ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಾ ನದಿಗೆ ಬೇಕಿದೆ ಸಂಚಾರಕ್ಕೆ ಸೇತುವೆ

Last Updated 15 ಫೆಬ್ರುವರಿ 2011, 16:05 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ತೀರದ 2 ಗ್ರಾಮಗಳಾದ ಮತ್ತೂರು ಮತ್ತು ಹೊಸಹಳ್ಳಿಯಲ್ಲಿ ಸಂಸ್ಕೃತ ಭಾಷೆಯನ್ನು ಬಹುಮಟ್ಟಿಗೆ ಬಳಸುವುದರ ಮೂಲಕ ಆ ಭಾಷೆಯನ್ನು ಜೀವಂತವಾಗಿಟ್ಟಿರುವುದು ತಿಳಯದ ವಿಷಯವೇನಲ್ಲ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣವನ್ನು ಸಂಗೀತ ಗ್ರಾಮವೆಂದು ಕರೆಯಲಾಗುತ್ತಿದೆ.

ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಗಳು ತುಂಗಾ ನದಿ ತೀರದ ಇಕ್ಕೆಲಗಳಲ್ಲಿವೆ. ಆದರೆ ಈ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಗ್ರಾಮದವರು ಮತ್ತೂರಿನಿಂದ ಹೊಸಹಳ್ಳಿಗೆ ಅಥವಾ ಹೊಸಹಳ್ಳಿಯಿಂದ ಮತ್ತೂರಿಗೆ ಹೋಗಿ ಬರಲು ತುಂಗಾ ನದಿಯನ್ನು ಕಾಲ್ನಡಿಗೆಯಿಂದಲೇ ದಾಟಬೇಕಾಗಿದೆ. ವಾಹನಗಳಲ್ಲಿ ಓಡಾಡಬೇಕಾದರೆ ಸುಮಾರು 10 ಕಿ.ಮೀ. ದೂರದಲ್ಲಿರುವ ಶಿವಮೊಗ್ಗಕ್ಕೆ ಹೋಗಿಯೇ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ತಲುಪಬೇಕಾದ ಪ್ರಸಂಗ ಅನಿವಾರ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಮತ್ತೂರು-ಹೊಸಹಳ್ಳಿ ಗ್ರಾಮಗಳಿಗೆ ಓಡಾಡುವುದಕ್ಕೆ ಸಂಪರ್ಕ ಸಾಧನವನ್ನು ಬಲಪಡಿಸುವ ಅಗತ್ಯ ಹಿಂದಿನ ದಿನಗಳಿಗಿಂತ ಈಗ ಹೆಚ್ಚಾಗಿದೆ. ಈ ದಿಶೆಯಲ್ಲಿ ವಾಹನಗಳಿಗೂ ಸಂಚಾರಕ್ಕೆ ಅವಕಾಶವಾಗುವಂತೆ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದಲ್ಲಿ ಬಹಳ ಅನುಕೂಲವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT