ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ್ದರೂ ಕಡಿಮೆ ಆಯ್ತು

ಮಾಡಿ ನಲಿ ಸರಣಿ-24
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ವಿಧಾನ
1.ಒಂದು ಪ್ರನಾಳದಲ್ಲಿ ((tube)1/3 ದಷ್ಟು ಪುಡಿ ಉಪ್ಪನ್ನು ತೆಗೆದುಕೊಳ್ಳಿ.
2.ಪ್ರನಾಳದ ಬಾಯಿಯ ಕೆಳಗೆ ಒಂದು ರಬ್ಬರ್ ಬ್ಯಾಂಡ್ ಹಾಕಿ.
3.ಅನಂತರ ಸಾವಕಾಶವಾಗಿ ಪ್ರನಾಳದಲ್ಲಿ ನೀರನ್ನು ಹಾಕುತ್ತಾ ಹೋಗಿ. ನೀರಿನ ಮಟ್ಟ ರಬ್ಬರ್ ಬ್ಯಾಂಡ್‌ನವರೆಗೂ ಬರಲಿ.

ಪ್ರಶ್ನೆ
ಈಗ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ, ಜೋರಾಗಿ ಅಲುಗಾಡಿಸಿ ಇಡಿ. ಪ್ರನಾಳದಲ್ಲಿ ಆದ ಬದಲಾವಣೆ ಏನು? ಯಾಕೆ?

ಉತ್ತರ
ದ್ರಾವಣದ ಮಟ್ಟ ರಬ್ಬರ್ ಬ್ಯಾಂಡ್‌ಗಿಂತಲೂ ಸ್ವಲ್ಪ ಕೆಳಗಿರುತ್ತದೆ. ಯಾಕೆಂದರೆ ಉಪ್ಪು ನೀರಿನಲ್ಲಿ ಕರಗಿದಾಗ, ಉಪ್ಪಿನ ಅಣುಗಳು (NaCl)ಒಡೆದು ಸೋಡಿಯಂ (Na) ಹಾಗೂ ಕ್ಲೋರಿನ್ (Cl) ಅಯಾನುಗಳಾಗುತ್ತವೆ. ಈ ಅಯಾನುಗಳು ಉಪ್ಪಿನ ಅಣುಗಳಿಗಿಂತ ತೀರಾ ಚಿಕ್ಕವು.

ಇವು ನೀರಿನ ಅಂತರಾಣ್ವಕ ಸ್ಥಳವನ್ನು (Intermolecular space)  ಆಕ್ರಮಿಸುತ್ತವೆ. ಹೀಗಾಗಿ ಒಟ್ಟು ಗಾತ್ರ ಕಡಿಮೆಯಾಗಿ ಪ್ರನಾಳದಲ್ಲಿ ದ್ರಾವಣದ ಮಟ್ಟ ಕುಗ್ಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT