ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗು ಚಿತ್ರ ಪ್ರದರ್ಶನ: ಕನ್ನಡ ಸಂಘಟನೆಗಳ ಅಡ್ಡಿ

Last Updated 14 ಜನವರಿ 2012, 9:40 IST
ಅಕ್ಷರ ಗಾತ್ರ

ಬಳ್ಳಾರಿ: ನಿಗದಿಯಾಗಿದ್ದಂತೆ ಕನ್ನಡ ಚಲನಚಿತ್ರ ಪ್ರದರ್ಶಿಸದೇ ತೆಲುಗು ಚಿತ್ರವನ್ನು ಪ್ರದರ್ಶಿಸುತ್ತಿದ್ದ ಸ್ಥಳೀಯ ಚಿತ್ರಮಂದಿರವೊಂದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಕನ್ನಡ ಚಿತ್ರ `ಕೊಕ್ಕೊ~ ಹಾಗೂ ತೆಲುಗು ಚಿತ್ರ `ಬಿಸಿನೆಸ್‌ಮನ್~ ಚಿತ್ರಗಳು ಶುಕ್ರವಾರ ಏಕಕಾಲಕ್ಕೆ ಬಿಡುಗಡೆಯಾದವು. ಶ್ರೀನಗರ ಕಿಟ್ಟಿ ನಾಯಕರಾಗಿರುವ `ಕೊಕ್ಕೊ~ ಚಿತ್ರವನ್ನು ನಿಗದಿಯಾಗಿದ್ದಂತೆ ಶಿವ ಚಿತ್ರಮಂದಿರದಲ್ಲಿ ಪ್ರದರ್ಶಿಸಬೇಕಿತ್ತು. ಆದರೆ ಅಲ್ಲೂ ಕೂಡ ಬಿಸಿನೆಸ್‌ಮನ್ ಚಿತ್ರವನ್ನೇ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.

ಈ ವಿಷಯ ತಿಳಿದ ಕರುನಾಡಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಇನ್ನಿತರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಕ್ಕೆ ನುಗ್ಗಿ ತೆಲುಗುಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಈ ಹಿನ್ನೆಲೆಯಲ್ಲಿ ಚಿತ್ರಮಂದಿರ ಮಾಲೀಕರು ತೆಲುಗು ಚಿತ್ರವನ್ನು ಕೈಬಿಟ್ಟು ಕೊಕ್ಕೊ ಚಿತ್ರದ ಪ್ರದರ್ಶನವನ್ನೇ ಆರಂಭಿಸಿದರು.

ಅಷ್ಟು ಹೊತ್ತಿಗಾಗಲೇ ತೆಲುಗು ಚಿತ್ರದ ಟಿಕೆಟ್ ಮಾರಾಟವಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಸಂಘಟನೆಗಳ ಮುಖಂಡರಾದ ವಿ.ಕೆ. ಬಸಪ್ಪ, ಚಾನಾಳ್ ಶೇಖರ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT