ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿಗೆ ನಗರಸಭೆ ಕ್ರಮ: ಬೆಂಕಿ ಹಾಕಿ!

Last Updated 7 ಫೆಬ್ರುವರಿ 2011, 10:40 IST
ಅಕ್ಷರ ಗಾತ್ರ

ಮಂಡ್ಯ: ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಏನು? ನಗರ ಸಭೆಯ ಸಿಬ್ಬಂದಿ ಅನಧಿಕೃತ ವಾಗಿ ಪಾಲಿಸಿ ಕೊಂಡಿರುವ ಕ್ರಮದ ಪ್ರಕಾರ, ಬೆಂಕಿ ಹಾಕೋದು! ದೇಶದಲ್ಲಿಯೇ 4ನೇ ಉತ್ತಮ ನಗರ (?) ಎಂಬ ಹೆಸರಿಗೆ ಪಾತ್ರವಾದ ಮಂಡ್ಯದಲ್ಲಿ ಇಂಥದೊಂದು ಪದ್ಧತಿ ಜಾರಿಯಲ್ಲಿದೆ.

ಒಂದು ಕಡೆ ನಗರಭೆಯು ಕಸ ವಿಲೇವಾರಿ ಕಾರ್ಯಕ್ಕಾಗಿಯೇ ಸಾವಿ ರಾರು ರೂಪಾಯಿ ವ್ಯಯ ಮಾಡಿದರೆ, ಇನ್ನೊಂದು ಕಡೆ ಕೆಲ ಸಿಬ್ಬಂದಿ ಕಸದ ತೊಟ್ಟಿಗಳಲ್ಲಿಯೇ ಬೆಂಕಿ ಹಾಕುವ ಮೂಲಕ ಕೆಲಸ ಹಗುರ ಮಾಡಿ ಕೊಂಡಿದ್ದಾರೆ.

ಆದರೆ, ಇದು ಇನ್ನೊಂದು ಕಡೆ ಗೊತ್ತಿಲ್ಲದೇ ವಾತಾವರಣ, ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದ್ದು, ಪರಿಸರ ರಕ್ಷಣೆಗೆ  ಕ್ರಮ ಕೈಗೊಳ್ಳ ಬೇಕಾದ ನಗರಸಭೆ ಅಧಿಕಾರಿಗಳೇ ಇಂಥ ಕಾರ್ಯದ ಬಗೆಗೆ ಕಂಡು ಕಾಣ ದಂತೆ ಇರುವ ಮೂಲಕ ಪರೋಕ್ಷ ವಾಗಿ ಬೆಂಬಲವನ್ನು ನೀಡುತ್ತಿದ್ದಾರೆ.

ನಗರದಲ್ಲಿ ಅಲ್ಲಲ್ಲಿ ಇಟ್ಟಿರುವ ಕಸದ ತೊಟ್ಟಿಗಳಲ್ಲಿ ಭರ್ತಿಯಾದ ಹಾಗೂ ರಸ್ತೆಯಲ್ಲಿಯೇ ಬಿದ್ದಿರುವ ಕಸದ ರಾಶಿಗೆ ಬೆಂಕಿ ಹಾಕಿರುವ, ಇದರಿಂದ ದಿನಪೂರ್ತಿ ಹೊಗೆ ವಾತಾವರಣವನ್ನು ಸೇರುತ್ತಿದೆ. ಜನರು ಇಂಥ ಸಂದರ್ಭ ಮೂಗು ಮುಚ್ಚಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಕಸ, ತ್ಯಾಜ್ಯದಲ್ಲಿ ಪ್ಲಾಸ್ಟಿಕ್, ಹಳೆಯ ಬಟ್ಟೆ, ಕೊಳೆತ ವಸ್ತು ಎಲ್ಲವೂ ಸೇರುವ ಕಾರಣ, ಇದನ್ನು ಸುಡುವುದರಿಂದ ವಾತಾವರಣದಲ್ಲಿನ ಆಮ್ಲಜನಕ ಮಲೀನವಾಗಲಿದೆ. ಇದು, ನೇರ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಅಸ್ತಮಾ, ಹೃದ್ರೋಗದಂಥ ಸಮಸ್ಯೆಗಳು ಕಾಡುತ್ತವೆ.

ಪ್ಲಾಸ್ಟಿಕ್ ಮತ್ತಿತರ ವಸ್ತುಗಳಿಗೆ ಬೆಂಕಿ ಹಾಕುವುದರಿಂದ ಆಗುವ ನಕಾರಾತ್ಮಕ ಪರಿಣಾಮಗಳ ಬಗೆಗೆ ‘ನೆಟ್’ಗೆ ಕುಳಿತು ಜಾಲಾಡಿದರೆ, ಪ್ಲಾಸ್ಟಿಕ್ ಸುಡುವುದರಿಂದ ಕ್ಲೋರಿನ್, ಬ್ರೊಮೈನ್ ಬಿಡುಗಡೆ ಆಗಲಿದ್ದು, ಓಜೋನ್ ಪದರ ಹಾನಿ ಯಾಗಲಿದೆ ಎಂಬ ಮಾಹಿತಿ ಸಿಗಲಿದೆ.

ನೈಟ್ರೋಜನ್, ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಡೈಯಾಕ್ಸಿನ್ ಪ್ರಮಾಣಗಳು ವಾತಾವರಣವನ್ನು ಸೇರಲಿದ್ದು, ಉಸಿರಾಡುವ ಗಾಳಿ ದಿನೇ ದಿನೇ ಮಲೀನ ಆಗಲಿದೆ. ಸದ್ಯ ಒಳಜಗಳದಲ್ಲಿ ನಿರತ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದ ಜೆಡಿಎಸ್ ಸದಸ್ಯರಿಗೆ ಇತ್ತ ಗಮನಹರಿಸುವಷ್ಟು ಬಿಡುವಿಲ್ಲ.

ನಗರಸಭೆಯ ಮಾಹಿತಿ ಅನುಸಾರ, ತ್ಯಾಜ್ಯ ವಿಲೇವಾರಿ ಉದ್ದೇಶದ ನಿರ್ಮಲ ನಗರ ವಾಹನ ಬಾಡಿಗೆ ಯಾಗಿ ಕಳೆದ ಸೆಪ್ಟೆಂಬರ್ ತಿಂಗಳು 14,697 ರೂ.; ನವೆಂಬರ್‌ನಲ್ಲಿ 44,709 ರೂ.,  ಡಿಸೆಂಬರ್‌ನಲ್ಲಿ 39,600 ರೂ. ವೆಚ್ಚ ಮಾಡಿದೆ.

ಈ ನಡುವೆ, ನಗರಸಭೆಯು ನಗರದಲ್ಲಿ 20 ಮೈಕ್ರಾನ್‌ಗಿಂತ ಕಡಿಮೆ ಇರುವ ವಿವಿಧ ರೀತಿಯ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ತೀರ್ಮಾನಿಸಿದೆ. ಅದಕ್ಕೆ ಮುನ್ನ ಸ್ಥಾಯಿ ಸಮಿತಿ ಮತ್ತು ಪರಿಸರ ರಕ್ಷಣೆ ಕುರಿತು ಕರೆ ನೀಡುವ ಅಧಿಕಾರಿಗಳು ಪ್ಲಾಸ್ಟಿಕ್ ಸುಡುವುವುದನ್ನು ತಡೆಯುವತ್ತ ಗಮನಹರಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT