ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸೇವೆಗೆ ದಾರಿ ಬಿಡಿ

Last Updated 5 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: `ತುರ್ತು ವಾಹನಕ್ಕೆ ಮುಂದೆ ಹೋಗಲು ಅನುವು ಮಾಡಿ ಕೊಡಬೇಕಾದದ್ದು ಎಲ್ಲ ಮಾನವೀಯ ಹೃದಯಗಳ ಮುಖ್ಯ ಕರ್ತವ್ಯವಾಗಿದೆ~ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಬೆಂಗಳೂರು ನಗರ ಸಂಚಾರ ಪೊಲೀಸ್ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಆಂಬುಲೆನ್ಸ್ ಪ್ರೈಯಾರಿಟಿ~ ಆಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಒಂದು ಜೀವದ ಮೌಲ್ಯ ಒಂದು ಕ್ಷಣದಲ್ಲಿ ನಿರ್ಧಾರವಾಗುತ್ತದೆ. ಹಾಗಾಗಿ ಆಸ್ಪತ್ರೆಗೆ ಬೇಗ ತಲುಪಿದ್ದರೆ ಆ ವ್ಯಕ್ತಿಯ ಜೀವ ಉಳಿಯುತ್ತಿತ್ತು ಎಂಬ ಭಾವನೆ ಮೂಡಿದರೆ ಮಾತ್ರ ಸಾಲದು. ಅದಕ್ಕಾಗಿ ನಾವು ಕೂಡ ನಮ್ಮ ಕೈಲಾದ ಸಹಾಯವನ್ನು ಕೂಡ ಮಾಡಬೇಕಾಗುತ್ತದೆ~ ಎಂದರು.

`ಸಂಚಾರ ಸುವ್ಯವಸ್ಥೆ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಸಂಚಾರ ವ್ಯವಸ್ಥೆಯನ್ನು ಶಿಸ್ತಿನಿಂದ ಪಾಲಿಸುವ ಪ್ರಜ್ಞೆ ನಮ್ಮಲ್ಲಿ ಬೆಳೆಯಬೇಕು. ಸಂಚಾರ ಮಾರ್ಗವನ್ನು ಶಿಸ್ತಿನಿಂದ ಪಾಲಿಸಬೇಕು~ ಎಂದು ಹೇಳಿದರು.
`ಇಂದಿನ ಆಧುನಿಕ ಯುಗದಲ್ಲಿ ಸಂಚಾರ ವ್ಯವಸ್ಥೆ ಬಹು ಮುಖ್ಯವಾಗಿದೆ. ಹಿಂದೆ ಬೆರಳೆಣಿಕೆಯಷ್ಟು ಜನರು ಮಾತ್ರ ವಾಹನಗಳನ್ನು ಹೊಂದಿದ್ದರು ಹಾಗಾಗಿ ಸಂಚಾರ ತೊಂದರೆ ಇರಲಿಲ್ಲ ಎಂದರು.

`ವಿದೇಶಗಳಲ್ಲಿ ಸಂಚಾರ ವ್ಯವಸ್ಥೆಯ ಶಿಸ್ತಿದೆ. ಅಲ್ಲಿ ಹಾರ್ನ್ ಮಾಡುವುದು ಒಂದು ಅಪಮಾನವೆಂದು ಭಾವಿಸಲಾಗುತ್ತದೆ. ಆದರೆ, ಇಲ್ಲಿ ಹಾರ್ನ್ ಮಾಡುವುದೇ ಒಂದು ದೊಡ್ಡಸ್ತಿಕೆಯೆಂದು ಭಾವಿಸಲಾಗುತ್ತದೆ. ಇಲ್ಲಿ ಜನರು ತಮ್ಮ ಸಹನೆ ತಪ್ಪಿದ ಅಸಹನೀಯತೆಯನ್ನು ತೋರಿಸುತ್ತಾರೆ~ ಎಂದರು.

ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, `ಒಂದು ಜೀವವನ್ನು ಉಳಿಸಲು ಕಾರಣರಾಗಬೇಕೆ ಹೊರತು ಜೀವವು ಸಾಯಲು ನಾವು ಕಾರಣರಾಗಬಾರದು, ಅದಕ್ಕಾಗಿ ಆಂಬುಲೆನ್ಸ್ ಬಂದಾಗ ಅದಕ್ಕೆ ಬಲಭಾಗದಲ್ಲಿ ಸ್ಥಳ ಮಾಡಿಕೊಡಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT