ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಟ್ಲಿ ಗ್ರಾಮದಲ್ಲಿ ಉಟ್ಲು ಪರಿಷೆ

Last Updated 23 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತೊಟ್ಲಿ ಗ್ರಾಮದಲ್ಲಿ ಉಟ್ಲು ಪರಿಷೆ ಏರ್ಪಡಿಸಲಾಗಿತ್ತು. ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ಈ ಪರಿಷೆಯಲ್ಲಿ ಬುಧವಾರ ಎತ್ತರವಾದ ಕಲ್ಲು ಕಂಬದ ಮೇಲೆ ನಿರ್ಮಿಸಿರುವ ತಿರುಗುವ ತೊಟ್ಟಿಲಲ್ಲಿ ಕುಳಿತು ಉದ್ದವಾದ ಹಗ್ಗಕ್ಕೆ ತೆಂಗಿನ ಕಾಯಿ ಕಟ್ಟಿ ತಿರುಗಿಸಲಾಯಿತು. 

  ಹತ್ತಾರು ಯುವಕರು ಉದ್ದನೆಯ ದೊಣ್ಣೆಗಳನ್ನು ಹಿಡಿದು ಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದರು. ಕಾಯಿ ವೇಗವಾಗಿ ವಿವಿಧ ಎತ್ತರಗಳಲ್ಲಿ ತಿರುಗಿಸಲ್ಪಡುವ ಕಾಯಿ ಒಡೆದವರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ದೇವತಾ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೀಪೋ ತ್ಸವ ಏರ್ಪಡಿಸಲಾಗಿತ್ತು. ಅನ್ನ ಸಂತರ್ಪಣೆ ನಡೆಯಿತು. ತೊಟ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಪರಿಷೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT