ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಅರಳಿ ಪೀಠವಾಗಿ...

Last Updated 31 ಜುಲೈ 2013, 19:59 IST
ಅಕ್ಷರ ಗಾತ್ರ

ವಿದ್ಯಾರ್ಥಿ ಮಟ್ಟದಲ್ಲೇ ಪರಿಸರ ಕಾಳಜಿ ಮೂಡಿಸಲು ಸರ್ಕಾರ ಪಠ್ಯಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ದಿನಗಳಲ್ಲಿ ಒಳಾಂಗಣ ವಿನ್ಯಾಸ ಪದವಿ ವಿದ್ಯಾರ್ಥಿಗಳು ನಮ್ಮ ನಡುವಿನ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಗೃಹೋಪಯೋಗಿ ವಸ್ತುಗಳನ್ನು ಮಾಡಿದ್ದಾರೆ. ಹಳೆ ಟ್ಯೂಬನ್ನು ಬಳಸಿ ನೀರು ಬಿದ್ದರೂ ಹಾಳಾಗದಂತೆ ವಿನ್ಯಾಸ ಮಾಡಿ ಗಮನ ಸೆಳೆದಿದ್ದಾರೆ.

ಬಳಸಿ ಬಿಟ್ಟ ವಸ್ತುಗಳನ್ನು ಮರುಬಳಕೆ ಮಾಡಿ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಿದವರು ವೋಗ್ ಫ್ಯಾಷನ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು. ಉಪನ್ಯಾಸಕಿ ಅರುಂಧತಿ, ಧನ್ಯಾ ಅವರ ಮಾರ್ಗದರ್ಶನದಲ್ಲಿ ಇವರು ಒಂದು ವಾರದ ಸಮಯದಲ್ಲಿ ಐದು ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ್ದಾರೆ.

ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅನುಷಾ, ತಾನ್ಯ, ಸಮೀಕ್ಷಾ ಹಾಗೂ ಅಬ್ದುಲ್ ಷಬೂರ್ ಅವರು ಬಹುಪಯೋಗಿ ಪೀಠೋಪಕರಣಗಳು, ಮಂಚ, ಕುರ್ಚಿ ಹಾಗೂ ಎರಡು ಮೇಜುಗಳನ್ನು ನಿರ್ಮಿಸಿದ್ದಾರೆ. `ಹಳೆ ರಟ್ಟಿನ ಬಾಕ್ಸ್, ಬಳಸಿ ಬಿಸಾಡಿದ ಟ್ಯೂಬ್, ಬಿದಿರು ಬಳಸಿಕೊಂಡು ಗೃಹೋಪಯೋಗಿ ಉತ್ಪನ್ನಗಳನ್ನು ಸಿದ್ಧಪಡಿಸಿದ್ದೇವೆ.

ನಗರದಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಬಳಸಿ ಬಿಸಾಕುವ ಇಂಥ ವಸ್ತುಗಳನ್ನು ಉಪಯೋಗಿಸಿಕೊಂಡರೆ ಪರಿಸರಕ್ಕೂ ಒಳ್ಳೆಯದಾಗುತ್ತದೆ. ಇವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದ್ದು, ತಯಾರಿಕೆ ವೆಚ್ಚವೂ ಕಡಿಮೆಯಾಗಿದೆ. ಇವುಗಳಿಂದ ಮನೆ ಸೌಂದರ್ಯವೂ ಇಮ್ಮಡಿಸುತ್ತದೆ' ಎಂದು ಹೇಳುತ್ತಾರೆ ವಿದ್ಯಾರ್ಥಿ ಅನುಷಾ.

ಈ ಆಕರ್ಷಕ ಉತ್ಪನ್ನಗಳಿಗೆ ಬಿಳಿ ಬಣ್ಣವನ್ನು ಲೇಪಿಸಿ ಅವುಗಳ ಮೇಲೆ ಚಿತ್ರಗಳನ್ನೂ ಬಿಡಿಸಿದ್ದಾರೆ. ಒಂದು ವಾರದ ಸಮಯದಲ್ಲಿ ಸಿದ್ಧಪಡಿಸಿರುವ ಉತ್ಪನ್ನಗಳನ್ನು ಕಾಲೇಜಿನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT