ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆದಾರರ ಮನೆ ಬಾಗಿಲಿಗೆ ಸಂಚಾರಿ ತೆರಿಗೆ ಕೇಂದ್ರ

Last Updated 25 ಜೂನ್ 2012, 9:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆದಾಯ ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ ! ಏಕೆಂದರೆ ಇನ್ನು ಮುಂದೆ ತೆರಿಗೆದಾರರು ಕಚೇರಿಗೆ ಹೋಗಿ ತೆರಿಗೆ ಪಾವತಿಸಬೇಕಿಲ್ಲ. ಬದಲು ಮನೆ ಬಾಗಿಲಿಗೆ ಬರುವ `ಟ್ಯಾಕ್ಸ್ ಕಿಯಾಸ್ಕ್~ನಲ್ಲಿ  (ಸಂಚಾರಿ ತೆರಿಗೆ ಕೇಂದ್ರ) ತೆರಿಗೆ ಪಾವತಿಸಬಹುದು.

ತೆರಿಗೆದಾರರ ಸಂಬಂಧಿತ ಸೇವೆಗಳಲ್ಲಿ ಅನುಕೂಲ ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಇಂತಹ ವಿನೂತನ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿರುವ ಆದಾಯ ತೆರಿಗೆ ಇಲಾಖೆಯು ಮುಂಬರುವ ಆದಾಯ ತೆರಿಗೆ ಸಲ್ಲಿಕೆಯ ಋತುವಿನೊಳಗೆ ಅಧಿಕ ಸಂಖ್ಯೆಯಲ್ಲಿ ತೆರಿಗೆದಾರರು ನೆಲೆಸಿರುವ ಜನವಸತಿ ಪ್ರದೇಶದಲ್ಲಿ `ಟ್ಯಾಕ್ಸ್ ಕಿಯಾಸ್ಕ್~ ಎಂಬ ಸಂಚಾರಿ ತೆರಿಗೆ ಪಾವತಿ ಕೇಂದ್ರವುಳ್ಳ ವಾಹನಗಳನ್ನು ನಿಯೋಜಿಸುವುದಾಗಿ ಹೇಳಿದೆ.

ಆದಾಯ ತೆರಿಗೆ ಇಲಾಖೆ ಸಂಬಂಧಿತ ಸೇವೆಗಳಿಗಾಗಿ ತೆರಿಗೆದಾರರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ವಿನೂತನ ಸೇವೆ ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

ಯೋಜನೆಯನ್ನು ಕಳೆದ ವರ್ಷದಿಂದ ಹಲವು ನಗರಗಳಲ್ಲಿ ತಾತ್ಕಾಲಿಕ ಕೀಆಸ್ಕ್‌ಗಳನ್ನು ತೆರೆಯುವ ಮೂಲಕ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿರುವ ಇಲಾಖೆಯು ಈ ಕುರಿತಂತೆ ಅನೇಕ ನಗರಗಳಲ್ಲಿ ಜನಾಭಿಪ್ರಾಯಗಳನ್ನು ಸಂಗ್ರಹಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT