ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ನಿಲ್ಲದ ಹಗ್ಗಜಗ್ಗಾಟ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಆಂಧ್ರ ಪ್ರದೇಶ ಪುನರ್‌ರಚನೆ ಕರಡು ಮಸೂ ದೆಯು ಇದೀಗ ತೆಲಂಗಾಣ ಪರ ಹಾಗೂ ವಿರೋಧಿ ಬಣದ ಶಾಸಕರ ಹಗ್ಗ ಜಗ್ಗಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟಿದೆ.

ಈ ವಿಷಯವಾಗಿ ತೆಲಂಗಾಣ ಹಾಗೂ ಸೀಮಾಂಧ್ರ ಶಾಸಕರು ಕೋಲಾ ಹಲ ಎಬ್ಬಿಸಿದ್ದರಿಂದ ಕರಡು ಮಸೂದೆ­ಯು ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿಲ್ಲ.  ಸೋಮವಾರ ಮಂಡನೆಯಾಗುವ ನಿರೀಕ್ಷೆ ಇದೆ.

ಕರಡು ಮಸೂದೆ ಮಂಡನೆ ಬಳಿಕ ಸ್ಪೀಕರ್‌, ಕಲಾಪ ಸಲಹಾ ಸಮಿತಿ ಸಭೆ ಕರೆಯಲಿದ್ದಾರೆ. ಈ ಸಭೆಯಲ್ಲಿ ಕರಡು ಮಸೂದೆ ಮೇಲಿನ ಚರ್ಚೆಯ ದಿನ ಗೊತ್ತುಪಡಿಸಲಾಗುತ್ತದೆ.

ವಿಧಾನಸಭೆಯಲ್ಲಿ ಈ ಕೂಡಲೇ ಕರಡು ಮಸೂದೆ ಮಂಡಿಸಬೇಕು ಎನ್ನುವುದು ತೆಲಂಗಾಣ ಶಾಸಕರ ಪಟ್ಟು.  ಇನ್ನೊಂದೆಡೆ ಸೀಮಾಂಧ್ರ ಶಾಸಕರು, ಮುಂದಿನ ತಿಂಗಳು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಚರ್ಚೆಗೆ ಮುನ್ನ ಕರಡು ಮಸೂದೆಯನ್ನು ಇಂಗ್ಲಿಷ್‌ನಿಂದ ತೆಲುಗು ಹಾಗೂ ಉರ್ದು ಭಾಷೆಗಳಿಗೆ ತರ್ಜುಮೆ ಮಾಡಬೇಕು ಎಂದೂ  ಆಗ್ರಹಿಸಿದ್ದಾರೆ.

ಈ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆ ಮೇಲೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಕಿರಣ್‌್ ಕುಮಾರ್‌್ ರೆಡ್ಡಿ ಹಾಗೂ ಸೀಮಾಂಧ್ರ ಶಾಸಕರಿಗೆ  ಮನಸ್ಸಿಲ್ಲ.

 ಅವಿಶ್ವಾಸ ಗೊತ್ತುವಳಿ ಬೆದರಿಕೆ:
ಆದರೆ, ತೆಲಂಗಾಣ ಶಾಸಕರು ವಿಳಂಬ ತಂತ್ರಕ್ಕೆ ಅವಕಾಶ ಮಾಡಿ ಕೊಡಲು ತಯಾರಿಲ್ಲ. ತೆಲಂಗಾಣ ರಚನೆಗೆ ಅಡ್ಡಿಯಾಗುತ್ತಿರುವ ಮುಖ್ಯ­ಮಂತ್ರಿ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವುದಾಗಿ ಉಪಮುಖ್ಯಮಂತ್ರಿ ದಾಮೋದರ ರಾಜ ನರಸಿಂಹ  ಬೆದರಿಕೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT