ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವೇಣಿ ಪತಿ ಪ್ರೊ.ಎಸ್.ಎನ್.ಶಂಕರ್ ನಿಧನ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಹೆಸರಾಂತ ಕಾದಂಬರಿಗಾರ್ತಿ ತ್ರಿವೇಣಿ ಅವರ ಪತಿ ಪ್ರೊ. ಎಸ್.ಎನ್.ಶಂಕರ್ (87) ಶುಕ್ರವಾರ ಮಧ್ಯಾಹ್ನ ನಿಧನರಾದರು. ಇವರಿಗೆ ಪುತ್ರಿ ಮೀರಾ, ಇಬ್ಬರು ಮೊಮ್ಮಕ್ಕಳು ಇದ್ದಾರೆ.

1963 ರಲ್ಲಿ ತ್ರಿವೇಣಿ ಅವರು ಕಾಲವಾದ ನಂತರ ನಗರದ ಚಾಮರಾಜಪುರಂ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇವರು ನೆಲೆಸಿದ್ದರು. ಮೀರಾ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಮೊಮ್ಮಕ್ಕಳು ವಿದೇಶದಲ್ಲಿದ್ದಾರೆ. ಶಾರದಾ ವಿಲಾಸ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇವರು ನಿವೃತ್ತರಾಗಿದ್ದರು.

ನಂಜನಗೂಡಿನ ಸಂಪಿಗೆ ನಾರಾಯಣ ರಾವ್ ಅವರ ಪುತ್ರರಾದ ಇವರು ಶಾರದಾ ವಿಲಾಸ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಕ್ರೀಡಾ ಪ್ರೇಮಿಯಾಗಿದ್ದ ಇವರು ನಗರದ ಕಾಸ್ಮೊಪಾಲಿಟಿನ್ ಕ್ಲಬ್‌ನಲ್ಲಿ ಟೆನಿಸ್ ಆಟವಾಡುತ್ತಿದ್ದರು. ಟೆನಿಸ್ ಪಂದ್ಯ ವೀಕ್ಷಿಸಲು ವಿಂಬಲ್ಡನ್‌ಗೆ ನಾಲ್ಕು ಬಾರಿ ಹೋಗಿದ್ದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಜೀವ ಸದಸ್ಯತ್ವ ಪಡೆದಿದ್ದರು. ಅಲ್ಲದೆ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಪತ್ನಿ ತ್ರಿವೇಣಿ ಅವರ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಅದನ್ನು ಪ್ರಕಟಣೆ ಮಾಡಲು ಪ್ರಕಾಶಕರೊಂದಿಗೆ ಮಾತುಕತೆ ನಡೆಸಿದ್ದರು.

ತ್ರಿವೇಣಿ ಅವರ ಕಾದಂಬರಿಗಳನ್ನು ಆಧರಿಸಿ ಶರಪಂಜರ, ಬೆಳ್ಳಿ ಮೋಡ, ಹಣ್ಣೆಲೆ ಚಿಗುರಿದಾಗ ಚಲನಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ಮಿಸಿದ್ದರು. `ಅವಳ ಕಣ್ಣು~ ಕಾದಂಬರಿ ಮಲಯಾಳಂನಲ್ಲಿ `ಪೂತಿ ಕಣ್ಣು~ ಹೆಸರಿನ ಚಲಚಿತ್ರವಾಗಿತ್ತು. ಮೃತರ ಅಂತ್ಯಕ್ರಿಯೆ ಶನಿವಾರ (ಅ.20) ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT