ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಕಾಯಿ ಸವಿ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತೆಂಗಿನಕಾಯಿ ಬರ್ಫಿ
ಬೇಕಾಗುವ ಸಾಮಗ್ರಿ: ಕಾಯಿತುರಿ 3 ಕಪ್, ಸಕ್ಕರೆ 2 1/2 ಕಪ್, ಹಾಲು 2 ಕಪ್, ತುಪ್ಪ 1/4 ಕಪ್, ಏಲಕ್ಕಿ 1/4 ಚಮಚ.

ಮಾಡುವ ವಿಧಾನ: ಕಾಯಿತುರಿ ಯನ್ನು ಹಾಲಿನೊಡನೆ ರುಬ್ಬಿ. ತುಪ್ಪ, ಸಕ್ಕರೆ ಹಾಕಿ ಬಾಣಲೆಯಲ್ಲಿ ಕಾಯಿಸಿ. ಪಾಕ ತಳಬಿಡುತ್ತಾ ಬರುವಾಗ ಏಲಕ್ಕಿ ಪುಡಿ ಹಾಕಿ ಮಗುಚಿ. ಪಾಕವನ್ನು ತಟ್ಟೆಗೆ ಹರಡಿ. ನಸು ಬಿಸಿ ಇರುವಾಗಲೇ ತುಂಡು ಮಾಡಿ.

 

ಕಾಯಿ ಗೆಣಸಲೆ
ಬೇಕಾಗುವ ಸಾಮಗ್ರಿ: 
ಬೆಳ್ತಿಗೆ ಅಕ್ಕಿ 1/2 ಕೆ.ಜಿ, 2 ತೆಂಗಿನಕಾಯಿ ತುರಿ, ಬೆಲ್ಲ 1/4 ಕೆ.ಜಿ, ಉಪ್ಪು, 2 ಚಮಚ ತುಪ್ಪ, ಬಾಳೆಲೆ 10.

ಮಾಡುವ ವಿಧಾನ: ಅಕ್ಕಿಯನ್ನು ನೆನೆ ಹಾಕಿ, ನೀರು ಬಸಿದು ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಹಿಟ್ಟು ದೋಸೆ ಹಿಟ್ಟಿನಷ್ಟು ತೆಳ್ಳಗಿರಲಿ. ನಂತರ ಕಾಯಿತುರಿಗೆ ಬೆಲ್ಲ ಬೆರೆಸಿ ಸ್ವಲ್ಪ ಬಿಸಿ ಮಾಡಿ. ಬಾಳೆ ಎಲೆಗಳನ್ನು ಬಾಡಿಸಿ ತೊಳೆದು 9-10 ಇಂಚುಗಳ ಸೀಳು ಮಾಡಿಕೊಳ್ಳಿ.

ರುಬ್ಬಿದ ಹಿಟ್ಟಿಗೆ  2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಕಿಕೊಂಡು ಬಾಳೆ ಎಲೆಗೆ ಒಂದು ಸೌಟು ಅಕ್ಕಿ ಹಿಟ್ಟನ್ನು ಹಾಕಿ ದೋಸೆಯಂತೆ ತೆಳುವಾಗಿ ಹರಡಿ. ಇದರ ಅರ್ಧಕ್ಕೆ ಬೆಲ್ಲ ಬೆರೆಸಿದ ತೆಂಗಿನಕಾಯಿ ತುರಿಯನ್ನು ಹರಡಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಉಗಿಯಲ್ಲಿ ಬೇಯಿಸಿ.

ಕಾಯೊಡೆ
ಬೇಕಾಗುವ ಸಾಮಗ್ರಿ: 
ಬೆಳ್ತಿಗೆ ಅಕ್ಕಿ 1/2 ಕೆ.ಜಿ, ತೆಂಗಿನಕಾಯಿ 1, ಜೀರಿಗೆ 3 ಚಮಚ, ಅರಸಿನ ಪುಡಿ, ಉಪ್ಪು, ಕೊಬ್ಬರಿ ಎಣೆ ್ಣ2 1/2 ಕಪ್.

ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಿ ಚೆನ್ನಾಗಿ ತೊಳೆದು ತೆಂಗಿನಕಾಯಿಯನ್ನು ತುರಿದು ಹಾಕಿ, ಉಪ್ಪು, ಅರಸಿನ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿ ನುಣ್ಣಗೆ ರುಬ್ಬಿ, ಜೀರಿಗೆ ಹಾಕಿ ಸ್ವಲ್ಪ ತಿರುವಿ ತೆಗೆಯಿರಿ.
 
ನಂತರ ಲಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಂಡು  ಒಂದು ಬಾಳೆ ಎಲೆಯ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಹಚ್ಚಿ ಮಾಡಿಟ್ಟ ಉಂಡೆಯನ್ನು ಇಟ್ಟು ತೆಳ್ಳಗೆ ವಡೆ ತಟ್ಟಿ. (ಮಣೆಯಲ್ಲಿ ಒತ್ತಿದರೂ ಆಗಬಹುದು) ನಂತರ ಕಾದ ಎಣ್ಣೆಗೆ ಹಾಕಿ ಹಳದಿ ಬಣ್ಣಕ್ಕೆ ಬರುವಾಗ ತೆಗೆಯಿರಿ. ಆರಿದ ನಂತರ ಡಬ್ಬದಲ್ಲಿ ಹಾಕಿಟ್ಟರೆ 2 ವಾರಕ್ಕೆ ಕೆಡುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT