ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗದ ಅರ್ಥ ತಿಳಿಸಿದವರು ಲಿಂಗರಾಜರು

Last Updated 11 ಜನವರಿ 2012, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಶಿರಸಂಗಿ ಲಿಂಗರಾಜ ಮಹಾರಾಜರು ಯಾವುದೇ ಸ್ವಾರ್ಥ ಇಲ್ಲದೆ ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣಕ್ಕಾಗಿ ತ್ಯಾಗ ಮಾಡಿದರು. ಈ ಮೂಲಕ ತ್ಯಾಗಕ್ಕೆ ನಿಸ್ವಾರ್ಥ ಇರಬೇಕು ಎನ್ನುವುದನ್ನು ಅವರು ಸಾಬೀತು ಪಡಿಸಿದರು~ ಎಂದು ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಜಗದ್ಗುರು ಗಂಗಾಧರ ಪದವಿ ಹಾಗೂ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರ ಜಯಂತ್ಯುತ್ಸವ ಸಮಾರಂಭ  ಉದ್ಘಾ ಟಿಸಿ ಅವರು ಮಾತನಾಡಿದರು.

`150 ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆಗ ಶಿಕ್ಷಣ ಕನಸಾಗಿತ್ತು. ಇಂಥ ಸಂದರ್ಭ ದಲ್ಲಿ ಸವಣೂರು ತಾಲ್ಲೂಕಿನ ಶಿಗ್ಲಿಯಲ್ಲಿ ಜನಿಸಿದ ಲಿಂಗರಾಜರು ಹೆಚ್ಚು ಶಿಕ್ಷಣ ಪಡೆಯಲಿಲ್ಲ. ನಂತರ ಶಿರಸಂಗಿಯ ಅಧಿ ಪತಿಯಾದರು. ತಮಗೆ ಮಕ್ಕಳಾಗಿಲ್ಲವೆಂದು ಕೊರಗದೆ, ದತ್ತು ಪುತ್ರರನ್ನು ಪಡೆಯಲಿಲ್ಲ. ಮೃತ್ಯುಪತ್ರವನ್ನು ಬರೆ ದಿಟ್ಟರು. ಅದು ಮೃತ್ಯುಪತ್ರವಾಗದೆ ದಾನಪತ್ರವಾಯಿತು.
 
ಈ ನಾಡಿನ ವಿದ್ಯಾ ರ್ಥಿಗಳು ಶಿಕ್ಷಣ ಪಡೆಯಲು ಅನುಕೂಲ ಆಗ ಬೇಕೆನ್ನುವ ಸಲುವಾಗಿ ತಮ್ಮ ಸಮಸ್ತ ಆಸ್ತಿಯನ್ನು ದಾನ ಮಾಡಿದರು. ನಂತರ ಕೆಎಲ್‌ಇ ಸಂಸ್ಥೆಯು ಅವರ ಆಸ್ತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಸದ್ವಿ ನಿಯೋಗಪ ಡಿಸಿಕೊಂಡಿತು~ ಎಂದು ಅವರು ವಿವರಿಸಿದರು.

`ಲಿಂಗರಾಜ ಮಹಾರಾಜರ ತ್ಯಾಗವನ್ನು ಅರಿಯದೆ ಈಗ ಹಣ ಗಳಿ ಸುವುದೇ ಶಿಕ್ಷಣ ಸಂಸ್ಥೆಗಳ ಉದ್ದೇಶ ವಾಗಿದೆ. ಜೊತೆಗೆ ಪದವಿ ಪಡೆದು ಹಣ ಸಂಪಾದನೆಗೆ ಶಿಕ್ಷಣ ಪಡೆಯ ಲಾಗುತ್ತಿದೆ. ಆದರೆ ಉದಾತ್ತವಾದ, ಉನ್ನತವಾದ, ಮೌಲ್ಯಯುತವಾದ ಹಾಗೂ ನೈತಿಕತೆ ಕಲಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ~ ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಡಿ. ಮುಳಗುಂದ, ಶಿಕ್ಷಣಕ್ಕಾಗಿ ಆಸ್ತಿಯನ್ನು ತ್ಯಾಗ ಮಾಡಿ ಲಿಂಗರಾಜರು ವೀರ ರಾದರು. ಅವರ ಮಾನವೀಯ ಮೌಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಉಪಾಧ್ಯಕ್ಷ ಡಾ.ಜಿ.ಬಿ. ಬಳಿಗಾರ ಹಾಜರಿದ್ದರು. ವರದಾ ಕುಲಕರ್ಣಿ ವಚನ ಹಾಡಿದರು. ಪ್ರೊ.ಎಸ್.ಎ. ಗಣಿ ಸ್ವಾಗತಿಸಿದರು. ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಸಿ.ಎನ್. ಪಾಟೀಲ ಅತಿಥಿಗಳನ್ನು ಪರಿಚ ಯಿಸಿದರು. ಪಿ.ಯು. ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಅಶ್ವಿನಿ ಹೂವಿನವರ ವಂದಿಸಿದರು. ಲತಾ ಮಟ್ಟಿ ನಿರೂಪಿಸಿದರು.

`ಲಿಂಗರಾಜರ ಆದರ್ಶ ಮಾದರಿ~
ಹುಬ್ಬಳ್ಳಿ:
`ಶಿರಸಂಗಿ ಲಿಂಗರಾಜರ ದಾನ ಗುಣ ಹಾಗೂ ಆದರ್ಶತತ್ವಗಳು ಮಾದರಿ. ಅವುಗಳನ್ನು ನಮ್ಮ ಜೀವ ನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಸಂಚಾಲಕ ನಿರಂಜನ ವಾಲಿಶೆಟ್ಟರ ಸಲಹೆ ನೀಡಿದರು.

ಕೆಎಲ್‌ಇ ಸಂಸ್ಥೆಯ ನಗರದ ಕಾಡಸಿ ದ್ಧೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ತ್ಯಾಗವೀರ ಶಿರ ಸಂಗಿ ಲಿಂಗರಾಜರ 151ನೇ ಜಯಂತಿ ಅಂಗವಾಗಿ ಮಂಗಳವಾರ ಏರ್ಪಡಿಸಿದ ಅಂತರಕಾಲೇಜು ವಚನ ಗಾಯನ ಸ್ಪರ್ಧೆಯ ನಂತರ ಅವರು ಮಾತ ನಾಡಿದರು.

ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾ ಧ್ಯಕ್ಷ ಸಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯ ಡಾ. ದೀನ ಬಂಧು ಹಳ್ಳಿಕೇರಿ ವೇದಿಕೆ ಮೇಲಿದ್ದರು. ಮಂಜುನಾಥ ಹೊಸಮನಿ ಪ್ರಾರ್ಥಿ ಸಿದರು. ಪ್ರಾಚಾರ್ಯರಾದ ಶ್ರೀಮತಿ ವಿ.ಎಂ. ಕಿಣಗಿ ಸ್ವಾಗತಿಸಿದರು. ಡಾ.ಬಿ.ಡಿ. ಹುದ್ದಾರ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಜಿ. ಪಾಟೀಲ ಅತಿಥಿಗಳನ್ನು ಪರಿ ಚಯಿಸಿ ದರು. ಡಾ.ಆರ್.ಎಫ್. ಇಂಚಲ ವಂದಿ ಸಿದರು. ಡಾ.ವಿಜಯಶ್ರೀ ಹಿರೇಮಠ ಹಾಗೂ ಬಿ.ಎಸ್. ಮಾಳವಾಡ ಕಾರ್ಯ ಕ್ರಮ ನಿರೂಪಿಸಿದರು.

ಫಲಿತಾಂಶ: ಅಂತರಕಾಲೇಜು ವಚನ ಗಾಯನ ಸ್ಪರ್ಧೆಯಲ್ಲಿ ಆದರ್ಶ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಕೇಶವ ರಾವ್ ಪ್ರಥಮ ಬಹುಮಾನ ಪಡೆದರು. ಅವರಿಗೆ ರೂ. 500 ನಗದು ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪಾರಿತೋಷಕ ನೀಡ ಲಾಯಿತು.
 
ಧಾರವಾಡದ ಸಿಎಸ್‌ಐ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಎಸ್. ಗಾಂವಕರ ಅವರಿಗೆ ದ್ವಿತೀಯ ಬಹು ಮಾನವೆಂದು ರೂ. 300 ನಗದು, ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ವರದಾ ಕುಲಕರ್ಣಿಗೆ ರೂ. 200 ನಗದು ಹಾಗೂ ಕಾಡಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿನಿ ಚೇತನಾ ಗಡದ ಅವರಿಗೆ ಅವರಿಗೆ ಸಮಾಧಾನಕರ ಬಹುಮಾನವೆಂದು ರೂ. 100 ನಗದು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT