತುವೆ   ಎಂಬ ಹೆಗ್ಗಳಿಕೆ ಹೊಂದಿರುವುದಾಗಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಸೇತುವೆ ಉದ್ದ ಒಟ್ಟು 600 ಮೀಟರ್. ಅಗಲ 12 ಮೀಟರ್ ಇದೆ. (ಇದರಲ್ಲಿ 8.6 ಮೀಟರ್ ವಾಹನ ಸಂಚಾರಕ್ಕೆ, ಪಾದಚಾರಿ ಸಂಚಾರಕ್ಕೆ ಎಡಕ್ಕೆ 5 ಅಡಿ, ಬಲಕ್ಕೆ 5 ಅಡಿ) ಈಗಾಗಲೇ ಕಬ್ಬಿಣದ ಸ್ಟ್ರಕ್ಚರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 15 ಸಿಮೆಂಟ್ ಕಾಂಕ್ರೀಟ್ ಹಾಸು (ಸ್ಲ್ಯಾಬ್) ಹಾಕಬೇಕು. ಇದರಲ್ಲಿ 6 ಪೂರ್ಣಗೊಂಡಿದ್ದು, 7ನೇಯದ್ದು ನಿರ್ಮಾಣ ಆಗುತ್ತಿದೆ.
 
ಇನ್ನುಳಿದ 8 ಕಾಂಕ್ರೀಟ್ ಸ್ಲ್ಯಾಬ್ ಹಾಕುವ ಕಾರ್ಯ ಐದಾರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ 15 ದಿನ ಸಂಸ್ಕರಣೆ ಮಾಡಲಾಗುತ್ತದೆ. ಇವೆಲ್ಲ ಕೆಲಸಗಳು  ಜುಲೈ 31ರಷ್ಟೊತ್ತಿಗೆ ಪೂರ್ಣಗೊಳ್ಳುವುದು. ಈಚೆಗೆ, ರಾಯಚೂರು ಜಿಲ್ಲಾಧಿಕಾರಿ ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸೇತುವೆ ವೀಕ್ಷಿಸಿದ್ದಾರೆ ಎಂದು ನಿಗಮದ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಿರೀಶ್ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT