ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಉತ್ತೇಜನಕ್ಕಾಗಿ ಸುಜಲಾ ಯೋಜನೆ

Last Updated 23 ಸೆಪ್ಟೆಂಬರ್ 2013, 7:02 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ತೋಟಗಾರಿಕೆ ವಿಸ್ತರಣೆಗೊಳಿಸಲು ಸುಜಲಾ ಯೋಜನೆ ಆರಂಭಿಸಲಾಗಿದೆ. ಇಲ್ಲಿನ ಶಿವಶಾಂತವೀರ ನಗರದ ಬಿಸರಳ್ಳಿ ಲೇಔಟ್‌ನಲ್ಲಿ  ಯೋಜನಾಧಿಕಾರಿ ಕಚೇರಿ ತೆರೆಯಲಾಗಿದೆ.

ಜಿಲ್ಲೆಯು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸೂಕ್ತವಾದ ಮಣ್ಣು ಮತ್ತು ಹವಾಮಾನ ಹೊಂದಿದ್ದು, ತೋಟಗಾ­ರಿಕೆ ಬೆಳೆಗಳನ್ನು ಬೆಳೆಯಲು ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಜಾರಿ­ಯಾದ ಮೊದಲ ಹಂತದ ಸುಜಲಾ ಯೋಜನೆಯು ಜಿಲ್ಲೆಯಲ್ಲಿ ಯಶಸ್ವಿ­ಯಾಗಿ ಅನುಷ್ಠಾನಗೊಂಡ ಹಿನ್ನೆಲೆ­ಯಲ್ಲಿ ಸುಜಲಾ-3 ಕೆಡಬ್ಲ್ಯೂಡಿಪಿ-–2ನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ತೋಟಗಾರಿಕೆ ಇಲಾಖೆಯು ಇತರ ಇಲಾಖೆಗಳ ಯೋಜನೆಗಳ ಜತೆ ಈ ಯೋಜನೆ  ಜಾರಿಗೆ ತಂದಿದೆ. ರಾಜ್ಯದ 7 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದೆ.

ಯೋಜನೆ ಅಡಿ ಕಾರ್ಯಕ್ರಮಗಳು: ವಾರ್ಷಿಕ, ಬಹುವಾರ್ಷಿಕ ತೋಟಗಾ­ರಿಕೆ ಬೆಳೆ ಪ್ರದೇಶಗಳ ವಿಸ್ತರಣೆ, ಪ್ರಾತ್ಯ­ಕ್ಷಿಕೆ,  ಬೆಳೆ ವೈವಿಧ್ಯ, ಮಣ್ಣು ನೀರು ಸಂರ­ಕ್ಷಣೆ, ಉತ್ಪಾದಕತೆ ಹೆಚ್ಚಳಗೊಳಿಸು­ವುದು, ಉತ್ತಮ ಸಸಿ ಉತ್ಪಾದನೆ, ಪ್ರಯೋಗಾಲಯ ಸ್ಥಾಪನೆ, ಕೊಯ್ಲೋತ್ತರ ನಿರ್ವಹಣೆ, ಮಾರುಕಟ್ಟೆ ಸಂಪರ್ಕ ನೀಡುವುದು ಸೇರಿದೆ.

ಅನುಷ್ಠಾನ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ 38 ನಿಗದಿತ ಕಿರು ಜಲಾನಯನ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ವಿವರ: ಯಲಬುರ್ಗಾ ತಾಲ್ಲೂಕು: ನಿಲೋಗಲ್, ಹುಣಶಿಹಾಳ, ಮುರಡಿ, ವಣಗೇರಿ, ಗುತ್ತುರು, ನೆಲಜೇರಿ, ಬಿಎನ್ ಹಳ್ಳಿ. ಕುಷ್ಟಗಿ ತಾಲ್ಲೂಕು:  ಯಲಬುಣಚಿ, ಬೆನಕನಾಳ, ಮಡಿಕೇರಿ, ಮುದ್ದಟಗಿ, ದೇವಲಾಪುರ, ಕೊಪ್ಪಳ ತಾಲ್ಲೂಕು: ಕೋಡದಾಳ, ಕನಕಾಪೂರ, ಬುಡಶೆಟ್ನಾಳ, ಕಿನ್ನಾಳ, ಹಟ್ಟಿ, ದೇವಲಾಪೂರ, ಚಿಕ್ಕಬಿಡನಾಳ, ಗಂಗಾವತಿ ತಾಲ್ಲೂಕು: ಗುಡದೂರು, ಮಲ್ಲಾಪುರ, ನೀರಲೂಟಿ, ಹಿರೆಖೇಡ, ಹನುಮನಾಳ ಗ್ರಾಮ.

ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಸುಜಲಾ ಯೋಜನಾಧಿಕಾರಿ ಕಚೆೇರಿಯ ದೂರವಾಣಿ ಸಂಖ್ಯೆ: 08539- 220047 ಸಂಪರ್ಕಿಸಬಹುದು ಎಂದು ಯೋಜನಾಧಿಕಾರಿ ಮಹಮ್ಮದ್ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT