ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊರವಿಗಲ್ಲಿಯಲ್ಲಿ ಎಚ್‌ಡಿ-ಒನ್

Last Updated 14 ನವೆಂಬರ್ 2011, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದಲ್ಲಿ ಒಂಬತ್ತನೆಯ ಹುಬ್ಬಳ್ಳಿ- ಧಾರವಾಡ ಒನ್ ಸೆಂಟರ್ ಸದ್ಯದಲ್ಲೇ ನಗರದ ತೊರವಿಗಲ್ಲಿಯಲ್ಲಿ ಆರಂಭಗೊಳ್ಳಲಿದೆ. ಇದರಿಂದ ಸಿಬಿಟಿ ಸುತ್ತಲಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಸಿಬಿಟಿಗೆ ಹತ್ತಿರವಿರುವ ತೊರವಿಗಲ್ಲಿಯಲ್ಲಿಯ ಪಾಲಿಕೆಯ ದವಾಖಾನೆಯ ಮೊದಲ ಮಹಡಿ ಖಾಲಿಯಿದ್ದು, ಅದು ನವೀಕರಣ ಗೊಂಡು ಒನ್ ಸೆಂಟರ್ ಕಾರ್ಯಾರಂಭಗೊಳ್ಳಲಿದೆ. `ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅನುದಾನ ಬಿಡುಗಡೆಗೊಂಡ ಕೂಡಲೇ ನವೀಕರಣಗೊಳ್ಳಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು ಜಿಲ್ಲಾಧಿಕಾರಿ ದರ್ಪಣ್ ಜೈನ್.

`ಅವಳಿನಗರದಲ್ಲಿಯ ಒನ್ ಸೆಂಟರ್‌ಗಳಲ್ಲಿ ಪ್ರತಿ ತಿಂಗಳು ರೂ. 60-70 ಲಕ್ಷ ವಹಿವಾಟು ನಡೆ ಯುತ್ತಿದೆ. ಸಾರ್ವಜನಿಕರು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ತೆರಳಿ ಸಾಲಿನಲ್ಲಿ ನಿಂತು ಬಿಲ್ಲುಗಳನ್ನು ತುಂಬುವ ಅಗತ್ಯವಿಲ್ಲ. ಹೆಚ್ಚಿನ ಅನುಕೂಲ ವಾಗಬೇಕೆನ್ನುವ ಸಲುವಾಗಿ ಹೆಚ್ಚು ಒನ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ~ ಎಂದು ಅವರು ಹೇಳಿದರು.

`ಈಚೆಗೆ ಧಾರವಾಡದ ಬಾರಾಕೊಟ್ರಿಯಲ್ಲಿ ಆರಂಭ ಗೊಂಡ ಒನ್ ಸೆಂಟರ್ ಎಂಟನೆಯದು. ಅಲ್ಲಿ ಕರ್ನಾ ಟಕ ವಿಶ್ವವಿದ್ಯಾಲಯದ ಹಳೆಯ ಕಟ್ಟಡವಿತ್ತು. ನವೀಕರಣಗೊಳಿಸಿದ ನಂತರ ಉದ್ಘಾಟನೆಗೊಂಡಿದೆ. ಇದರಿಂದ ಬಾರಾಕೊಟ್ರಿ ಭಾಗದ ಜನರಿಗೆ ಅನುಕೂಲ ವಾಗಿದೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ರೈಲ್ವೆಯ ಮುಂಗಡ ಟಿಕೆಟ್ ಕಾದಿರಿಸುವುದು ಸೇರಿದಂತೆ ಎಲ್‌ಐಸಿ ಕಂತು ಕಟ್ಟುವ, ಆಸ್ತಿ ಉತಾರ ಮೊದಲಾದ ಸೇವೆಗಳ ಸೌಲಭ್ಯಗಳನ್ನು ಎಲ್ಲ ಒನ್ ಸೆಂಟರ್‌ಗಳಲ್ಲಿ ಒದಗಿಸುವ ಯೋಜನೆಯಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ದಂತಾಗುತ್ತದೆ~ ಎಂದರು ಒನ್ ಸೆಂಟರ್ ಕೇಂದ್ರಗಳ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆಗಿರುವ ದರ್ಪಣ್ ಜೈನ್.

`ವಿದ್ಯುತ್ ಬಿಲ್ಲು ತುಂಬಲು ಘಂಟಿಕೇರಿಯ ಹೆಸ್ಕಾಂ ಕಚೇರಿಗೆ ಹೋಗುತ್ತೇವೆ. ಕುಡಿಯುವ ನೀರಿನ ಬಿಲ್ಲು ಹಾಗೂ ಇತರ ಬಿಲ್ಲು ತುಂಬಲು ಪಾಲಿಕೆಯವರೆಗೆ ಹೋಗಬೇಕು. ಈ ಕಷ್ಟ ತಪ್ಪಿಸಿರಿ ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅದು ಈಡೇರುತ್ತದೆ ಎಂದಾದರೆ ನಮ್ಮ ಕಷ್ಟ ತಪ್ಪಿತು ಎಂದೇ ಅರ್ಥ~ ಎನ್ನುತ್ತಾರೆ ತೊರವಿ ಗಲ್ಲಿಯ ಮೋಹನ ಪ್ರಿಂಟಿಂಗ್ ಪ್ರೆಸ್ ಮಾಲೀಕ ಅಬ್ದುಲ್ ಸಮಿ.

`ತೊರವಿ ಗಲ್ಲಿಯ ಪಾಲಿಕೆಯ ದವಾಖಾನೆಯ ಮೇಲ್ಗಡೆ ಒನ್ ಸೆಂಟರ್ ನಿರ್ಮಿಸಿದರೆ ತೊರವಿ ಗಲ್ಲಿಯ ಜನರಿಗೆ ಅಲ್ಲದೇ ಪತ್ತರಗೋಡ ಗಲ್ಲಿ, ಶಾ ಬಜಾರ, ಮಕಾನದಾರ ಗಲ್ಲಿ ಹಾಗೂ ಸಿಬಿಟಿ ಕಿಲ್ಲೆ ಪ್ರದೇಶಗಳ ಜನರಿಗೂ ಅನುಕೂಲವಾಗುತ್ತದೆ.

ಮುಖ್ಯ ವಾಗಿ ಪಾಲಿಕೆಯ ದವಾಖಾನೆಗೆ ನವೀಕರಣದ ಅಗತ್ಯವಿತ್ತು. ಅದರ ಬಾಗಿಲುಗಳು ತುಕ್ಕು ಹಿಡಿ ದಿದ್ದವು. ನವೀಕರಣದ ಅಗತ್ಯವಿದೆ~ ಎನ್ನುವ ಆಗ್ರಹ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಮಹ್ಮದ್ ಅಸಾದ್ ಅವರದು.

`ಒನ್ ಸೆಂಟರ್ ಆರಂಭಗೊಳ್ಳುವುದರಿಂದ ಬೇರೆ ಬೇರೆ ಕಡೆ ಬಿಲ್ಲುಗಳನ್ನು ಕಟ್ಟುವುದು ನಿಲ್ಲುತ್ತದೆ. ಆದಷ್ಟು ಬೇಗ ಒನ್ ಸೆಂಟರ್ ಆರಂಭವಾಗಲಿ~ ಎನ್ನುವ ಒತ್ತಾಯ ಜಾಫರ್ ಕಾಟೆವಾಡೆ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT