ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ನಡುವೆ ಸಮೃದ್ಧ ಸೀಬೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೊಳವೆ ಬಾವಿಯ ಮತ್ತು ಮಳೆ ನೀರನ್ನು ನೆಚ್ಚಿಕೊಂಡು ತೋಟದ ಬೆಳೆಗಳನ್ನು ಬೆಳೆಯುವ ಪದ್ಧತಿ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಮಳೆ ಕೈಕೊಟ್ಟಾಗ ಕೊಳವೆ ಬಾವಿಗಳ ನೀರು ಬಳಸುತ್ತಾರೆ.

ಆದರೆ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದ ರೈತ ಜಗದೀಶ್ ಎರಡುಕಾಲು ಎಕರೆ ಭೂಮಿಯಲ್ಲಿ ಕೆರೆಯ ನೀರನ್ನು ಬಳಸಿಕೊಂಡು ತೆಂಗಿನ ಮರಗಳ ನಡುವೆ ಸೀಬೆ (ಅಲಹಾಬಾದ್ ತಳಿ) ಬೆಳೆದಿದ್ದಾರೆ.

ಅವರ ತೋಟದ ಸೀಬೆ ಮರಗಳು ಸಮೃದ್ಧವಾಗಿವೆ. ಗಿಡಗಳ ತುಂಬಾ ಫಸಲಿದೆ. ಕೆರೆಯ ನೀರನ್ನೇ ಬಳಸಿಕೊಂಡು ತೋಟದ ಬೆಳೆಗಳನ್ನು ಬೆಳೆಯುವುದು ಅಪರೂಪ. ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತಿದೆ. ಕೆರೆಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ಆದರೆ ಮುತ್ತುಗದೂರು ಕೆರೆಯಲ್ಲಿ ವರ್ಷವಿಡೀ ನೀರು ಇರುವುದರಿಂದ ಅವರ ಬೇಸಾಯಕ್ಕೆ ತೊಂದರೆ ಇಲ್ಲ.

ಹದಿಮೂರು ವರ್ಷಗಳ ಹಿಂದೆ ಅವರು ತಮ್ಮ ಜಮೀನಿನಲ್ಲಿ ತೆಂಗಿನ ಮರಗಳನ್ನು ನಾಟಿ ಮಾಡಿದ್ದರು. ಸುಮಾರು 80 ಮರಗಳು ಗಾಳಿಗೆ ಬಿದ್ದು ಹೋದವು. ತೆರವಾದ ಜಾಗಕ್ಕೆ ಸೀಬೆ ಗಿಡಗಳನ್ನು ನಾಟಿ ಮಾಡಿದರು. ಈಗ ಅವು ಬೆಳೆದು  ಫಲ ಕೊಡುತ್ತಿವೆ. ವರ್ಷಕ್ಕೆ ಎರಡು ಸಲ ಫಸಲು ಬರುತ್ತಿದೆ. ಒಂದು ಬೀಡಿಗೆ 10ರಿಂದ 12ಸಾವಿರ ಹಣ್ಣು ಸಿಗುತ್ತಿವೆ. ವಾರ್ಷಿಕ 20 ಸಾವಿರ ರೂ ಆದಾಯ ಬರುತ್ತಿದೆ.

ಜಗದೀಶ್ ತೋಟದಲ್ಲಿ ಒಂದು ಕೊಳವೆ ಬಾವಿ ಇದೆ. ಅದರ ನೀರನ್ನು ತೋಟದ ತೆಂಗು, ಮಾವಿನ ಗಿಡಗಳಿಗೆ ಬಳಸುತ್ತಾರೆ. ತೆಂಗಿನ ನಡುವೆ ಸೀಬೆ, ಸಪೋಟ, ಮಾವು ಇತ್ಯಾದಿ ಹಣ್ಣಿನ ಗಿಡಗಳನ್ನು ಬೆಳೆಯುವುದು ಲಾಭದಾಯಕ.

ನಮ್ಮ ತೋಟದ ಹಣ್ಣುಗಳನ್ನು ವ್ಯಾಪಾರಿಗಳಿಗೆ ಗುತ್ತಿಗೆ ನೀಡುತ್ತೇವೆ. ನಾವೇ ಕಾಯಿಗಳನ್ನು ಕಿತ್ತು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಣ್ಣುಗಳನ್ನು ಕೀಳಲು ಕೂಲಿಯಾಳುಗಳ ಸಮಸ್ಯೆ ಇದೆ.

ಗುತ್ತಿಗೆ ನೀಡುವುದರಿಂದ ಕಾಯಿ ಕಿತ್ತು, ಹಣ್ಣು ಮಾಡಿ ಮಾರುಕಟ್ಟೆಗೆ ಸಾಗಿಸುವ ಕಿರಿಕಿರಿ ನಮಗಿಲ್ಲ. ಆ ಕೆಲಸ ನಾವೇ ಮಾಡಿದರೆ ಹೆಚ್ಚು ಹಣ ಸಿಗುತ್ತದೆ. ಆದರೆ    ವ್ಯಾಪಾರಿಗಳಿಗೆ ಗುತ್ತಿಗೆ ಕೊಡುತ್ತೇವೆ. ಅವರೂ ಬದುಕಬೇಕಲ್ಲ ಎನ್ನುತ್ತಾರೆ ಜಗದೀಶ್.

ಪೇರಳೆ ಬೇಸಾಯದ ಬಗ್ಗೆ ಹೆಚ್ಚಿನ ಮಾಹಿತಿಗೆ ಜಗದೀಶ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 97310 71712

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT