ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಬಾಕಿ: ವಾಣಿಜ್ಯ ಮಳಿಗೆಗೆ ಬೀಗ

Last Updated 13 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಸ್ವಯಂ ಘೋಷಿತ ತೆರಿಗೆ ಪ್ರಕಟಿಸಿದ್ದರೂ ಅದರನ್ವಯ ತಮ್ಮ ವಾಣಿಜ್ಯ ಮಳಿಗೆಗಳ ತೆರಿಗೆ ಬಾಕಿ ಪಾವತಿಸದ ಅಬ್ದುಲ್ ಅಜೀಜ್ ಮೋಮಿನ್ ಅವರ  ಏಳು ಮಳಿಗೆಗಳಿಗೆ ಸೋಮವಾರ ಪುರಸಭೆ ಸಿಬ್ಬಂದಿ ಬೀಗ ಹಾಕಿದ ಪ್ರಸಂಗ ನಡೆಯಿತು.

ತೆರಿಗೆ ಬಾಕಿ ತುಂಬುವಂತೆ ಸಾಕಷ್ಟು ಸಲ ಮಾಲೀಕರಿಗೆ ನೋಟಿಸು ಕಳಿಸಿದರೂ ತೆರಿಗೆ ತುಂಬದ್ದರಿಂದ ಪುರಸಭೆಯ ಕಾನೂನಿನಂತೆ ವಾಣಿಜ್ಯ ಮಳಿಗೆಗೆ ಬೀಗ ಜಡಿಯಲಾಗಿದೆ ಎಂದು ಪುರಸಭೆ  ಮುಖ್ಯಾಧಿಕಾರಿ ಎಸ್.ಬಿ. ಹೊನ್ನಳ್ಳಿ ಸುದ್ದಿಗಾರರಿಗೆ ತಿಳಿಸಿದರು.

ತೆರಿಗೆ ಸಂಗ್ರಹದಿಂದಲೇ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು, ಲಕ್ಷಗಟ್ಟಲೆ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕರ ತುಂಬುವಂತೆ ಈಗಾಗಲೇ ನೋಟಿಸ್ ಕಳಿಸಲಾಗಿದೆ. ಬಾಕಿದಾರರು ಕೂಡಲೇ ತಮ್ಮ ಆಸ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ತುಂಬಬೇಕು, ಇಲ್ಲವಾದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT