ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್: ಕೇಂದ್ರ ಕಚೇರಿಗೆ ಮುತ್ತಿಗೆ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ಪೊಲೀಸರು ಬಿಗಿಭದ್ರತೆ ಸಡಿಲಿಸಿದ್ದರಿಂದ ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲುಕ್‌ ಶಿನವಾತ್ರ ರಾಜೀನಾಮೆಗೆ ಒತ್ತಾಯಿ­ಸು­­ತ್ತಿರುವ ಪ್ರತಿ­ಭಟನಾ­ಕಾರರು ಮಂಗಳವಾರ ಸರ್ಕಾರದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವಲ್ಲಿ ಯಶಸ್ವಿಯಾದರು.

ಇದೇ ವೇಳೆ, ಮೂರು ದಿನಗಳಲ್ಲಿ ನಾಲ್ಕು ಜನರನ್ನು ಬಲಿ ತೆಗೆದು­ಕೊಂಡಿರುವ ಪ್ರತಿಭಟನೆಯ ಉದ್ವಿಗ್ವತೆಯೂ ಕಡಿಮೆಯಾಗಿದೆ. ಸರ್ಕಾರದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿ­ಸುತ್ತಿರುವ­ವರ ವಿರುದ್ಧ ಬಲ ಪ್ರಯೋಗಿಸುವುದಿ­ಲ್ಲ­ವೆಂದು ಸ್ಪಷ್ಟಪಡಿಸಿದ ಪೊಲೀಸರು ಬ್ಯಾರಿಕೇಡ್‌­ಗಳನ್ನು ತೆಗೆಯುತ್ತಿ­ದ್ದಂತೆಯೇ ನೂರಾರು ಪ್ರತಿಭಟನಾ­ಕಾರರು ಕಚೇರಿ ಆವರಣದ ಹುಲ್ಲು­ಹಾಸಿನ ಮೇಲೆ ಜಮಾಯಿಸಿದರು.

ಗುರುವಾರ ರಾಷ್ಟ್ರದ ದೊರೆ ಭೂಮಿಬಲ್‌ ಅದುಲ್ಯ­ದೇಜ್‌ ಅವರ 86ನೇ ಹುಟ್ಟುಹಬ್ಬದ ದಿನವಾಗಿದ್ದು, ಪೊಲೀಸರು ಭದ್ರತೆ ಸಡಿಲಿಸಲು ಇದೇ ಕಾರಣವೆನ್ನಲಾಗಿದೆ. ಥಾಯ್ಲೆಂಡ್‌ನಲ್ಲಿ ದೊರೆ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರನ್ನು ರಾಷ್ಟ್ರದ ಏಕತೆಯ ಪ್ರತೀಕ­ವೆಂದು ನೋಡಲಾಗುತ್ತದೆ. ಅವರ ಜನ್ಮ ಜಯಂತಿವನ್ನು ಸಾಂಪ್ರದಾಯಿಕ­ವಾಗಿ ಪ್ರಾರ್ಥನೆ ಮತ್ತು ಸಡಗರದ ದಿನವಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿಭಟನಾಕಾರರು ಈ ವೇಳೆ ಚಳವಳಿ ಮುಂದುವರಿಸುವ ಸಾಧ್ಯತೆ ಇಲ್ಲವೆನ್ನಲಾಗಿದೆ.

ಪ್ರತಿಭಟನಾಕಾರರ ನೇತೃತ್ವ ವಹಿಸಿ­ರುವ ಸುಥೆಪ್‌ ತಾಗ್ಸುಬಾನ್‌ ಅವರು, ‘ಸರ್ಕಾರವನ್ನು ಕೆಳಕ್ಕಿಳಿ­ಸುವ ಹೋರಾಟ ಇನ್ನೂ ಕೊನೆಗೊಂಡಿಲ್ಲ’ ಎಂದಿದ್ದಾರೆ.
ಈ ಮಧ್ಯೆ ಸೇನಾ ಮುಖ್ಯಸ್ಥ ಜನರಲ್‌ ಪ್ರಯೂಥ್‌ ಚನೋಚ ಅವರು, ಸರ್ಕಾರದ ಕೇಂದ್ರ ಕಚೇರಿಯ ಆವರಣದಿಂದ ಹೊರ ಹೋಗುವಂತೆ ಪ್ರತಿಭಟನಾಕಾ­ರರಿಗೆ ಸೂಚಿಸಿದ್ದು, ಸರ್ಕಾರದ ಕಟ್ಟಡಗಳು ರಾಷ್ಟ್ರದ ಆಸ್ತಿಯಾಗಿದ್ದು, ಪ್ರತಿಭಟನಾಕಾರು ಅವುಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT