ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬು ಹೃದಯದ ಸ್ವಾಗತ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಜೀವನದಲ್ಲಿ ಹೊಸತನ ಒಂದಿಲ್ಲೊಂದು ರೀತಿಯಲ್ಲಿ ಬಂದೇ ಬರುತ್ತದೆ. ಅದು ಅನಿವಾರ್ಯ ಕೂಡ. ಶೈಕ್ಷಣಿಕ ಜೀವನದಲ್ಲಿಯೂ ಅಷ್ಟೆ. ಹೊಸ ಬದುಕು, ಹೊಸ ಸಂಸ್ಥೆ, ಹೊಸ ಶಿಕ್ಷಣ ಕ್ರಮ ಹೀಗೆ ಅಲ್ಲೂ ಹೊಸತನ ಅನಿವಾರ್ಯ.

ಪ್ರಾಥಮಿಕ ಶಿಕ್ಷಣದ ಬಳಿಕ ಪ್ರೌಢಶಾಲಾ ವಿದ್ಯಾಭ್ಯಾಸಕ್ಕೆಂದು ಹೊಸ ಸಂಸ್ಥೆಗೆ ಸೇರಿದಾಗ ಎ್ಲ್ಲಲವೂ ಹೊಸದಾಗಿರುತ್ತದೆ. ಹತ್ತನೇ ತರಗತಿ ಮುಗಿಸಿ ಕಾಲೇಜಿಗೆ ಪ್ರವೇಶಿಸುವಾಗಲೂ ಅಲ್ಲೂ ಹೊಸ ಕಾಲೇಜಿನ ಅನುಭವವೇ ಬೇರೆ.

ಇನ್ನು, ದ್ವಿತೀಯ ಪಿಯುಸಿ ಮುಗಿಸಿ ವೃತ್ತಿಯಾಧಾರಿತ ಕೋರ್ಸ್‌ಗಳನ್ನು ಅರಸಿ ಅಥವಾ ಪದವಿಗೆಂದು ಬೇರೆ ಕಾಲೇಜಿಗೆ ಸೇರಿದಾಗಲೂ ಅಲ್ಲೂ ಹೊಸತನವೇ.

ಹೊಸ ಕಾಲೇಜು ಮಾತ್ರವಲ್ಲ. ಹೊಸ ಶಿಕ್ಷಣ ಕ್ರಮ, ಹೊಸ ಗೆಳೆಯರು... ಹೀಗೆ ಎಲ್ಲವೂ ಹೊಸತು. ಹೀಗೆ ಹೊಸ ಹೊಸ ಭಾವನೆಗಳೊಂದಿಗೆ ಕಾಲೇಜಿನೊಳಕ್ಕೆ ಪ್ರವೇಶಿಸುವಾಗಲೇ ಹೆದರಿಕೆ.

ಹೊಸ ವಿದ್ಯಾರ್ಥಿಗಳ ಈ ಹೆದರಿಕೆಯನ್ನು ದೂರ ಮಾಡಲೆಂದೇ ಹಿರಿಯ ವಿದ್ಯಾರ್ಥಿಗಳು ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ `ಫ್ರೆಶರ್ಸ್‌ ಡೇ~ ಕಾರ್ಯಕ್ರಮ ಅಥವಾ `ವೆಲ್‌ಕಂ ಡೇ~ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯದ ಸಂಗತಿ. ಕೇವಲ ಮೆಟ್ರೊ ನಗರದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ರೂಢಿಯಾಗಿದೆ.

ಆರಂಭದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಸ್ವಲ್ಪ ಬೆದರಿಸಿದರೂ ಕಾರ್ಯಕ್ರಮ ಕೊನೆಯಾಗುವುದರೊಳಗಾಗಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶ. ಜತೆಗೆ ಕಾಲೇಜಿನ ಪರಿಚಯ ಮಾಡಿಕೊಡುವುದೂ ಮತ್ತೊಂದು ಉದ್ದೇಶ ಎಂದರೂ ತಪ್ಪಿಲ್ಲ.

ಇತ್ತೀಚೆಗೆ ಪಿಇಎಸ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳಿಗಾಗಿ ಫ್ರೆಶರ್ಸ್‌ ಡೇ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೊಸದಾಗಿ ಕಾಲೇಜಿಗೆ ಸೇರಿದ್ದ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ಸ್ವಾಗತವನ್ನು ಕೋರುವುದು ಇದರ ಉ್ದ್ದದೇಶವಾಗಿತ್ತು. ಫ್ರೆಶರ್ಸ್‌ ಡೇ ಅಂದ ಮೇಲೆ ಕೇಳಬೇಕೇ, ಹಲವು ಸ್ಪರ್ಧೆಗಳು, ಮನರಂಜನೆಯ ಕಾರ್ಯಕ್ರಮಗಳು ಅಲ್ಲೂ ನಡೆದವು.

ಆದರೆ ಇಲ್ಲಿ ಫ್ರೆಶರ್ಸ್‌ ಡೇ ಆಚರಣೆಗೆ `ಟೂನ್ ಪಾರ್ಟಿ~ ಎಂಬ ಹೆಸರಿಡಲಾಗಿತ್ತಲ್ಲದೆ ಹೊಸ ವಿದ್ಯಾರ್ಥಿಗಳಿಗೆ ಕಾರ್ಟೂನ್‌ಗಳಂತೆ ವೇಷಧರಿಸಿ ಬರಲು ತಿಳಿಸಲಾಗಿತ್ತು, ಆದರೆ ಎಲ್ಲರ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ತಮ್ಮ ಉಡುಗೆಯಲ್ಲಿ ಅದ್ಭುತವಾದ ತಮ್ಮ ಕೌಶಲ್ಯವನ್ನು ಮೆರೆದರಂದೇ ಹೇಳಬೇಕು.

ವಿದ್ಯಾರ್ಥಿಗಳೋ ತಮ್ಮ ಬಾಲ್ಯದ ದಿನವನ್ನು ನೆನಪಿಸಿಕೊಳ್ಳುವಂಥೆ ರಂಗುರಂಗಾಗಿ ಬಂದಿದ್ದರು. ಅಂದು ಕಾಲೇಜು ಸಂಪೂರ್ಣವಾಗಿ ವರ್ಣರಂಜಿತವಾಗಿತ್ತು.

ಆರಂಭದಲ್ಲಿ ಅಧ್ಯಾಪಕರುಗಳ ಹಿತವಚನದ ಬಳಿಕ ವಿದ್ಯಾರ್ಥಿಗಳ ಮನರಂಜನೆಗೆ ಅವಕಾಶ ಒದಗಿಸಿಕೊಡಲಾಯಿತು. ಮನರಂಜನೆಯ ಅಂಗವಾಗಿ ಆರಂಭದಲ್ಲೇ ನಡೆದ ಸಾಲ್ಸಾ ನೃತ್ಯ ಎಲ್ಲರ ಮನಸೂರೆಗೊಂಡಿತು.

ಸಭಿಕರು ಮತ್ತೊಮ್ಮೆ ನರ್ತಿಸಿ ಎನ್ನುವಷ್ಟರಮಟ್ಟಿಗೆ ನೃತ್ಯ ಎಲ್ಲರನ್ನೂ ಆಕರ್ಷಿಸಿತು. ಬಳಿಕ ಬಲೂನ್ ಒಡೆಯುವುದು,  ಇಟ್ಟಿಗೆ ಓಟ,  ಪೆನ್ಸಿಲ್ ಮತ್ತು ರಬ್ಬರ್‌ಬ್ಯಾಂಡ್ ಗೇಮ್ ಮುಂತಾದ ದಿನವಿಡೀ ನಡೆದ ಹಲವು ಸ್ಪರ್ಧೆಗಳಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದರು. 

ಇದೇ ವೇಳೆ ಕಾಲೇಜಿನ ತಂಡಗಳೇ ಹಲವು ಕಾರ್ಯಕ್ರಮಗಳನ್ನು ನೀಡಿದವು. ಕಾಲೇಜಿನ ತಂಡ ನಡೆಸಿಕೊಟ್ಟ ಸಂಗೀತದ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗೀತೆಗಳನ್ನು ಕೇಳಿ ಖುಷಿಪಟ್ಟರು. ಜತೆಗೆ ಜೂನಿಯರ್ ವಿದ್ಯಾರ್ಥಿಗಳಿಗೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಯಿತು.

ಆದರೆ, ಎಲ್ಲದ್ದಕ್ಕಿಂತ ಮಿಗಿಲಾಗಿ `ಮಿಸ್ಟರ್ ಮತ್ತು ಮಿಸ್~ ಫ್ರೆಶರ್ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಭಾಗವಾಗಿತ್ತು. ಹಲವು ಸ್ಪರ್ಧೆಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವವರು ಮಾತ್ರ ಈ ಸ್ಪರ್ಧೆಯಲ್ಲಿ ವಿಜಯಿಗಳಾಗಬಹುದಿತ್ತು. ಜೂನಿಯರ್ ವಿದ್ಯಾರ್ಥಿಗಳು ಕಾಲೇಜಿಗೆ  ಹೊಸಬರಾಗಿರಬಹುದು.
 
ಆದರೆ ಕೌಶಲ್ಯದಲ್ಲಿ, ಪ್ರತಿಭೆಯಲ್ಲಿ ಅವರೇನೂ ಹಿಂದಿಲ್ಲ. ಅಂತೆಯೇ ತಮಗೊಡ್ಡಿದ್ದ ಸವಾಲುಗಳನ್ನೆಲ್ಲ ಮೀರಿ ಈ ಸ್ಪರ್ಧೆಯಲ್ಲೂ ಅವರು ಮಿಂಚಿದರು. ಹಲವು ಸುತ್ತಿನ ಸ್ಪರ್ಧೆಗಳ ಬಳಿಕ ಕರಣ್ ಭಾಟಿಯಾ ಮತ್ತು ಅಂಜಲಿ ಮಿಸ್ಟರ್ ಮತ್ತು ಮಿಸ್ ಫ್ರೆಶರ್-2011 ಎನಿಸಿಕೊಂಡರು. ಒಟ್ಟಿನಲ್ಲಿ ಅದು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಮರೆಯಲಾಗದ ದಿನವಾಗಿತ್ತು.

ಹೀಗೆ ಪಿಇಎಸ್ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ತಮ್ಮ ಜೂನಿಯರ್ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಸ್ವಾಗತ ಕೋರಿ ಮಾರ್ಗದರ್ಶಿಗಳಾದರು. ಜೂನಿಯರ್ ವಿದ್ಯಾರ್ಥಿಗಳೋ ತಮಗೆ ದೊರೆತ ಆತ್ಮೀಯ ಸ್ವಾಗತದಿಂದ ತೃಪ್ತರಾದರಲ್ಲದೆ ಇದೇ ಪ್ರೀತಿ, ಸಹಕಾರವನ್ನು ಶೈಕ್ಷಣಿಕ ವರ್ಷದುದ್ದಕ್ಕೂ ದೊರೆಯುವ ನಿರೀಕ್ಷೆಯನ್ನು ಹೊಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT