ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಚಟುವಟಿಕೆಗೆ ಸಹಾಯಧನ

Last Updated 3 ಜನವರಿ 2014, 10:29 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಚಟುವಟಿಕೆಗಳಿಗೆ ನೀಡುವ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಡಿ 20*4*3 ಅಡಿ ಅಳತೆಯ 8 ತೊಟ್ಟಿಗಳ ಎರೆಹುಳು ಗೊಬ್ಬರ ಘಟಕ, 20*10*6 ಹಾಗೂ 5*5*8 ಅಡಿ ಅಳತೆಯ ಬಯೊಡೈಜೆಸ್ಟರ್ ಘಟಕಗಳ ನಿರ್ಮಾಣಕ್ಕೆ ₨ 30 ಸಾವಿರ ಸಹಾಯಧನ ಕೊಡಲಾಗುತ್ತದೆ.

20*20*3 ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಿಸಲು ಶೇ 50ರಂತೆ ಗರಿಷ್ಠ ₨ 60 ಸಾವಿರ, ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿತ ವಾತಾವರಣದಲ್ಲಿ ಬೆಳೆಯಲು ನಿರ್ಮಿಸಲಾಗುವ ಹಸಿರು ಮನೆಗೆ ಗರಿಷ್ಠ ₨ 4.67 ಲಕ್ಷ ಸಹಾಯಧನ ನೀಡಲಾಗುತ್ತದೆ.

ಜೇನು ಸಾಕಾಣಿಕೆಗೆ ಉತ್ತೇಜಿಸಲು ಪ್ರತಿ ಜೇನು ಕುಟುಂಬ ಹಾಗೂ ಪೆಟ್ಟಿಗೆಗೆ ಶೇ 50ರಂತೆ ₨ 1,500 ಸಹಾಯಧನವನ್ನು ಗರಿಷ್ಠ 50 ಪೆಟ್ಟಿಗೆಗಳಿಗೆ ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ನಿರ್ವಹಣೆಗಾಗಿ ಹಣ್ಣು ತರಕಾರಿಗಳ ಸೂಕ್ತ ಪ್ಯಾಕಿಂಗ್‌ಗಾಗಿ 9*6*3 ಮೋಟರ್ ಅಳತೆಯ ಪ್ಯಾಕ್ ಹೌಸ್ ಘಟಕ ನಿರ್ಮಿಸಲು ₨ 1.5 ಲಕ್ಷ ಸಹಾಯಧನ ನೀಡಲಾಗುತ್ತದೆ. ಈರುಳ್ಳಿ ಶೇಖರಣಾ ಘಟಕಕ್ಕೆ ₨ 50 ಸಾವಿರ, ವೈಜ್ಞಾನಿಕ ರೀತಿಯಲ್ಲಿ ಬಾಳೆಹಣ್ಣು ಮಾಗಿಸುವ ಘಟಕಕ್ಕೆ ₨ 12 ಲಕ್ಷದವರೆಗೆ ಸಹಾಯಧನ ಕೊಡಲಾಗುತ್ತದೆ.

ಪ್ರತಿವರ್ಷ 10 ಮೆಟ್ರಿಕ್ ಟನ್ ಹಣ್ಣು ಮಾಗಿಸುವಂತಿದ್ದರೆ ಗರಿಷ್ಠ ₨ 24 ಸಾವಿರದಂತೆ ಗರಿಷ್ಠ 500 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದ ಘಟಕ ನಿರ್ಮಿಸಲು ಸಹಾಯಧನ ಪಡೆಯಬಹುದು. ಹಣ್ಣು, ತರಕಾರಿ ಮಾರಾಟಗಾರರು ಸ್ಥಿರ–ಚರ ಮಾರಾಟ ಗಾಡಿಯನ್ನು ನಿರ್ಮಿಸಿಕೊಳ್ಳಲು ₨ 15 ಸಾವಿರ ಸಹಾಯಧನ ನೀಡಲಾಗುತ್ತದೆ.

ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಗರಿಷ್ಠ 90ರಷ್ಟು ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯ ರೈತರಿಗೆ ₨ 118 ಲಕ್ಷ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ₨ 45.25 ಲಕ್ಷ ಅನುದಾನ ಮೀಸಲಿಡಲಾಗಿದೆ. ಜಿಲ್ಲೆಯ ತೋಟಗಾರಿಕಾ ಬೆಳೆಗಾರರು ಸಹಾಯಧನ ಸೌಲಭ್ಯಕ್ಕಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸಬೇಕು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಗಿರೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT