ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ

Last Updated 4 ಸೆಪ್ಟೆಂಬರ್ 2013, 6:13 IST
ಅಕ್ಷರ ಗಾತ್ರ

ಸಿಂದಗಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ನಗರದ ಮಿನಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಶೈಲಜಾ ಸ್ಥಾವರಮಠ, ತಾಲ್ಲೂಕು ವಕ್ತಾರ ಸಿದ್ದಣ್ಣ ಚೌಧರಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದು ಬಡ, ಮಧ್ಯಮ ವರ್ಗದ ಜನತೆಯ ವಿರೋಧಿ ನಿರ್ಧಾರ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವದರಿಂದ ಸಾಗಾಣಿಕೆ ವೆಚ್ಚ, ಪ್ರಯಾಣ ದರ ಹೆಚ್ಚಾಗಲಿದೆ. ಇದ ರಿಂದಾಗಿ ಅಗತ್ಯ ವಸ್ತುಗಳು ಇನ್ನಷ್ಟು ದುಬಾರಿಯಾಗಲಿವೆ. ಡಾಲರ್ ಎದುರು ಭಾರತೀಯ ರೂಪಾಯಿ ಪಾತಾಳ ಕ್ಕಿಳಿದಿದೆ. ಹಣದುಬ್ಬರ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಈಗ ಹೆಚ್ಚಿಸಿರುವ ತೈಲೋತ್ಪನ್ ಬೆಲೆ ಹೆಚ್ಚಿಸಿ ರುವುದನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು. ಉಪತಹಶೀಲ್ದಾರ್ ಆಲೂರಕರ ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಪರಶುರಾಮ ಕಾಂಬಳೆ, ದೇವೀಂದ್ರ ದೊಡಮನಿ,  ಎಸ್.ಕೆ. ಚೌಧರಿ, ಝಡ್.ಐ.   ಅಂಗಡಿ, ರಫೀಕ್, ಪುರಸಭೆ ಸದಸ್ಯ ಮಲ್ಲನಗೌಡ ಪಾಟೀಲ, ರುದ್ರಗೌಡ ಪಾಟೀಲ, ಬಸವರಾಜ ಯರನಾಳ, ಷಣ್ಮುಖ ಕುರಡೆ, ಸೈಫನ್ ಕರ್ಜಗಿ, ಅನ್ನಪೂರ್ಣ ಹೊಟಗಾರ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT