ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: 6 ವಾರ ಕಾಲಾವಕಾಶ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂ­ಗಾಣ ರಾಜ್ಯ ರಚನೆಯ ಮಸೂದೆಗೆ ಸಂಬಂಧಿಸಿ  ನಿರ್ಧಾರ ತೆಗೆದು­ಕೊಳ್ಳಲು ರಾಷ್ಟ್ರಪತಿಗಳು ಆಂಧ್ರಪ್ರ­ದೇಶದ ವಿಧಾನಸಭೆಗೆ ಆರು ವಾರಗಳ ಕಾಲಾವಕಾಶ ನೀಡಿದ್ದಾರೆ.

ಮಸೂದೆಗೆ ಅಂಕಿತ ಹಾಕಿರುವ ರಾಷ್ಟ್ರಪತಿಗಳು, ಇದು ಆಂಧ್ರ­ಪ್ರದೇಶ ವಿಧಾನಸಭೆಯಲ್ಲಿ ಅಂಗೀ­ಕಾರ ವಾಗಬೇಕಿರುವುದರಿಂದ ಬುಧ­ವಾರ ರಾತ್ರಿ ವಾಪಸ್‌ ಕೇಂದ್ರ ಸರ್ಕಾರಕ್ಕೆ  ಕಳುಹಿಸಿಕೊಟ್ಟಿದ್ದಾರೆ.

ಆಂಧ್ರ ಒಡೆಯುವ ಈ ಮಸೂದೆ­ಯನ್ನು ಇದೀಗ ಆಂಧ್ರ­ಪ್ರದೇಶ ವಿಧಾನ­­­ಸಭೆಗೆ ಕಳುಹಿಸ­ಲಾಗುತ್ತಿದ್ದು, ಈಗಾ­ಗಲೆ ಸ್ಪೀಕರ್‌ ಎನ್‌. ಮನೋ­ಹರ್‌ ಅವರ ಕಚೇರಿಗೆ ಮಾಹಿತಿ ನೀಡಲಾ­ಗಿದೆ. ಆದರೆ ಮಸೂದೆಗೆ ಆಂಧ್ರ ವಿಧಾನಸಭೆ ಅಂಗೀಕಾರ ನೀಡಲಿ ಇಲ್ಲವೆ ಬಿಡಲಿ , ಪ್ರತ್ಯೇಕ ರಾಜ್ಯ ರಚನೆ­ ವಿಷಯದಲ್ಲಿ ಸಂಸತ್ತು ತಾನು ತೆಗೆದುಕೊಂಡ ನಿರ್ಧಾರ ಅನುಷ್ಠಾನಕ್ಕೆ ತರಲು ತೊಂದರೆ ಇಲ್ಲ ಎಂದು ತಜ್ಞರು ಅಭಿಪ್ರಾಯ­ಪಟ್ಟಿದ್ದಾರೆ.

ಹೈದರಾಬಾದ್‌ ತಲುಪಿದ ಮಸೂದೆ
ಮಸೂದೆಯ ದಾಖಲೆ­ಗ­ಳನ್ನು ಹೊತ್ತ ವಿಶೇಷ ವಿಮಾನ ಗುರು­ವಾರ ಸಂಜೆ ಹೈದರಾ­ಬಾದ್‌ ತಲುಪಿದ್ದು ಕೇಂದ್ರ ಗೃಹ ಸಚಿವಾ­ಲಯದ ಸಿಬ್ಬಂದಿ ಇದನ್ನು ರಾಜ್ಯದ ಮುಖ್ಯ ಕಾರ್ಯ­ದರ್ಶಿಗೆ ತಲುಪಿ­ಸಿದರು.

ಮಸೂದೆ ಹೈದರಾಬಾದ್‌ ತಲು­ಪುತ್ತಲೆ ರಾಜಕೀಯ ವಲ­ಯ­ದಲ್ಲಿ ಸಂಚಲನ ಆರಂಭ­ವಾ­ಗಿದ್ದು ವಿವಿಧ ಮುಖಂಡರು ಈ ಕುರಿತು ಪರ, ವಿರೋಧ ಅಭಿ­
ಪ್ರಾ­ಯ ಸಂಗ್ರಹಿ­ಸಲು ಓಡಾಡು­ವುದು ಕಂಡು­ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT